ಏರ್‌ಇಂಡಿಯಾ: ಬೋಯಿಂಗ್‌‌ ,ಏರ್‌ಬಸ್‌ ಗಳಿಂದ 500 ವಿಮಾನ ಖರೀದಿ!

ಭಾರತದ ಹೆಮ್ಮೆಯ ವಿಮಾನಯಾನ ಸಂಸ್ಥೆಯಾದ ಏರ್‌ಇಂಡಿಯಾ ಇದೀಗ ಹೊಸತಾಗಿ ವಿಮಾನಗಳ ಖರೀದಿಗೆ ವಿಮಾನ ತಯಾರಕರೊಂದಿಗೆ ಭರ್ಜರಿ ಡೀಲ್‌ ಮಾಡಿಕೊಂಡಿದೆ. ವಿಮಾನ ತಯಾರಕ ಕಂಪನಿಗಳಾದ ಬೋಯಿಂಗ್‌ ಮತ್ತು ಏರ್‌ಬಸ್‌ ಸಂಸ್ಥೆಗಳಿಂದ 500 ವಿಮಾನಗಳ ಖರೀದಿಗೆ ಏರ್‌ಇಂಡಿಯಾವು ಮುಂದಾಗಿದೆ.

ಸುದ್ದಿ ಸಂಸ್ಥೆ ರಾಯೀಟರ್ಸ್‌ ವರದಿ ಮಾಡಿರುವ ಪ್ರಕಾರ ಬರೋಬ್ಬರಿ 100 ಬಿಲಿಯನ್‌ ಡಾಲರುಗಳ ವೆಚ್ಚದಲ್ಲಿ ಈ ಖರೀದಿ ನಡೆಯಲಿದೆ. ಇವುಗಳಲ್ಲಿ 250 ಏರ್‌ಬಸ್ ವಿಮಾನಗಳನ್ನು ಖರೀದಿಸಲು ಏರ್‌ ಇಂಡಿಯಾ ಸಮ್ಮತಿಸಿದೆ. ಇದಲ್ಲದೇ 220 ಬೋಯಿಂಗ್ ವಿಮಾನಗಳನ್ನು ಏರ್‌ ಇಂಡಿಯಾ ಖರೀದಿಸಲಿದೆ.

ಸರ್ಖಾರಿ ಸ್ವಾಮ್ಯದಲ್ಲಿದ್ದ ಏರ್‌ಇಂಡಿಯಾವು ಟಾಟಾ ಸಮೂಹದ ತೆಕ್ಕೆಗೆ ಬಂದ ನಂತರ ಏರ್‌ ಇಂಡಿಯಾವು ವ್ಯಾಪಕವಾಗಿ ಬೆಳವಣಿಗೆಯಾಗಲು ಮುಂದಾಗಿದ್ದು ಅದರ ಭಾಗವಾಗಿ ಈ ಖರೀದಿ ಒಪ್ಪಂದ ಏರ್ಪಟ್ಟಿದೆ.

 
 
 
 
 
 
 
 
 
 
 

Leave a Reply