ಸ್ಪೂರ್ತಿ ಪಿ.ಶೆಟ್ಟಿರವರಿಗೆ ಪಿಎಚ್‌ಡಿ ಪದವಿ

ಶಿರ್ವ:-ನಿಟ್ಟೆ ಎನ್.ಎಮ್.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯದ  ಎಮ್‌ಸಿಎ ವಿಭಾಗದಲ್ಲಿ  ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ  ಎಳ್ಳಂಪಳ್ಳಿ ಬೆಟ್ಟಿನ ಮನೆ ಸ್ಪೂರ್ತಿ ಪುಷ್ಪರಾಜ್ ಶೆಟ್ಟಿ ಮಂಡಿಸಿದ “ಏನರ್ಜಿ ಆವೇರ್ ರೌಟಿಂಗ್  ಪ್ರೊಟೊಕಾಲ್ಸ್ ಫಾರ್ ಇಂಟರ್‌ನೆಟ್ ಆಫ್ ಥಿಂಗ್ಸ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿದೆ.

ಇವರು ನಿಟ್ಟೆ ಇಂಜಿನಿಯರಿ೦ಗ್ ಕಾಲೇಜಿನ  ಕಂಪ್ಯೂಟರ್ ಸಾಯನ್ಸ್  ವಿಭಾಗದ ಪ್ರೊ.ಉದಯಕುಮಾರ್ ಕೆ ಶೆಣೈರವರ ಮಾರ್ಗದರ್ಶನದಲ್ಲಿ  ಸಂಶೋಧನೆ ನಡೆಸಿದ್ದರು.

ಶೈಕ್ಷಣಿಕ ಸಾಧನೆಗಳ ಜೊತೆಗೆ  ಸಮಾಜದ ವಿವಿಧ ಸೇವಾ ಸಂಘಗಳ ಪದಾಧಿಕಾರಿ ಮತ್ತು ಸದಸ್ಯರಾಗಿ ಸೇವೆಸಲ್ಲಿಸುತ್ತಿರುವ ಇವರು ಶಿರ್ವ ಪ್ರೊ.ವೈ.ಭಾಸ್ಕರ ಶೆಟ್ಟಿ ಮತ್ತು ಪ್ರಭಾವತಿ ಬಿ.ಶೆಟ್ಟಿರವರ ಪುತ್ರಿ.

 
 
 
 
 
 
 
 
 
 
 

Leave a Reply