ದೇವಾಲಯಗಳಲ್ಲಿ ಸೇವೆಗಳನ್ನು ಆರಂಭಿಸಲು ರಾಜ್ಯ ಸರಕಾರದ ಮಾರ್ಗಸೂಚಿ 

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಸೇವೆಗಳನ್ನು ಸಪ್ಟೆಂಬರ್ 1 ರಿಂದ ಆರಂಭಿಸಲು ಮಾರ್ಗಸೂಚಿಗಳನ್ನು ಸರಕಾರ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ. ಮಾರ್ಗಸೂಚಿಯಂತೆ ಆಯಾಯಾ ದೇವಾಲಯಗಳ ಸಂಪ್ರದಾಯಗಳಿಗೆ ಈ ಹಿಂದೆ ನಡೆಸುತ್ತಿದ್ದ ಸೇವೆಗಳನ್ನು ಭಕ್ತರ ಸಂಖ್ಯೆ ಹಾಗೂ ಸ್ಥಳಾವಕಾಶದ ಲಭ್ಯತೆ ಆಧಾರದ ಮೇಲೆ ನಡೆಸಬಹುದಾದ ಸೇವೆಗಳ ಸಂಖ್ಯೆಗಳನ್ನು ಆಯಾಯ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು/ಆಡಳಿತಾಧಿಕಾರಿಗಳು/ ಅನುವಂಶಿಕ ಮೊಕ್ತೇಸರರು ನಿಗದಿಪಡಿಸಿಕೊಂಡು ಕೋವಿಡ್-19 ಹರಡದಂತೆ ಹಾಲಿ ಇರುವ ಮಾರ್ಗಸೂಚಿಗಳಿಗೆ ಒಳಪಟ್ಟು ಭಕ್ತಾದಿಗಳು ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವುದು.

ದೇವಾಲಯಗಳಲ್ಲಿ ಜಾತ್ರೆ ಉತ್ಸವಗಳು | ಬ್ರಹ್ಮರಥೋತ್ಸವ | ಪವಿತ್ರೋತ್ಸವ ಮುಂತಾದ ವಿಶೇಷ ಉತ್ಸವ ನಡೆಸುವುದನ್ನು ತಾತ್ಕಾರವಾಗಿ ಮುಂದೂಡಲಾಗಿದೆ. ಸದರಿ ಉತ್ಸವಗಳನ್ನು ನಿಲ್ಲಿಸಿ ಸಂಪ್ರದಾಯವಿಲ್ಲ.  ದೇವಾಲಯಗಳಲ್ಲಿ ಜಾತ್ರೆ ಉತ್ಸವ | ಬ್ರಹ್ಮರಥೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ದೇವಾಲಯದ ಆಗಮಿಕರು / ತಂತ್ರಿಗಳು | ಅರ್ಚಕರು / ಸಿಬ್ಬಂದಿಯವರು ಸಾಂಕೇತಿಕವಾಗಿ ನಡೆಸಿ ಕೇವಲ ಉತ್ಸವಗಳನ್ನು ದೇವಾಲಯದ ಆವರಣ | ಒಳಪ್ರಕಾರದೊಳಗೆ ಉತ್ಸವ ದಿನಗಳಲ್ಲಿ ಭಕ್ತಾಧಿಗಳು / ಸಾರ್ವಜನಿಕರ ಸಂದಣಿ ಇಲ್ಲದಂತೆ ನಡೆಸಿ ಪೂರ್ಣಗೊಳಿಸುವುದು.

ಕೋವಿಡ್-9 (ಕರೋನಾ ವೈರಸ್) ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ / ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಹಾಗೂ ಈ ಕಛೇರಿಯ ನಿರ್ದೇಶನ ಗಳಂತೆ ಸಾಮಾಜಿಕ ಅಂತರ ಹಾಗೂ ಇತರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಆಯಾಯ ಜಿಲ್ಲಾಧಿಕಾರಿಗಳು / ಸ್ಥಳೀಯ ಸಂಸ್ಥೆಗಳು ಹೊರಡಿಸಿರುವ | ಹೊರಡಿಸುವ ಆದೇಶಗಳನ್ನು ಪಾಲಿಸತಕ್ಕದ್ದು.

ದೇವಾಲಯಗಳಲ್ಲಿ ಸಾಮಾಜಿಕ ಅಂತರ ಕಾಪಾಡುವ ಹಾಗೂ ಸ್ಯಾನಿಟೈಸರ್, ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳ | ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರುಗಳು ಕಾತರಿಪಡಿಸಿಕೊಳ್ಳ ತಕ್ಕದ್ದು ಹಾಗೂ ಮೇಲ್ಕಂಡ ನಿರ್ದೇಶನಗಳು ಉಲ್ಲಂಘನೆ ನಡೆಸದಂತೆ ಆದೇಶ ನೀಡಲಾಗಿದೆ.

 
 
 
 
 
 
 
 
 
 
 

Leave a Reply