ಸಾರ್ವಜನಿಕ ವಲಯದಲ್ಲಿ ಬೆತ್ತಲೆ ತಿರುಗುತ್ತಾ ಆತಂಕ ಸೃಷ್ಟಿಸಿದ ಮಾನಸಿಕ ಅಸ್ವಸ್ಥನ ರಕ್ಷಣೆ

ಉಡುಪಿ​: ​ ಸಾರ್ವಜನಿಕ ವಲಯದಲ್ಲಿ ಬೆತ್ತಲೆ ತಿರುಗುತ್ತ ಮಹಿಳೆಯರಿಗೆ ಆತಂಕ ಸೃಷ್ಟಿಸಿದ ಮಾನಸಿಕ ಅಸ್ವಸ್ಥನ ರಕ್ಷಣೆ; ಸಮಾಜಸೇವಕ ವಿಶು ಶೆಟ್ಟಿ ಅವರಿಂದ ರಕ್ಷಣಾ ಕಾರ್ಯಚರಣೆ. ಮಲ್ಪೆ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿದ, ಅಪರಿಚಿತ ಮಾನಸಿಕ ಅಸ್ವಸ್ಥನ ರಕ್ಷಣಾ ಕಾರ್ಯಚರಣೆಯು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ಶುಕ್ರವಾರ  ನಡೆದಿದೆ. ಕೊನೆಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ಆತಂಕದ ವಾತಾವರಣ:
ಕೆಲವು ಸಮಯಗಳಿಂದ ಮಲ್ಪೆ ಪರಿಸರದಲ್ಲಿ ಏಲ್ಲಿಂದಲೋ ವಲಸೆ ಬಂದಿರುವ, ಅಪರಿಚಿತ ಮಾನಸಿಕ ಅಸ್ವಸ್ಥನೊರ್ವ ನೆಲೆ ಕಂಡಿದ್ದನು. ಆತನ ಉಗ್ರ ಸ್ವಭಾವದ ವರ್ತನೆಗೆ ಸಾರ್ವಜನಿಕರು ಸಂಚರಿಸಲು ಹೆದರುತ್ತಿದ್ದರು. ವಿನಾಕಾರಣ ಕಲ್ಲುಗಳನ್ನು ಎಸೆಯುವುದನ್ನು ಮಾಡುತ್ತಿದ್ದನು. ಅದರಲ್ಲೂ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದರು.  ಮುಖ್ಯವಾಗಿ  ಮಹಿಳೆಯರು, ಯುವತಿಯರು ಇತನ ದೃಷ್ಟಿಗೆ ಕಂಡುಬಂದರೆ ವಿವಸ್ತ್ರನಾಗಿ ಸನಿಹ ಹೋಗಿ ನಿಂತುಕೊಳ್ಳುವುದು, ಹಿಂಬಾಲಿಸುವುದು, ಅಶ್ಲೀಲ ಚೆಷ್ಟೆಗಳನ್ನು ಮಾಡಿಕೊಂಡಿದ್ದನು. ಗಡ್ಡ ಬೆಳೆದು, ಸ್ನಾನ ಮಾಡದೆ ಇರುವುದರಿಂದ ಇತನ ಬಳಿ ಗಬ್ಬು ವಾಸನೆ ಹೊಡೆಯಿತ್ತಿತ್ತು.

ದೊರೆಯದ ಸ್ಪಂದನೆ:
ಮಾನಸಿಕ ಅಸ್ವಸ್ಥನ  ಉಪಟಳದಿಂದ ರಕ್ಷಣೆ ಒದಗಿಸುವಂತೆ, ಆತನಿಗೂ ಪುರ್ನವಸತಿ ಕಲ್ಪಿಸುವಂತೆ ಸ್ಥಳೀಯ ಮಹಿಳೆಯರು, ಆಸ್ಪತ್ರೆ ಶೂಶ್ರಕಿ ಒರ್ವರು ಸಂಬಂಧಪಟ್ಟ ಇಲಾಖೆಯವರಿಗೆ ದೂರುಗಳನ್ನು  ನೀಡಿದ್ದರು. ಆದರೆ ಯಾರಿಂದಲೂ ಯಾವೊಂದು ರೀತಿಯ  ಸ್ಪಂದನೆ ದೊರೆಯಲಿಲ್ಲ ಎಂದು ಸ್ಥಳೀಯರು  ಹೇಳಿಕೊಂಡಿದ್ದಾರೆ. ಇಲಾಖಾ ವ್ಯವಸ್ಥೆಯಿಂದ ನೆರವು ದೊರೆಯದೆ ದಿಕ್ಕುಕಾಣದಾದ ಮಹಿಳೆಯರು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಲ್ಲಿ ಮೊರೆ ಇಟ್ಟಿದ್ದಾರೆ.

ರಕ್ಷಣಾ ಕಾರ್ಯಚರಣೆ:
ತಕ್ಷಣ  ವಿಶು ಶೆಟ್ಟಿ ಅವರು ಸ್ಪಂದಿಸಿ, ಪರಿಸರದಲ್ಲಿ ಮಾನಸಿಕ ಅಸ್ವಸ್ಥನ ಇರುವಿಕೆ ಹುಡುಕಾಟ ನಡೆಸಿ, ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ಮಾನಸಿಕ ಯುವಕ ಉಗ್ರ ವರ್ತನೆ ತೋರಿದರೂ, ವಿಶು ಶೆಟ್ಟಿ  ಅವರು ಆತನ ಮನವೊಲಿಸಿ ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆ ಶುಶ್ರೂಷಕ  ಪ್ರದೀಪ್ ಅವರ ಸಹಾಯದಿಂದ, ಮಾನಸಿಕನ ಜಡೆಕಟ್ಟಿರುವ ತಲೆಕೂದಲು ಗಡ್ಡವನ್ನು ಬೊಳಿಸಿದ್ದಾರೆ.  ಸ್ನಾನ ಮಾಡಿಸಿ ಶುಚಿಗೊಳಿಸಿದ್ದಾರೆ. ಬದಲಿ ಬಟ್ಟೆ ತೊಡಿಸಿದ್ದಾರೆ.

ಆಶ್ರಯ ಒದಗಿಸಿದ ಶ್ರೀಸಾಯಿ ಸೇವಾಶ್ರಮ: 
ಮಂಜೇಶ್ವರ ಇಲ್ಲಿಯ ಶ್ರೀಸಾಯಿ ಸೇವಾಶ್ರಮದ ಸಂಚಾಲಕ ಡಾ. ಉದಯ ಕುಮಾರ್ ಅವರಲ್ಲಿ ವಿಶು ಶೆಟ್ಟಿ ಅವರು ಮಾನಸಿಕ ಅಸ್ವಸ್ಥನ ವಿಚಾರವನ್ನು ಹೇಳಿಕೊಂಡು, ಚಿಕಿತ್ಸೆ ಹಾಗೂ ಆಶ್ರಯ ಒದಗಿಸುವಂತೆ ವಿನಂತಿಸಿಕೊಂಡಿದ್ದರು. ತಕ್ಷಣ ಆಶ್ರಮ ಸಂಚಾಲಕರು ಆಶ್ರಯ ನೀಡುವುದಾಗಿ ಹೇಳಿಕೊಂಡು  ಮಾನವೀಯತೆ ಮೆರೆದಿದ್ದಾರೆ. ನಂತರ ವಿಶು ಶೆಟ್ಟಿ ಅವರು ಕಾನೂನು ಪ್ರಕ್ರಿಯೆಗಳು ನಡೆಸಿದ ಬಳಿಕ ಖಾಸಗಿ ವಾಹನದಲ್ಲಿ ಮಲ್ಪೆಯಿಂದ ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮಕ್ಕೆ ದಾಖಲುಪಡಿಸಿದ್ದಾರೆ. ಕಾರ್ಯಚರಣೆಯಲ್ಲಿ ಮಲ್ಪೆ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಜಯರಾಮ್, ಪ್ರವೀಣ್ ಅವರು ಸಹಕರಿಸಿದ್ದಾರೆ.

ಕಾರ್ಯಚರಣೆಗೆ ತಗುಲಿದ ಖರ್ಚು ವೆಚ್ಚಗಳನ್ನು ವಿಶು ಶೆಟ್ಟಿ ಅವರು ಭರಿಸಿದ್ದಾರೆ. ಮಲ್ಪೆ ಪರಿಸರದಲ್ಲಿ ಇದುವರೆಗೂ 100 ಕ್ಕೂ ಅಧಿಕ ಮಾನಸಿಕ ಅಸ್ವಸ್ಥರ ಅಸಹಾಯಕರ ಅನಾರೋಗ್ಯದಿಂದ ಬಳಲುತ್ತಿದ್ದವರ ಜೊತೆಗೆ ಮಹಿಳೆಯರ ಹಾಗೂ ಮಕ್ಕಳ ರಕ್ಷಣಾ ಕಾರ್ಯಚರಣೆಯು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ನಡೆದಿದೆ ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಸರಕಾರದ  ಯಾವುದೇ ಮಾನಸಿಕ ಅಸ್ವಸ್ಥರ ಪುರ್ನವಸತಿ ಕೇಂದ್ರ ಇಲ್ಲದಿರುವುದು ವಿಪರ್ಯಾಸ ಸಂಗತಿ. ಮುಂದಾದರೂ ಜಿಲ್ಲಾಡಳಿತ, ರಾಜಕಾರಣಿಗಳು  ಈ ಬಗ್ಗೆ ಚಿಂತಿಸಬೇಕೆಂದು ವಿಶು ಶೆಟ್ಟಿ ಅವರು ವಿನಂತಿಸಿದ್ದಾರೆ.

ಆಶ್ರಮಕ್ಕೆ ರೂ.10000/- ನೆರವು​​: ವಿಶು ಶೆಟ್ಟಿಯವರ ಹಿತೈಷಿ ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಸದಾನಂದ ಶೆಟ್ಟಿ ಅಂಬಲಪಾಡಿಯವರು ರೂ.10000/- ನೆರವನ್ನು ಶ್ರೀ ಸಾಯಿ ಆಶ್ರಮಕ್ಕೆ ನೀಡಿದ್ದಾರೆ.​

 
 
 
 
 
 
 
 
 
 
 

Leave a Reply