ವಿದ್ಯಾರ್ಥಿಗಳೇ ಸಾಹಿತ್ಯ ಸಮ್ಮೇಳನದ ಪ್ರಯೋಜನ ಪಡೆಯಿರಿ

ಸಾಹಿತ್ಯ ಸಮ್ಮೇಳನವೆಂದರೆ ಅದು ಬರಹಗಾರರ, ಓದುಗರ ಹಾಗು ಪುಸ್ತಕಗಳ ದೊಡ್ಡ ಹಬ್ಬ. ಸಮ್ಮೇಳನದ ಪ್ರಮುಖ ಆಕರ್ಷಣೆಯೇ ಸಾಹಿತಿಗಳು ಮತ್ತು ಪುಸ್ತಕ ಮಳಿಗೆಗಳು. 

ಸಾಂಸ್ಕೃತಿಕ ನಗರ ಉಡುಪಿ ತಾಲೂಕಿನ ಮೆಣಿಪಾಲ ಸರಳೇಬೆಟ್ಟು ಉಮಾಮಹೇಶ್ವ ದೇವಾಲಯ ವಠಾರದಲ್ಲಿ ಅಕ್ಷರ ಜಾತ್ರೆ ಶುರುವಾಗಲಿದೆ.

 ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ತಾಲೂಕಿನ ವಿವಿಧ ಮೂಲೆಗಳಿಂದ ಸಾಹಿತ್ಯಾಸಕ್ತರು ಮಣಿಪಾಲದತ್ತ ಮುಖ ಮಾಡುತ್ತಿದ್ದಾರೆ. ಸಾಹಿತ್ಯ ಸಮ್ಮೇಳನವೆಂದರೆ ಅದು ಬರಹಗಾರರ, ಓದುಗರ ಹಾಗು ಪುಸ್ತಕಗಳ ದೊಡ್ಡ ಹಬ್ಬ. ಸಮ್ಮೇಳನದ ಪ್ರಮುಖ ಆಕರ್ಷಣೆಯೇ ಸಾಹಿತಿಗಳು ಮತ್ತು ಪುಸ್ತಕ ಮಳಿಗೆಗಳು. ವಿದ್ಯಾರ್ಥಿಗಳಿಗಂತು ಸಮ್ಮೇಳನ ರಸದೌತಣ ನೀಡುತ್ತದೆ. ಅಕ್ಷರ ವ್ಯಾಮೋಹ ಇರುವಂತಹ ವಿದ್ಯಾರ್ಥಿಗಳು ಇಲ್ಲಿ ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಕತೆ, ಕವನ, ವಿಚಾರಧಾರೆ, ಕಾದಂಬರಿಗಳು, ಲೇಖನಗಳು, ಐತಿಹಾಸಿಕ, ಧಾರ್ಮಿಕ, ಆದ್ಯಾತ್ಮಿಕ ಹೀಗೆ ಎಲ್ಲಾ ವಿಷಯಗಳ ಪುಸ್ತಕಗಳು ಇಲ್ಲಿ ಲಭ್ಯವಿರುತ್ತದೆ. ಇನ್ನು ಇಡೀ ದಿನ ಬೆಳಿಗ್ಗೆ 8ರಿಂದ ರಾತ್ರಿ 8 ಸತತ 12 ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಹಲವು ಸಾಹಿತಿಗಳ ಭಾಷಣಗಳನ್ನು ಕೇಳಬಹುದು. ಕವಿಗೋಷ್ಠಿಗಳು, ಕವನ ವಾಚನ, 

ಪೋಸ್ಟ್ ಕಾಡ್೯ ಕಥಾ ವಾಚನ ಹಾಸ್ಯ ಗೋಷ್ಠಿಗಳು ಹೀಗೆ ಸಾಹಿತ್ಯ ಲೋಕದ ಹಲವು ಮುಖಗಳ ಪರಿಚಯವಾಗುತ್ತದೆ. ಕಲಾ ವಿದ್ಯಾರ್ಥಿಗಳಿಗೊಂತು ಸಾಹಿತ್ಯ ಸಮ್ಮೇಳನ ಒಂದು ದೊಡ್ಡ ಹಬ್ಬವಿದ್ದಂತೆ. ಇಲ್ಲಿನ ಪ್ರತಿಯೊಂದು ವಿಷಯವು ಕೂಡ ಅವರಿಗೆ ಸಂಬಂಧಪಟ್ಟಿದ್ದೇ ಅಗಿರುತ್ತದೆ. ಪುಸ್ತಕ ಬರೆಯುವುದರಿಂದ ಹಿಡಿದು ಪುಸ್ತಕಗಳ ಮಾರಾಟವಾಗುವವರೆಗಿನ ಪ್ರತಿ ಮಾಹಿತಿಯನ್ನು ಅವರು ಪಡೆಯಬಹುದು. ಸಾಹಿತಿಗಳ ದರ್ಶನ ಸಾಹಿತ್ಯ ಸಮ್ಮೇಳನಕ್ಕೆ ಲೇಖಕರುಗಳು ಬಹಳಷ್ಟು ಮಂದಿ ಬರುತ್ತಾರೆ.ಅವರ ಭೇಟಿ ಮಾಡುವ ಅವಕಾಶವನ್ನು ವಿದ್ಯಾರ್ಥಿಗಳು ಪಡೆಯಬಹುದು. ಅವರ ಅನುಭವ, ಬರವಣಿಗೆ ಶೈಲಿ, ಅವರು ಆಯ್ದುಕೊಳ್ಳವ ಕಥಾ ವಸ್ತು ಹೀಗೆ ಬರವಣಿಗೆಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು. ಆಕರ್ಷಕ ಪುಸ್ತಕ ಮೇಳ ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಗೊಳ್ಳುವ ಪುಸ್ತಕ ಮೇಳದಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಖರೀಧಿಸಬಹುದು. ಹಲವಾರು ಪ್ರಕಾಶನಗಳ ಪುಸ್ತಕಗಳು, ವಿಶೇಷ ಸಂಗ್ರಹಗಳು, ವಿವಿಧ ದೇಶಗಳ ಪುಸ್ತಕ, ಭಾಷಾಂತರಗೊಂಡ ಪುಸ್ತಕ, ಹೀಗೆ ಹಲವು ಬಗೆಯ ಪುಸ್ತಕಗಳನ್ನು ಪಡೆಯುಬಹುದಾಗಿದೆ. ಅದೇ ರೀತಿ ವಿವಿಧ ವಸ್ತುಗಳ ಅಂಗಡಿಗಳು ಇಲ್ಲಿರುತ್ತವೆ.

 ಸಾಧಕರಿಗೆ ಗೌರವ :- ತಾಲೂಕಿನ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಹಲವಾರು ಸಾಧಕರಿಗೆ ಗೌರವ ಅಭಿನಂದನೆ ನಡೆಯಲಿದೆ.

 ಸಮಯದೊಂದಿಗೆ ನಡಿಗೆ ಈ ಸಮ್ಮೇಳನದ ವೈಶಿಷ್ಟ: – ಸಮಯದ ಹೊಂದಾಣಿಕೆಯೊಂದಿಗೆ ಸರಿಯಾದ ಸಮಯಕ್ಕೆ ಈ ಸಮ್ಮೇಳನದ ಎಲ್ಲಾ ಕಾಯ೯ಕ್ರಮಗಳು ನಡೆಯಲಿವೆ.

 ಅತ್ಯುತ್ತಮ ಪ್ರಚಾರ: -ಈಗಾಗಲೇ ಈ ಸಮ್ಮೇಳನ “ಸುಹಾಸo”ಗೆ ಭಜ೯ರಿ ಪ್ರಚಾರ ಸಿಕ್ಕಿದೆ. ಕನ್ನಡ ಸಂಸ್ಕ್ರತಿ ಇಲಾಖಾ ಸಚಿವರಿಂದ ಹಿಡಿದು ಸ್ವಾಮೀಜಿಯವರೆಗೆ ಅಭಿನಂದನಾ ಹೇಳಿಕೆ, ಬ್ಯಾನರ್ ಗಳು, ಆಕಷ೯ಕ ಆಮಂತ್ರಣ ಪತ್ರಿಕೆ ಹಂಚಿಕೆ ಹೀಗೆ ಉತ್ತಮ ಪ್ರಚಾರ ದೊರಕಿದೆ.

ಡಿ.30 ರಂದು ನಡೆಯುವ ಈ ಸಾಹಿತ್ಯ ಜಾತ್ರೆ ಯ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯುವ ಮುಖಂಡ ಮಹೇಶ್ ಠಾಕೂರ್ ರವರ ತಂಡ ಅದೇ ರೀತಿ ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ , ಕಾಯ೯ದಶಿ೯ ಜನಾಧ೯ನ್ ಕೊಡವೂರು ತಂಡ ಅವಿರತವಾಗಿ ದುಡಿಯುತ್ತಿದೆ.

ತಾವೆಲ್ಲರೂ ಈ ಹಬ್ಬಕ್ಕೆ ಬನ್ನಿ ನಿಮ್ಮವರನ್ನು ಕರೆತನ್ನಿ’

 ರಾಘವೇಂದ್ರ ಪ್ರಭು, ಕವಾ೯ಲು ಸಂ.ಕಾಯ೯ದಶಿ೯ 

 
 
 
 
 
 
 
 
 
 
 

Leave a Reply