ಉಡುಪಿ ವೈಭವ ~ ರಾಜ್ಯ ಮಟ್ಟದ ಅಧಿವೇಶನ

ಧ್ವನಿ ಮತ್ತು ಬೆಳಕಿನ ವಸ್ತು ಪ್ರದರ್ಶನ ಮಾರಾಟ ಮಾಳಿಗೆಯ ಉದ್ಘಾಟನೆಯನ್ನು ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಧರ್ಮದರ್ಶಿ ಡಾ। ವಿಜಯ ಬಲ್ಲಾಳ ಉದ್ಘಾಟಸಿ ನೂತನ ವಿನ್ಯಾಸ ವಸ್ತು ಸಂಗ್ರಹ ಕಂಡು ಸಂತಸ ವ್ಯಕ್ತಪಡಿಸಿ, ಆಧುನಿಕ ಜೀವನ ಶೈಲಿಯ  ಅದ್ದೂರಿ ಸಭೆ -ಸಮಾರಂಭ  ಯಶ್ವಸಿಯಾಗಲು ಇವರ ಪಾತ್ರ ಮಹತ್ವದಾಗಿದೆ ಎಂದು ಶುಭ ಹಾರೈಸಿದರು. 
                                                                                                          ಉಡುಪಿ ವೈಭವದ ರಾಜ್ಯ ಮಟ್ಟದ  2ನೇ ಅಧಿವೇಶನವನ್ನು ನಗರಸಭಾ ಅಧ್ಯಕ್ಷರಾದ  ಸುಮಿತ್ರಾ ನಾಯಕ್ ದೀಪ ಬೆಳಗಿಸಿ ಚಾಲನೆ ನೀಡಿ, ಉಡುಪಿ ಆಹಾರಕ್ಕೆ ಹಾಗೂ ವಿಹಾರಕ್ಕೆ ತುಂಬಾ ಜನಪ್ರಿಯತೆ ಹೊಂದಿದ್ದು, ಎಲ್ಲಾ ಸಭೆ -ಸಮಾರಂಭದಲ್ಲಿ ತೆರೆ ಮರೆಯಲ್ಲಿ ಇವರ ಕೆಲಸ , ಸುಂದರ ವೇದಿಕೆಗೆ ಸರಿಯಾದ ಧ್ವನಿ -ಬೆಳಕಿನ ವ್ಯವಸ್ಥೆ ರೂಪಿಸಿ ಜನ ಮನ್ನಣೆನೆಗಳಿಸಿರುತ್ತಾರೆ ಈ ಸಂಘಟನೆ ಇನ್ನಷ್ಟ್ಟು ಬೆಳೆಯಲಿ ಎಂದು ಶುಭ ಹಾರೈಸಿ ದರು. 
ಸಂಘಟನೆಯ ಸಂಸ್ಥಾಪಕ ಮಹೆಬೂಬ ಮುಲ್ಲಾ ಸಿದ್ದಾಪುರ  ಪ್ರಸ್ತಾಪನೆಯಲ್ಲಿ ಸಂಘಟನೆಗೆ  ನಿವೇಶನ ನೀಡುವಂತೆ ಮನವಿ ಮಾಡಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಶಿವರಾಜ್ ಮಲ್ಲಾರ್, ಅಲ್ ಇಂಡಿಯಾ ಟೆಂಟ್ &  ಡೆಕೋರೇಷನ್ ವೆಲ್ ಫೇರ್ ಅಸೋಷಿಯನ್ ನವದೆಹಲಿ ಇದರ ಚಯರ್ಮನ್ ರವಿ ಜಿಂದಾಲ್,  ಪ್ರಧಾನ ಕಾರ್ಯದರ್ಶಿ ಅನಿಲ್ ರಾವ್, ರಾಜ್ಯ ಅಧ್ಯಕ್ಷ ಶಿವ ಕುಮಾರ್ ಹಿರೇಮಠ, ನಗರಸಭೆಯ ಸದಸ್ಯರಾದ ರಜನಿ ಹೆಬ್ಬಾರ್, ಗಿರೀಶ್ ಅಂಚನ್, ಪ್ರಧಾನ ಕಾರ್ಯದರ್ಶಿ ದಾಮೋದರ್, ಜಿಲ್ಲಾ ಶಾಮಿಯಾನ ಅಧ್ಯಕ್ಷ ಉದಯಕುಮಾರ್, ವಿವಿಧ ರಾಜ್ಯ ಸಮಿತಿ ಸದಸ್ಯರು ಹಾಗು ವಿವಿಧ ಜಿಲ್ಲೆಯ ಪದಾಧಿಕಾರಿಗಳು ಸಾವಿರಾರು ಸಂಘದ ಸದಸ್ಯರು ಉಪಸ್ಥರಿದ್ದರು. ಜಿಲ್ಲಾಧ್ಯಕ್ಷ ರಾಮಕೃಷ್ಣ ಕುಂದರ್ ಸ್ವಾಗತಿಸಿದರು. ಸಂಘದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ನೆಡೆಯಿತು.  
 
 
 
 
 
 
 
 
 
 
 

Leave a Reply