ನಾದ ನಟನೆ ನಾಟ್ಯಗಳರಸಿ ಮಾನಸಿ ಸುಧೀರ್✒️ರಾಜೇಶ್ ಭಟ್ ಪಣಿಯಾಡಿ

ಕಲಾ ರತ್ನಗಳ ಕಣಜ ಅದು ಉಡುಪಿ. ಎಳೆಯಲ್ಲೇ ಈ ಸಂಸ್ಕಾರಗಳನ್ನು ಬೆಳೆಸುವ ಗುಣ ನಮ್ಮ ಮಣ್ಣಿಗಿದೆ, ಹೆಣ್ಣಿಗಿದೆ. ಅದು ನಮ್ಮ ಸೌಭ್ಯಾಗ್ಯವಲ್ಲದೆ ಮತ್ತೇನು? ಈ ಮಾತಿಗೊಂದು ಅಪ್ಪಟ ಸಾಕ್ಷಿ ನಮ್ಮೂರ ಯುವ ಪ್ರತಿಭೆ ಶ್ರೀಮತಿ ಮಾನಸಿ ಸುಧೀರ್. ಕಣ್ಣುಗಳಲ್ಲಿ ಕಾಂತೀಯ ಗುಣವುಳ್ಳ ಆಕರ್ಷಕ ವ್ಯಕ್ತಿತ್ವದ ಈಕೆ ಅಪಾರ ಶಿಷ್ಯವೃಂದವನ್ನು ಕಲಾಲೋಕಕ್ಕೆ ಪರಿಚಯಿಸು ತ್ತಿರುವ ಬಹು ಮುಖ ಪ್ರತಿಭೆ.

ಹಿರಿಯ ಸಾಹಿತಿ, ವಿಮರ್ಶಕ ಪ್ರೊಫೆಸರ್ ಮುರಳೀಧರ ಹಾಗೂ ಶಾರದಾ ಉಪಾಧ್ಯಾಯ ದಂಪತಿಗಳ ಮುದ್ದಿನ ಮಗಳು ಮಾನಸಿ – ಸೃಜನಾತ್ಮಕ ಕಲಾ ಚಿಂತನೆಗಳನ್ನು ಮೈಗೂಡಿಸಿ ಕೊಂಡ ಅದ್ಭುತ ಕಲಾವಿದೆ. ಸಾಂಸ್ಕೃತಿಕ ತವರೂರು ಕೊಡವೂರಿನ ಕಲಾಕುಟುಂಬ ವೊಂದರ ಖ್ಯಾತ ಕಲಾ ಕಣ್ಮಣಿ ವಿದ್ವಾನ್ ಸುಧೀರ್ ಈಕೆಯ ಶ್ರೀಮಾನ್ ಪತಿ.

ಬರೀ ಒಂದೇ ಕ್ಷೇತ್ರಕ್ಕೆ ಅಂಟಿಕೊಂಡಿರದ ವಿಧುಷಿ ಮಾನಸಿ – ಸಂಗೀತ, ಸಾಹಿತ್ಯ, ನೃತ್ಯನಾಟಕ ಕಿರುತೆರೆ, ಬೆಳ್ಳಿತೆರೆ ಮುಂತಾದ ರಂಗಮಂಚ ಗಳಲ್ಲಿ ಮಿಂಚುತ್ತಿರುವ ಸಾಧಕಿ. ಭರತನಾಟ್ಯ ದಲ್ಲಿ ಜಗ ಮೆಚ್ಚಿದ ಪ್ರವೀಣೆ. ಸಂಗೀತ ಸಾಹಿತ್ಯ ಅಭಿನಯವನ್ನು ಬಳಸಿ ಅಭಿನಯ ಗೀತೆಯ ಮೂಲಕ ಹೊಸ ಅವಿಷ್ಕಾರವನ್ನು ಮಾಡಿ YouTube ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ ಇದಕ್ಕೆ ಆಕೆಯ ಮಗಳು ಬಾಲಪ್ರತಿಭೆ ಸುರಭಿಯ ಸಾಥ್ ಕೂಡಾ ಇದೆ.

