ಉಡುಪಿ: ವಿಜಯೀ ಭವ~ ಪುತ್ತಿಗೆ ಪರ್ಯಾಯ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸಿದ ಹೈಕೋರ್ಟ್

ಪರ್ಯಾಯ ಶ್ರೀಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಸಮುದ್ರೋಲ್ಲಂಘನೆ, ವಿದೇಶ ಪ್ರಯಾಣದ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅರ್ಜಿ ವಜಾ:

ಪರ್ಯಾಯ ಪೀಠಾರೋಹಣಕ್ಕೆ ಅವಕಾಶ ನೀಡಬಾರದು ಎಂದು ಗುರುರಾಜ ಜೀವನ್ ರಾವ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅವಲೋಕಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ , ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಇದ್ದ ದ್ವಿಸದಸ್ಯ ಪೀಠ ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು?

ಕುವೆಂಪು ಅವರ ಓ ನನ್ನ ಚೇತನ ಕವಿತೆಯನ್ನು ಉಲ್ಲೇಖಿಸಿದ ಕೋರ್ಟ್. ಮನೆ ಕಟ್ಟಿ ಕೂರುವುದಕ್ಕಿಂತ ಹೊರಗೆ ಓಡಾಡುವುದು ಲೇಸು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದೇ ಅಲ್ಲದೆ ಧಾರ್ಮಿಕ ಆಚರಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಹೈಕೋರ್ಟ್, ಇದೇ ಕಾರಣಕ್ಕೆ ಅರ್ಜಿ ವಜಾಗೊಳಿಸಿತು.

ಪುತ್ತಿಗೆ ಮಠದ ಭಕ್ತರ ಮನದಲ್ಲಿದ್ದ ಕಾರ್ಮೋಡ ಕರಗಿ ನೀರಾಯಿತು. ಪರ್ಯಾಯದ ವಿಜಯೋತ್ಸಾಹ ಮುಗಿಲು ಮುಟ್ಟಿತು.

 
 
 
 
 
 
 
 
 
 
 

Leave a Reply