ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಿದ ನಗರಸಭಾ ಸದಸ್ಯ ವಿಜಯ್ ಕೊಡವೂರು

ಸಾರ್ವಜನಿಕ ಕಚೇರಿಗಳಲ್ಲಿ ಇರುವಂತಹ ಶೌಚಾಲಯಗಳನ್ನು ಸ್ವಚ್ಛ ಮಾಡುವ ಮೂಲಕ ಹಿರಿಯ ನಾಗರಿಕರೊಂದಿಗೆ ಸ್ವಾತಂತ್ರೋತ್ಸವವನ್ನು ನಗರಸಭಾ ಸದಸ್ಯ ವಿಜಯ್ ಕೊಡವೂರು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು.

ಉಡುಪಿ ನಗರ ವ್ಯಾಪ್ತಿಯ ಒಳಗಡೆ ಇರುವ ಸರಕಾರಿ ಶೌಚಾಲಯಗಳು ಸರಕಾರಿ ಪರಿಸರಗಳು ತುಂಬಾ ನಾಚಿಗೆ ತರುವ ರೀತಿಯಲ್ಲಿ ಇರುವುದನ್ನು ಗಮನಿಸಿ ಉಡುಪಿಯ ಎಪಿಎಂಸಿ ಮಾರುಕಟ್ಟೆಯ ಶೌಚಾಲಯವನ್ನು ಸ್ವಚ್ಛ ಪಡಿಸುವ ಕಾರ್ಯ ಹಿರಿಯ ನಾಗರಿಕರೊಂದಿಗೆ ಸೇರಿಕೊಂಡು ಸ್ವಚ್ಚತಾ ಕಾರ್ಯ ನಡೆಯಿತು.

ತರಕಾರಿಗಳನ್ನು ಬೆಳೆಸಿ ಬರುವ ವ್ಯಾಪಾರಸ್ಥರು ಇತಹ ವಿಶೇಷವಾದ ಕಾರ್ಯವನ್ನು ಮಾಡಿದ ನಗರಸಭಾ ಸದಸ್ಯರ ಕಾರ್ಯವನ್ನು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಪ್ರತೀ ಬಾರಿಯೂ ನಾವು ಶೌಚಾಲಯದ ಒಳಗೆ ಹೋಗುವಾಗ ದುರ್ನಾಥ ಬರುತ್ತದೆ, ಅದನ್ನು ಯಾರೂ ಕೇಳುವವರಿಲ್ಲ ಆದರಿಂದ ಈ ಮೂಲಕ ಅಧಿಕಾರಿಯನ್ನು ಕರೆದು ಅವರನ್ನು ತರಾಟೆಗೆ ತೆಗೆದು ಶೌಚಾಲಯದ ಸ್ವಚ್ಚತಾ ಕಾರ್ಯ ಮಾಡಿರುವುದು ತುಂಬಾ ಒಳ್ಳೆಯ ಕೆಲಸ,ಅದೇ ರೀತಿ ಈ ತಂಡವು ಪ್ರತೀ ತಿಂಗಳಿಗೊಮ್ಮೆ ಇಂತಹ ಕಾರ್ಯ ಮಾಡಿದಲ್ಲಿ ಉಡುಪಿ ನಗರ ವ್ಯಾಪ್ತಿಯ ಶೌಚಾಲಯಗಳು ಸ್ವಚ್ಚವಾಗಿ ಇರಲು ಸಾಧ್ಯತೆ ಇದೆ ವ್ಯಾಪಾರಿಗಳು ಅಭಿಪ್ರಾಯ ಪಟ್ಟರು.

ಈಗಾಗಲೇ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸರ್ಕಾರದ ವತಿಯಿಂದ ಒಬ್ಬ ಕಾಂಟ್ರಾಕ್ಟರ್ ನೇಮಕ ಮಾಡಿ ಪ್ರತೀ ತಿಂಗಳಿಗೆ 1,50,000.00 ( ಒಂದು ವರೆ ಲಕ್ಷ) ರೂಪಾಯಿಯನ್ನು ಸರಕಾರದ ವತಿಯಿಂದ ನೀಡಿದರೂ ಅದು ಸರಿಯಾಗಿ ವ್ಯವಸ್ಥೆ ಆಗದಿರುವುದನ್ನು ಗಮನಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದು ಇನ್ನು ಮುಂದಿನ ದಿನಗಳನ್ನು ಈ ರೀತಿ ಆಗಬಾರದು ಎಂದು ಸೂಚನೆಯನ್ನು ನೀಡಿದರು.

ಉಡುಪಿ ನಗರ ವ್ಯಾಪ್ತಿಯಲ್ಲಿ ಇಂತಹ ದುಸ್ಥಿತಿ ಕಂಡುಬಂದಲ್ಲಿ ಪ್ರತೀ ತಿಂಗಳ ಮೊದಲ ಭಾನುವಾರ ಸ್ವಚ್ಚತಾ ಕಾರ್ಯ ಮಾಡುತ್ತೇವೆ ಎಂದರು

ಈ ಸಂದರ್ಭದಲ್ಲಿ ಹಿರಿಯರಾದ ಕೃಷ್ಣ ಅಮೀನ್ ಮೂಡುಬೆಟ್ಟು, ಕೆ ಸುಂದರ್ ಪಾಲನ್, ಅಶೋಕ್ ಶೆಟ್ಟಿಗಾರ್,ಅಜಿತ್ ಕುಮಾರ್ ಕೊಡವೂರು, ವಿನಯ್ ಕೊಡವೂರು,ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply