ಮಣಿಪಾಲದ ಶ್ರೀ ಲಿನೋ ಯೋವನ್ ಅವರಿಗೆ ಪಿಹೆಚ್ ಡಿ

ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿAಗ್ ವಿಭಾಗದ ವಿದ್ಯಾರ್ಥಿ ಹಾಗೂ ಪ್ರಕೃತ ಅಲ್ಲಿಯ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಿನೋ ಯೋವನ್ ಅವರಿಗೆ ಮಾಹೆ ವಿಶ್ವವಿದ್ಯಾನಿಲಯವು ಪಿಹೆಚ್.ಡಿ ಪದವಿಯನ್ನು ಸೆಪ್ಟೆಂಬರ್ ೧೩, ೨೦೨೩ ರಂದು ಕೊಡಮಾಡಿದೆ. ಶ್ರೀ ಲಿನೋ ಯೋವನ್ ಅವರು “ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ನೆಲೆನಿಂತ ವಿಶಿಷ್ಟ ಮಡ್ಡಿಗಳು, ಅದರಲ್ಲಿ ಹುದುಗಿರುವ ಅಂತರ್ಜಲ ಹಾಗೂ ಅಂತರ್ಜಲವನ್ನು ಸಮುದ್ರಕ್ಕೆ ಹೊರದಬ್ಬುವಲ್ಲಿ ಅದರ ಪಾತ್ರ” ಎಂಬ ಮಹಾಪ್ರಬಂಧವನ್ನು ಬರೆದು ಮಂಡಿಸಿದ್ದರು. ಈ ಪ್ರಬಂಧದ ಪ್ರಮುಖ ಫಲಿತಾಂಶಗಳು ಪ್ರಪಂಚದ ಪ್ರತಿಷ್ಠಿತ ಸಂಶೋಧನಾ ನಿಯಕಕಾಲಿಕಗಳಲ್ಲಿ ಪ್ರಕಟವಾಗಿದೆ. ಇವರ ಲೇಖನಗಳ ಫಲಿತಾಂಶದ ಸಾರ ಇತ್ತೀಚೆಗೆ ಸ್ಥಳೀಯ ದಿನಪತ್ರಿಕೆಗಳಲ್ಲೂ ಪ್ರಕಟವಾಗಿ ಜನರ ಗಮನಸೆಳೆದಿದ್ದವು. ಇವರ ಸಂಶೋಧನೆಗಳು ಮುಂದಿನ ವರ್ಷಗಳಲ್ಲಿ ಕರಾವಳಿಯಲ್ಲಿ ನೀರಿನ ಕೊರೆತೆಯಾದಾಗ ಸಮುದ್ರ ಪಾಲಾಗುತ್ತಿರುವ ಅಂತರ್ಜಲವನ್ನು ಸುಸ್ಥಿರವಾಗಿ ಜನಬಳಕೆಗೆ ಉಪಯೋಗಿಸಬಹುದು ಎಂದು ತಿಳಿಸಿದೆ.

ಶ್ರೀ ಲಿನೋ ಯೋವನ್ ಕನ್ಯಾಕುಮಾರಿಯ ಶ್ರೀ ಯೋವನ್ ಹಾಗೂ ಶ್ರೀಮತಿ ಅರುಲ್‌ಮೇರಿ ದಂಪತಿಗಳ ಪುತ್ರ.

ಮಣಿಪಾಲ ಸಿವಿಲ್ ಇಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕ ಡಾ|| ಕೆ ಬಾಲಕೃಷ್ಣ ಮಾರ್ಗದರ್ಶಕರಾಗಿ ಹಾಗೂ ಅದೇ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ|| ಹೆಚ್. ಎನ್. ಉದಯಶಂಕರ್ ಸಹಮಾರ್ಗದರ್ಶಕರಾಗಿ ಈ ಸಂಶೋಧನೆ ಕೈಗೊಳ್ಳಲು ನೆರವಾದರು.

 
 
 
 
 
 
 
 
 
 
 

Leave a Reply