ಉಡುಪಿ ಪುತ್ತೂರು ಯಕ್ಷನವಮಿ ಸಂಪನ್ನ

ಉಡುಪಿ ಸಮೀಪದ ಪುತ್ತೂರು ಶ್ರೀ `ಭಗವತೀ ಯಕ್ಷ ಕಲಾ ಬಳಗ (ರಿ.) ಇವರಿಂದ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಯಕ್ಷನವಮಿ ಯಕ್ಷಗಾನ ಕಾರ್ಯಕ್ರಮ ಬುಧವಾರ ಪುತ್ತೂರು ಶ್ರೀ ಭಗವತೀ ದೇವಸ್ಥಾನದಲ್ಲಿ ಸಂಪನ್ನಗೊoಡಿತು.

ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ ಶ್ರೀಪಾದರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಯಕ್ಷಗಾನ ಕಲೆ, ದೇವ ಕಲೆ ಮತ್ತು ಜೀವಂತ ಕಲೆ ಅದನ್ನು ರಿಯಾಲಿಟಿ ಶೋನಲ್ಲಿ ಅಪಹಾಸ್ಯ ಮಾಡುವತ್ತ ಸಾಗುತ್ತಿದೆ ಅದನ್ನು ವಿರೋದಿಸಿ ಯಕ್ಷಗಾನ ಕಲೆಯ ಪರಂಪರೆ ಉಳಿಸಬೇಕಾಗಿದೆ ಎಂದರು.

ಯಕ್ಷನವಮಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ಸದಾಶಿವ ಕುಲಾಲ್ ವೇಣೂರು ಅವರಿಗೆ ಯಕ್ಷಪ್ರದೀಪ್ತರತ್ನ ಪ್ರಶಸ್ತಿ ಮತ್ತು ಪ್ರವೀಣ್ ಶೆಟ್ಟಿ ಪುತ್ತೂರು ಅವರಿಗೆ ಯಕ್ಷಕಲಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಡಗು ಯಕ್ಷಗುರುಗಳಾದ ಮುದ್ರಾಡಿ ಸುಬ್ರಹ್ಮಣ್ಯ ಪ್ರಸಾದ್ ಮತ್ತು ತೆಂಕು ತಿಟ್ಟು ಗುರುಗಳಾದ ಪ್ರಣಮ್ಯ ತಂತ್ರಿ ಅವರನ್ನು ಗುರುವಂದನೆ ಮಾಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಛೇರಿ ಎ.ಜಿ.ಎಮ್ ರಾಜಗೋಪಾಲ್ ಬಿ., ಶ್ರೀ ಭಗವತೀ ಯಕ್ಷಕಲಾ ಬಳಗದ ಗೌರವಾಧಕ್ಷ ಕೃಷ್ಣಮೂರ್ತಿ ಭಟ್, ಸಂಚಾಲಕ ಶಂಕರ ಶೆಟ್ಟಿ, ಶ್ರೀ ಭಗವತೀ ಯಕ್ಷ ಕಲಾ ಬಳಗದ ಅಧ್ಯಕ್ಷ ಪ್ರಮೋದ್ ತಂತ್ರಿ, ಕಾರ್ಯದರ್ಶಿ ರಘುನಾಥ ಮಾಬೆನ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು.

ಶ್ರೀ ಭಗವತೀ ಯಕ್ಷ ಕಲಾ ಬಳಗದ ಅಧ್ಯಕ್ಷ ಪ್ರಮೋದ್ ತಂತ್ರಿ ಸ್ವಾಗತಿಸಿ, ಚೆತನ್ನ ಎಂ.ಜಿ ಪ್ರಾಸ್ತಾವಿಸಿದರು. ಪ್ರಶಾಂತ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ವಾದಿರಾಜ ಕಲ್ಲೂರಾಯ ನಿರೂಪಿಸಿ, ರವಿನಂದನ ಭಟ್ ವಂದಿಸಿ, ನಿರುಪಮ ಪ್ರಮೋದ್ ಸಹಕರಿಸಿದರು.

ನಂತರ ಸುಪ್ರಸಿದ್ಧ ವೃತ್ತಿಪರ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ ತುಳಸೀ ಜಲಂಭರ ಮತ್ತು ವಿಶೇಷವಾಗಿ ದೊಂದಿ ಬೆಳಕಿನಲ್ಲಿ ರಕ್ತರಾತ್ರಿ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಫೋಟೋಕ್ಯಾಪ್ಷನ್ ಕಲಾವಿದ ಸದಾಶಿವ ಕುಲಾಲ್ ವೇಣೂರು ಯಕ್ಷಪ್ರದೀಪ್ತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply