ಜನವರಿ18 ಶ್ರೀಕೃಷ್ಣನ ಅಕ್ಷಯಪಾತ್ರೆ ನೋಡಲು ಮರೆಯದಿರಿ~ಲಾತವ್ಯ ಆಚಾರ್ಯ

ಉಡುಪಿ ಶ್ರೀಕೃಷ್ಣಮಠದಲ್ಲಿ ನಿತ್ಯ ಪೂಜೆ ಗೊಳ್ಳುತ್ತಿರುವ ಪ್ರಾಚೀನ ಅಕ್ಷಯ ಪಾತ್ರೆಯ ಇತಿಹಾಸ ಕುತೂಹಲಕಾರಿಯಾಗಿದೆ.

ದ್ವಾಪರಯುಗದಲ್ಲಿ ಪಾಂಡವರ ಅಜ್ಞಾತ ವಾಸ ಕಾಲದಲ್ಲಿ ಧರ್ಮರಾಜನಿಗೆ ಅಕ್ಷಯ ತೃತೀಯಾದಂದು ಸೂರ್ಯದೇವನು ಅಕ್ಷಯ ಪಾತ್ರೆಯನ್ನು ಉಡುಗೊರೆಯಾಗಿ ನೀಡಿದ್ದ.

ಈ ಅಕ್ಷಯ ಪಾತ್ರೆಯು 8 ಶತಮಾನಗಳ ಪೂರ್ವದಲ್ಲಿ ವಾಯುದೇವರ ತೃತೀಯ ಅವತಾರಿಗಳಾದ ಅರ್ಥಾತ್ ತ್ರೇತಾಯುಗ ದಲ್ಲಿ ಹನುಮರಾಗಿ ದ್ವಾಪರಾ ಯುಗದಲ್ಲಿ ಭೀಮಸೇನರಾಗಿ ಕಲಿಯುಗದಲ್ಲಿ ಶ್ರೀಮಧ್ವ ರಾಗಿ ಅವತರಿಸಿದ ಆಚಾರ್ಯರಿಗೆ ತಮ್ಮ ದಿವ್ಯ ಶಕ್ತಿಯಿಂದ ಲಭಿಸಿತು.

ಈ ನಿಮಿತ್ತ ಶ್ರೀಮಧ್ವಾಚಾರ್ಯರ ಕಾಲ ದಿಂದಲೂ ಉಡುಪಿಯಲ್ಲಿ ಶ್ರೀಕೃಷ್ಣನಿಗೆ ಜರಗುವ 14 ಪೂಜೆಗಳಲ್ಲಿ ಪವಿತ್ರಅಕ್ಷಯ ಪಾತ್ರೆಯ ಪೂಜೆಯೂ ಕೂಡಾ ಒಂದು ಪ್ರಮುಖ ಪೂಜೆ.

ಮೊದಲಿಗೆ ನಿರ್ಮಾಲ್ಯ ವಿಸರ್ಜನಾ ಪೂಜೆ, ಎರಡನೇಯದ್ದು ಉಷಃಕಾಲ ಪೂಜೆ, ತದನಂತರ ಜರಗುವ ಪೂಜೆಯೇ ಗೋಪೂಜೆ ಹಾಗೂ ಅಕ್ಷಯಪಾತ್ರೆಯ ಪೂಜೆ.

ಇವೆರಡೂ, ಜೊತೆಜೊತೆಯಾಗಿಯೇ ಸಲ್ಲುವುದು. ಪೂಜ್ಯ ಯತಿಗಳು ಅರಳು ಅಕ್ಕಿ ಬೆಲ್ಲಗಳನ್ನು ಶ್ರೀಗೋಪಾಲಕೃಷ್ಣ ದೇವರಿಗೆ ಸಮರ್ಪಿಸಿ ಆರತಿಯನ್ನು ಬೆಳಗಿಸಿದ ನಂತರ ಅಕ್ಷಯ ಪಾತ್ರೆ ಹಾಗೂ ಅದರ ಜೊತೆಗೆಯೇ ಇರುವ ಬೆಳ್ಳಿಯ ಸಟ್ಟುಗಕ್ಕೂ, ಹಾಗೂ ಉತ್ತರ ಬಾಗಿಲಲ್ಲಿ ನಿಂತಿರುವ ಗೋಮಾತೆ ಗೂ ಆರತಿಯನ್ನು ಬೆಳಗುವರು.

ಅಂತೆಯೇ ಪರ್ಯಾಯ ಮಹೋತ್ಸವ ದಂದು ಮಧ್ವಪೀಠ ಅಲಂಕರಿಸಲಿರುವ ಯತಿಗಳು ಪರ್ಯಾಯ ಪೂರೈಸಿದ ಯತಿಗಳಿಂದ ಅಕ್ಷಯ ಪಾತ್ರೆಯನ್ನು ಹಾಗೂ ಸಟ್ಟುಗವನ್ನು ಶ್ರೀಕೃಷ್ಣಮಠದಲ್ಲಿರುವ ಶ್ರೀಮಧ್ವಾಚಾರ್ಯರ ಪ್ರತಿಮೆಯ ಸಮ್ಮುಖ ದಲ್ಲಿ ಸ್ವೀಕರಿಸಿದ ನಂತರವೇ ಶ್ರೀಕೃಷ್ಣಪೂಜಾ ಕೈಂಕರ್ಯ ಸ್ವೀಕರಿಸುವರು.

