ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮಿಂಚಿ ಮರೆಯಾದ ಕಣ್ಮಣಿ ಶ್ರೀಮತಿ ರಂಜನಿ ಹೆಬ್ಬಾರ್: ಡಾ ಶ್ರೀ ಕಿರಣ ಹೆಬ್ಬಾರ್

ರಾಗಧನ (ರಿ) ಉಡುಪಿ ಸಂಸ್ಥೆಯು ಪರ್ಕಳದ ಸರಿಗಮ ಭಾರತಿ ವೇದಿಕೆಯಲ್ಲಿ ಏರ್ಪಡಿಸಿದ್ದ ವಿದುಷಿ ರಂಜನಿ ಹೆಬ್ಬಾರ್ ಸಂಸ್ಮರಣಾ ಸಂಗೀತ ಕಛೇರಿಯ ಸಂದರ್ಭದಲ್ಲಿ ಅವರು ರಂಜನಿ ಸಂಸ್ಮರಣೆಯನ್ನು ಮಾಡುತ್ತಾ ಮಾತನಾಡುತ್ತಿದ್ದರು. ರಂಜಿನಿ ಅವರ ಸಂಗೀತದ ಮಾಧುರ್ಯ, ವೈಭವ ಹಾಗೂ ಸೌಂದರ್ಯ ತರಂಗಗಳು ಇನ್ನೂ ಈ ಮಣ್ಣಿನಲ್ಲಿ ಕಂಪನಗಳನ್ನು ಮೂಡಿಸುತ್ತಿದೆ. ಸಂಗೀತದೊಂದಿಗೆ ಆಕೆಯ ಆಧ್ಯಾತ್ಮಿಕ ಯಾನವೂ ಜೊತೆಯಾಗಿ ಸಾಗುತ್ತಿತ್ತು, ಸಂಗೀತ ಸಾಧನೆಯಲ್ಲಿ ಇಂದಿನ ಯುವ ಪೀಳಿಗೆಯ ಸವಾಲುಗಳನ್ನು ಚೆನ್ನಾಗಿ ಅರಿತುಕೊಂಡಿದ್ದ ಅವರು ಅದಕ್ಕಾಗಿ ಸಂಕಲ್ಪವನ್ನು ಮಾಡಿಕೊಂಡಿದ್ದರು. ಆಕೆ ಭೌತಿಕವಾಗಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಆಕೆ ಮರೆಯಬಾರದವಳು ಹಾಗೂ ಮರೆಯಲಾಗದವರು ಎಂದು ಅಭಿಪ್ರಾಯಪಟ್ಟರು. ಅವರ ಸಂಕಲ್ಪವನ್ನು ಪೂರೈಸುವ ಹೊಣೆ ನಮ್ಮದಾಗಿದೆ ಎಂದು ಹೇಳಿದರು. ನಂತರ ವಿನಯ್ ಎಸ್.ಆರ್. ಅವರು ಸಂಸ್ಮರಣಾ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಅವರಿಗೆ ವಯೊಲಿನ್ ನಲ್ಲಿ ಮಹತೀ ಕೆ. ಕಾರ್ಕಳ ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಶ್ರೀಮತಿ ಶರ್ಮಿಳ ರಾವ್ ಹಾಗೂ ಶಿಷ್ಯರಿಂದ ವಯೊಲಿನ್ ವಾದನ ನಡೆಯಿತು. ಅವರಿಗೆ ಬಾಲಚಂದ್ರ ಭಾಗವತ್ ಮೃದಂಗದಲ್ಲಿ ಸಹಕರಿಸಿದರು.

 
 
 
 
 
 
 
 
 
 
 

Leave a Reply