ಮಹಿಳೆಯರ ಸುರಕ್ಷತೆ ದೇಶದ ಹೊಣೆ : ವೆಲ್ಫೇರ್ ಪಾರ್ಟಿ ಮಹಿಳಾ ಘಟಕದ ವತಿಯಿಂದ ಅಭಿಯಾನ

ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ವಿರುದ್ಧ ವೆಲ್ಫೇರ್ ಪಾರ್ಟಿ ಮಹಿಳಾ ವಿಭಾಗದ ವತಿಯಿಂದ ರಾಜ್ಯವ್ಯಾಪಿ ಅಭಿಯಾನ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ. ಈ ಅಭಿಯಾನವು ಸೆ. 12 ರಿಂದ 19, 2021 ರ ತನಕ ನಡೆಯಲಿರುವುದು. ಮಹಿಳೆಯರ ಸುರಕ್ಷತೆ – ದೇಶದ ಹೊಣೆ ಎಂಬ ಶೀರ್ಷಿಕೆಯಡಿ ಅಭಿಯಾನ ನಡೆಯಲಿದೆ.

ಸರಕಾರಿ ಅಂಕಿ ಅಂಶ ಪ್ರಕಾರ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರದಲ್ಲಿ ಕೇವಲ ಒಂದು ವರ್ಷದಲ್ಲಿ 43% ಹೆಚ್ಚಳ ಆಗಿದೆ.ಕಳೆದ ವರ್ಷ ಜೂನ್ ನಲ್ಲಿ 580 ಪ್ರಕರಣ ಗಳು ದಾಖಲಾದರೆ ಈ ವರ್ಷ 833 ಪ್ರಕಾರಣ ಗಳು ದಾಖಲಾಗಿವೆ ಅದೇ ರೀತಿ ಹಿಂಸೆ ಪ್ರಕರಣ ಗಳು 39% ಹೆಚ್ಚಾಗಿವೆ .733 ರಿಂದ 1022 ,ಮತ್ತು ಅಪಹರಣ ದ ಪ್ರಕರಣ ಗಳು ಕಳೆದ ವರ್ಷ 1026 ರಿಂದ ಈ ವರ್ಷ 1580 ಕ್ಕೇರಿದೆ, ವರದಕ್ಷಿಣೆ ಕಿರುಕುಳ, ಮತ್ತು ಸಾವಿನ ಪ್ರಕರಣ ಗಳು ಕೂಡ ಹೆಚ್ಚಿವೆ.

2020 ಕ್ಕೆ ಹೋಲಿಸಿದರೆ 2021 ರ ಮೊದಲ ಆರು ತಿಂಗಳಲ್ಲಿ ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು 63.3% ಹೆಚ್ಚಾಗಿದೆ ಎಂದು ದೆಹಲಿ ಪೊಲೀಸರು ಹಂಚಿಕೊಂಡ ಅಂಕಿಅಂಶಗಳು ತೋರಿಸಿವೆ.

ರಾಜ್ಯದಲ್ಲಿ ಕೇವಲ 7 ತಿಂಗಳಲ್ಲಿ 305 ರೇಪ್ ಕೇಸ್ ಪ್ರಕರಣಗಳು ಬೆಳಕಿಗೆ ಬಂದಿದೆ. ಅಂದರೆ ಪ್ರತಿ ತಿಂಗಳಿಗೆ 44 ಪ್ರಕರಣಗಳು ದಾಖಲಾಗುತ್ತಿವೆ.ಇಷ್ಟೆಲ್ಲಾ ಆದರೂ ರಾಜ್ಯ ಸರಕಾರ ಮಾತ್ರ ಧೃತರಾಷ್ಟ ನಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಡಳಿತ ನಡೆಸುತ್ತಿದೆ.

ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ಸಮಾಲೋಚನೆ ಸೇರಿದಂತೆ ವಿವಿಧ ರೀತಿಯ ನೆರವು ನೀಡುವ ಸಾಂತ್ವನ ಕೇಂದ್ರಗಳನ್ನು ಆರ್ಥಿಕ ಕೊರತೆಯ ನೆಪವೊಡ್ಡಿ ಸ್ಥಗಿತಗೊಳಿಸಲು ಹೊರಟಿರುವ ಸರ್ಕಾರದ ಮಹಿಳಾ ವಿರೋಧಿ ಕ್ರಮವು ಖಂಡನೀಯ ಎಂದು ವೆಲ್ಫೇರ್ ಪಾರ್ಟಿಆಫ್ ಇಂಡಿಯಾದ ಉಡುಪಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಮೀಲಾ ಸದೀದಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಿಳೆಯರು ಭಯದ ವಾತಾವರಣ ದಲ್ಲಿ ಜೀವನ ಕಳೆಯಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ, ಸಾರ್ವಜನಿಕ ಸ್ಥಳಗಲ್ಲಿ, ಶಾಲಾ ಕಾಲೇಜು ಪರಿಸರದಲ್ಲಿ, ಕೆಲಸದ ಜಾಗ ಗಳಲ್ಲಿ ಲೈಂಗಿಕ ದೌರ್ಜನ್ಯ, ಕೊಲೆ, ಅತ್ಯಾಚಾರ,ಲೈಂಗಿಕ ಟೀಕೆಗಳು, ಶಾಲಾ ಕಾಲೇಜು ಹೀಗೆ ಮನೆ ಯಿಂದ ಹೊರಗಡೆ ಬಂದು ಮತ್ತೆ ಮನೆಗಳಿಗೆ ತಲಪುವತನಕ ಭಯ ದಿಂದಲೇ ಬದುಕುವ ವಾತಾವರಣ ನಿರ್ಮಾಣಗೊಂಡಿದೆ.

ನೊಂದ ಮತ್ತು ತುರ್ತು ಅಗತ್ಯ ಇರುವ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ, ಉಚಿತ ಕಾನೂನು ನೆರವು ಸೇರಿದಂತೆ ಹಲವು ರೀತಿಯ ಸಹಾಯ ಒಂದೇ ಸೂರಿನ ಅಡಿಯಲ್ಲಿ ಸಿಗಬೇಕು ಎನ್ನುವ ಕಾಳಜಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಂತ್ವನ ಕೇಂದ್ರಗಳನ್ನು ನಿರ್ವಹಿಸಲಾಗುತಿತ್ತು .ಆದರೆ ಸರಕಾರ ಅದನ್ನು ಕಡೆಗಣಿಸಿದೆ. ಮಹಿಳೆಯರ ಸುರಕ್ಷತೆಯು ಸರಕಾರದ ಹೊಣೆಯಾಗಿತ್ತು ಹೊಣೆಯಾಗಿದ್ದು ಅದು ತನ್ನ ಹೊಣೆಗಾರಿಕೆಯನ್ನು ಅರಿತು ಅಗತ್ಯ ಕ್ರಮ ಗಳನ್ನು ಕೈಗೊಳ್ಳಬೇಕೆಂದು ಈ ಅಭಿಯಾನದ ಮೂಲಕ ಸರಕಾರವನ್ನು ಒತ್ತಾಯಿಸಲಾಗುವುದು.

ಅಭಿಯಾನದ ಉದ್ದೇಶಗಳು

* ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯವನ್ನು ಖಂಡಿಸುವುದು.

* ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು.

* ಮಹಿಳೆಯರ ಸುರಕ್ಷತೆಯ ಹೊಣೆ ಸರಕಾರದ್ದಾಗಿದ್ದು, ಸರಕಾರಕ್ಕೆ ಅದರ ಹೊಣೆಗಾರಿಕೆ ನೆನಪಿಸುವುದು.

* ಮಹಿಳಾ ಸಬಲೀಕರಣದ ಅಂಗವಾಗಿ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿಸುವುದು.

ಈ ಅಭಿಯಾನದ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿ,ರ್ಯಾಲಿ,ವಿಚಾರ ಗೋಷ್ಠಿ,ಕಾರ್ನರ್ ಮೀಟಿಂಗ್ಸ್ ಸೆ. 18 ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಅಭಿಯಾನ. ಸೆ. 19 ವೆಬಿನಾರ್ (ಸಮಾರೋಪ), ಹೀಗೆ ಹಲವಾರು ಕಾರ್ಯಕ್ರಮಗಳನ್ನು ಇಡೀ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಜಮೀಲಾ ಸದೀದಾ ಹೇಳಿದ್ದಾರೆ.

 

 
 
 
 
 
 
 
 
 
 
 

Leave a Reply