ನ್ಯಾಯಾಲಯ ನೀಡಿದ ಶ್ರೀಶಿರೂರು ಮಠದ ತೀರ್ಪನ್ನು ಹೃದಯತುಂಬಿ ಅಭಿನಂದಿಸುತೇವೆ~ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು. ಶ್ರೀ ಪಲಿಮಾರು ಮಠ.

ಕರ್ನಾಟಕದ ಉಚ್ಚ ನ್ಯಾಯಾಲಯವು ಉಡುಪಿಯ ಶ್ರೀಕೃಷ್ಣನ ಆರಾಧನೆ ಮಾಡುವಂತಹ ಪರಮಹಂಸ ಸನ್ಯಾಸಿಗಳ ಸನ್ಯಾಸಾಶ್ರಮವನ್ನುವಿಶ್ಲೇಷಣೆ ಮಾಡಿ, ತನ್ನ ಸೂಕ್ತವಾದ ತೀರ್ಮಾನ ವನ್ನು ನೀಡಿದೆ.

ಸನ್ಯಾಸ ಎನ್ನುವಂಥದ್ದು ಬಾಹ್ಯ ವಿಡಂಬನೆ ಅಲ್ಲ. ಅದು ಆಂತರಿಕ ತುಡಿತ.  “ಯದ್ ಅಹರೇವ ವಿಹರೇತ್ ತದ್ ಅಹರೇವ ಪ್ರವರ್ಜೇತ್” ಎಂಬ ವೈದಿಕ ವಚನಕ್ಕನುಗುಣವಾಗಿ, ಶ್ರೀಮಧ್ವಾ ಚಾರ್ಯರ  ಜೀವನ ಚರಿತ್ರೆಯನ್ನು  ಸಮರ್ಥವಾಗಿ ನಿರೂಪಿಸಿದ ಶ್ರೀನಾರಾಯಣ ಪಂಡಿತಾ ಚಾರ್ಯರು ಶ್ರೀಮಧ್ವವಿಜಯದಲ್ಲಿ “ಯದಾ ವಿರಕ್ತ ಪುರುಷ ಪ್ರಜಾಯತೇ ತದೈವ ಸನ್ಯಾಸವಿಧಿ: ಶೃ  ಶ್ರುತ:” ಎಂಬುದಾಗಿ ತಿಳಿಸಿದ್ದಾರೆ. 

ಬಾಲಸಂನ್ಯಾಸದಿಂದ ಎತ್ತರಕ್ಕೇರಿದವರು ಇದ್ದಾರೆ ಹಾಗೆಯೇ ಅದಃಪತನಕ್ಕೇ ಒಳಗಾದವರು ಇದ್ದಾರೆ. ಅದೇ ರೀತಿ ಗ್ರಹಸ್ಥ ಸನ್ಯಾಸದಿಂದ ಉದ್ದಾರ ಆದವರ ಹಾಗೆ ಕೆಳಗಿಳಿದವರೂ ಇದ್ದಾರೆ. ಹಾಗಾಗಿ ಇದೆಲ್ಲವನ್ನು ಇಟ್ಟುಕೊಂಡು ಶ್ರೀ ನಾರಾಯಣ ಪಂಡಿತಾಚಾರ್ಯರು ಸನ್ಯಾಸದ ಬಗ್ಗೆ ತಮ್ಮ ಉತ್ತಮ ವಿಶ್ಲೇಷಣೆಯನ್ನು ನೀಡಿದ್ದಾರೆ. ಇದು ಸಾರ್ವಕಾಲಿಕವೂ ಹೌದು. 
ಇಲ್ಲಿ ಹೇಳುವ ಸನ್ಯಾಸ ಧರ್ಮ ಅಂದರೆ ವಯಸ್ಸಿನ ಕುರಿತು ಆಲ್ಲ. ಸನ್ಯಾಸ ಎಂಬುದು ಮನಸ್ಸಿನ ಧರ್ಮವನ್ನು ಹೇಳಿದೆ. ವಿರಕ್ತಿ ಇದ್ದು ಸಂನ್ಯಾಸದಲ್ಲಿ ಆಸಕ್ತಿ ಇದ್ದರೆ, ಅದಕ್ಕೆ ಅರ್ಹ ನಾಗುತ್ತಾನೆ. ಹಾಗಾಗಿ  ಉತ್ತಮ ಮನೆತನ, ಶುದ್ಧಚಾರಿತ್ರ್ಯದ, ವಿವಾಹ ಆಗದ, ವಿರಕ್ತನಾದ, ಪ್ರಬುದ್ಧ ವಟುವಿಗೆ ಸನ್ಯಾಸವನ್ನು ನೀಡಿ, ಶ್ರೀಕೃಷ್ಣಪೂಜಾ ಪುರಸ್ಸರ ಪಾಠ ಪ್ರವಚನವನ್ನು ನಡೆಸುವ ಸತ್ಸಂಪ್ರದಾಯ ಉಡುಪಿಯಲ್ಲಿ ಅನೂಚಾನವಾಗಿ ಪಾಲಿತವಾಗಿದೆ.

ಇದನ್ನೇ ವಿಶ್ಲೇಷಿಸಿ ನ್ಯಾಯಾಲಯ ವಯಸ್ಸನ್ನು  ಉಲ್ಲೇಖಿಸದೆ ಮನಸ್ಸಿನ ತುಡಿತವನ್ನು ತಿಳಿಸ ತಕ್ಕಂತಹ ಸನ್ಯಾಸಧರ್ಮವನ್ನು ಎತ್ತಿಹಿಡಿದಿದೆ. ಈ ಕುರಿತಾಗಿ ನ್ಯಾಯಾಲಯ ನೀಡಿದ ಶ್ರೀಶಿರೂರು ಮಠದ ತೀರ್ಪನ್ನು ಹೃದಯತುಂಬಿ ಅಭಿನಂದಿಸುತೇವೆ.

 
 
 
 
 
 
 
 
 
 
 

Leave a Reply