ಕೃಷ್ಣಕ್ಷೇತ್ರದಲ್ಲಿ ಆಚಾರ್ಯರು ರೂಪಿಸಿದ ಕೃಷ್ಣಪೂಜೆ ಹಾಗೂ ನಿರಂತರ ಅನ್ನದಾನ ವನ್ನು ಶ್ರದ್ದಾ ಭಕ್ತಿಯಿಂದ ಸಲ್ಲಿಸುತ್ತೇವೆ ಎಂಬ ಚಿಂತನೆಯ ವಿಶಿಷ್ಟ ಪ್ರತಿಜ್ಞಾವಿಧಿಯು ಇದಾಗಿದೆ ಎಂಬುದು ಪ್ರಾಜ್ಞರ ಅಭಿಮತ.

ಪರ್ಯಾಯ ಮಹೋತ್ಸವ, ಮಕರ ಸಂಕ್ರಮಣ,ಶ್ರೀಕೃಷ್ಣ ಜಯಂತಿ,ಮಧ್ವನವಮಿ ಸೇರಿದಂತೆ ಪ್ರಮುಖ ಹಬ್ಬಗಳ ಮಹಾ ಅನ್ನಂತರ್ಪಣೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಲು ಶ್ರೀಕೃಷ್ಣ ಸನ್ನಿಧಿಗೆ ಆಗಮಿಸುತ್ತಾರೆ.

ಈಪರ್ವಕಾಲದಲ್ಲಿ ಅಕ್ಷಯ ಪಾತ್ರೆಯ ಸಟ್ಟುಗವನ್ನು ಅನ್ನದ ಬೃಹತ್ ಪಲ್ಲದಲ್ಲಿಟ್ಟು ಪೂಜ್ಯಯತಿಗಳಿಂದ ಪಲ್ಲಪೂಜೆ ನೆರವೇರು ತ್ತದೆ.ತದನಂತರವೇ ಅನ್ನಸಂತರ್ಪಣೆ ಆರಂಭವಾಗುವುದು.

ಅನ್ನಪ್ರಸಾದ ಅಕ್ಷಯವಾಗಲಿ ಎಂಬ ಸಂಕೇತ ಹಾಗೂ ಹಿನ್ನೆಲೆಯೊಂದಿಗೆ ಈ ಪೂಜೆ ಮತ್ತು ಆಚರಣೆಗಳು ಶತ-ಶತಮಾನಗಳಿಂದಲೂ ಜರಗುತ್ತಿವೆ.

ವಿಜಯದಶಮಿಯಂದು ಭತ್ತದ ಹೊಸತೆನೆ ಯನ್ನು ಸ್ವರ್ಣಪಲ್ಲಕ್ಕಿಯಲ್ಲಿ ಅಕ್ಷಯ ಪಾತ್ರೆಯ ಜೊತೆಗಿರಿಸಿ ಶ್ರೀಸೋದೆ ವಾದಿರಾಜ ಮಠದ ಮುಂಭಾಗದಿಂದ ರಥಬೀದಿಯಲ್ಲಿ ಬಿರುದುಬಾವಲಿ ಮೆರವಣಿಗೆಯೊಂದಿಗೆ ಶ್ರೀಕೃಷ್ಣಮಠಕ್ಕೆ ತಂದು ಪೂಜೆ ಸಲ್ಲಿಸಿ ತದನಂತರ ಹೊಸ ತೆನೆಯನ್ನು ಭಕ್ತರಿಗೆ ನೀಡುವ ಸಂಪ್ರದಾಯ ಈಗಲೂ ಇದೆ.

ಅಕ್ಷಯಪಾತ್ರೆಗೆ ಶ್ರೀಕೃಷ್ಣನ ಸನ್ನಿಧಾನದಲ್ಲಿ ಅಷ್ಟೊಂದು ಮಹತ್ವವಿದೆ.

ಈ ಅಕ್ಷಯ ಪಾತ್ರೆಯ ಸಟ್ಟುಗದಲ್ಲಿ
!! ಓಂ ಕ್ಲೀಂ ಓಂ !!
!! ಓಂ ಓಂ ನಮೋ ಭಗವತೇ ವಿಷ್ಣವೇ !! ಅನ್ನಾಧಿಪತಯೇ ಸ್ವಾಹಾ ಓಂ !! ಎಂದು ಸಂಸ್ಕೃತ ಅಕ್ಷರಗಳಲ್ಲಿ ಬರೆಯಲಾಗಿದೆ.