ಕಳೆದ 14 ವರ್ಷಗಳಿಂದ ಸಾಂಸ್ಕೃತಿಕ ಸಂಸ್ಥೆ ನೃತ್ಯನಿಕೇತನ ಕೊಡವೂರಿನ ನಿರ್ದೇಶಕಿಯಾಗಿ, ಶಿಕ್ಷಕಿಯಾಗಿ, ಕಲಾವಿದೆಯಾಗಿ ದೇಶ ವಿದೇಶ ಗಳಲ್ಲಿ ಸಾವಿರಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಈಕೆಯದು. 5 ವರುಷಗಳ ಕಾಲ ತೆಂಕನಿಡಿಯೂರು ಸರಕಾರಿ ಕಾಲೇಜಿನಲ್ಲಿ ಅತಿಥಿ ಉಪಾನ್ಯಾಸಕಿಯಾಗಿ ಕಾರ್ಯನಿರ್ವಹಿಸಿ ಇದೀಗ ಮಣಿಪಾಲ್ ಯೂನಿವರ್ಸಿಟಿಯ ಸ್ಟಡಿ ಅಬ್ರಾಡ್ ಪ್ರೋಗ್ರಾಮಿನ ವಿದೇಶೀ ವಿದ್ಯಾರ್ಥಿ ಗಳಿಗೂ ನೃತ್ಯ ಶಿಕ್ಷಣ ನೀಡುವ ಅತಿಥಿ ಉಪಾನ್ಯಾಸಕಿಯಾಗಿ ದುಡಿಯುತ್ತಿದ್ದಾರೆ.

ಮುಖಭಾವಗಳ ಅಭಿನಯಕ್ಕೆ ಕನ್ನಡಿಯಾಗಿ ರುವ ಈಕೆ ಅಭಿನಯಿಸಿದ ” ರಿಸರ್ವೇಶನ್” ಎಂಬ ಚಲನಚಿತ್ರ ರಾಷ್ಟ್ರಪ್ರಶಸ್ತಿ ಪಡೆದಿರುವುದು ಸಂತಸದ ವಿಷಯ. ಭಾವಗೀತೆ ವಿಭಾಗದಲ್ಲಿ ಆಕಾಶವಾಣಿ ಮತ್ತು ನೃತ್ಯ ವಿಭಾಗದಲ್ಲಿ ದೂರ ದರ್ಶನದ ಗ್ರೇಡ್ ಕಲಾವಿದೆ ಯಾಗಿರುವ ಈಕೆಗೆ ಹಲವಾರು ಸನ್ಮಾನ ಪ್ರಶಸ್ತಿಗಳು ಹುಡುಕಿ ಕೊಂಡು ಬಂದಿವೆ.

ಅವುಗಳಲ್ಲಿ ” ನೃತ್ಯ ಚಂದ್ರಿಕ ” ” ನಾಟ್ಯಾರಾಧನ ” PRCI ಯವರ “Daughter of the year 2019” ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಆಕೆಯ ಕೀರ್ತಿ ಮುಕುಟದ ಮಣಿಗಳು. ಮಾನಸಿ ಯ ಈ ಮಹಾನ್ ಸಾಧನೆಗಳಿಗೆ ತಲೆದೂಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ ಮತ್ತು ಇ-ಸಮುದಾಯ ಆಕೆಯನ್ನು ಗುರುತಿಸಿ, ಆಕೆಯ ಜೊತೆ ಮುಕ್ತ ಸಂವಾದ ಗೈಯುವುದರ ಮೂಲಕ ಗೌರವಪೂರ್ಣವಾಗಿ ಅಭಿನಂದಿಸುತ್ತದೆ.

ಇದೇ ಬರುವ 18 ರಂದು ಸಂಜೆ 6 ಗಂಟೆಗೆ samskruthi vishwa you tube ಚಾನಲ್ ನಲ್ಲಿ ವಿಶ್ವ ಕಲಾ ಸಂಭ್ರಮದಡಿಯಲ್ಲಿ ಈಕೆಯ ಕಲಾ ಪ್ರೌಡಿಮೆಯನ್ನು ವೀಕ್ಷಿಸಲು ಮರೆಯ ಬೇಡಿ..

 
 
 
 
 
 
 
 
 
 
 

Leave a Reply