ಪಾಂಡವರಿಗೊಲಿದ ಪರಮಪವಿತ್ರ ಅಕ್ಷಯ ಪಾತ್ರೆಯ ದರ್ಶನ ಕಲಿಯುಗದಲ್ಲಿ ಈಗಲೂ ನಮಗೆ ಲಭಿಸುತ್ತಿರುವುದು ನಮ್ಮೆಲ್ಲರ ಜನ್ಮಜನ್ಮಾಂತರದ ಸುಕೃತ.

ಈ ಅಕ್ಷಯ ಪಾತ್ರೆಯ ದರ್ಶನದಿಂದ ಇಷ್ಟಾರ್ಥಗಳು ನೆರವೇರುತ್ತವೆ ಹಾಗೆಯೇ ಅಕ್ಷಯ ತೃತೀಯಾದಂದು ಈ ಪಾತ್ರೆಯ ದರ್ಶನ ಪಡೆದರೆ ಧನ-ಧಾನ್ಯ-ಸಂಪತ್ತುಗಳು ಅಕ್ಷಯವಾಗುತ್ತದೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ಹರಿದು ಬಂದಿದೆ.

ಭಗವದ್ಭಕ್ತರೇ,
ಇದೇ ಬರುವ ಜನವರಿ18ರಂದು ಶ್ರೀಪುತ್ತಿಗೆ ಮಠದಪರ್ಯಾಯ ಮಹೋತ್ಸವದ ಪರ್ವಕಾಲದಲ್ಲಿ ಬೆಳ್ಳಂಬೆಳಗ್ಗೆ-ಬ್ರಾಹ್ಮೀ ಮುಹೂರ್ತದಲ್ಲಿ ಮಧ್ವಪೀಠ ಅಲಂಕರಿ ಸಲಿರುವ ಪರಮಪೂಜ್ಯ-ಶ್ರೀಪುತ್ತಿಗೆ ಶ್ರೀಪಾದರು, ಪವಿತ್ರಅಕ್ಷಯಪಾತ್ರೆಯನ್ನು ಶ್ರೀಕೃಷ್ಣಮಠದಲ್ಲಿ ಶ್ರೀಮಧ್ವಾಚಾರ್ಯರ ಸನ್ನಿದಾನದ ಸಮ್ಮುಖದಲ್ಲಿ ಸ್ವೀಕರಿಸಲಿ ದ್ದಾರೆ.

ಈ ಶುಭಸಂದರ್ಭದಲ್ಲಿ ಸಮಸ್ತ ಭಕ್ತರಿಗೆ ಐತಿಹಾಸಿಕ ಪ್ರಾಚೀನ ಪವಿತ್ರ ಅಕ್ಷಯ ಪಾತ್ರೆಯ ನೇರದರ್ಶನದ ಸುಯೋಗ ಕರುಣವಾಗಲಿದೆ.

ದಯವಿಟ್ಟು ಎಲ್ಲರೂ ಈ ಅಪೂರ್ವ ದೃಶ್ಯವನ್ನು ಕಣ್ತುಂಬಿಸಿಕೊಂಡು ಶ್ರೀಕೃಷ್ಣ ಮುಖ್ಯ ಪ್ರಾಣದೇವರ ಶ್ರೀಮಧ್ವ-ವಾದಿ ರಾಜಗುರುಗಳ ವಿಶೇಷ ಒಲುಮೆಗೆ ಪಾತ್ರ ರಾಗಬೇಕೆಂದು ನಮ್ಮ ಬಿನ್ನಹ.

ಅಕ್ಷಯ ಪಾತ್ರೆಯ ದರ್ಶನದಿಂದ ಸಮಸ್ತರ ಸತ್ಸಂಕಲ್ಪಗಳು ಅಕ್ಷಯವಾಗಲಿ,ಲೋಕದಲ್ಲಿ ಸುಖ-ಶಾಂತಿ-ಸಮೃದ್ಧಿ ನಿತ್ಯವಿರಲಿ ಎಂದು ಪ್ರಾರ್ಥಿಸುತ್ತಾ..
ಮುಂದಿನ ಸಂಚಿಕೆಯಲ್ಲಿ ಇನ್ನೊಂದು ವೈಶಿಷ್ಟ್ಯಪೂರ್ಣ ಭಗವಂತನ ಮಹಿಮೆ ಯೊಂದಿಗೆ ಭೇಟಿಯಾಗೋಣ..

ಅಕ್ಷಯ ಪಾತ್ರೆಯ ವಿಶೇಷ ಮಾಹಿತಿಗಾಗಿ ಈ ಕೆಳಗಿನ-ಯುಟ್ಯೂಬ್ ಲಿಂಕನ್ನು ಒತ್ತಿ ಪೂರ್ಣ ವಿಡಿಯೋ ವೀಕ್ಷಿಸಿ:

ಪ್ರೀತೋಸ್ತು ಕೃಷ್ಣಪ್ರಭುಃ

ಬರಹ: ಪಿ.ಲಾತವ್ಯ ಆಚಾರ್ಯ ಉಡುಪಿ.

 
 
 
 
 
 
 
 
 
 
 

Leave a Reply