ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದಲ್ಲಿ ರಕ್ತದಾನ ಶಿಬಿರ

ಮಣಿಪಾಲದ ಕೆಎಂಸಿ ಆಸ್ಪತ್ರೆಯೊಂದಿಗೆ ಮಿಲಾಗ್ರಿಸ್ ಕಾಲೇಜು ಕಲ್ಯಾಣ್ ಪುರ ಮತ್ತು ಇದರ ಆಶ್ರಯದೊಂದಿಗೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ನವೆಂಬರ್ 21, 2023 ರಂದು ಕಾಲೇಜು ನ ಆವರಣದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು.

     ಮಣಿಪಾಲದ ಕೆಎಂಸಿ ಆಸ್ಪತ್ರೆಯ ರಕ್ತ ಕೇಂದ್ರದ ನಿರ್ದೇಶಕಿ ಡಾ.ಶಮೀ ಶಾಸ್ತ್ರಿ ಮಾತನಾಡಿ, ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿ ಬರುವ ದಾನಿಗಳು ಕಡಿಮೆ ಇರುವುದರಿಂದ ಇಂದು ಆಸ್ಪತ್ರೆಗಳು ನಿರ್ಗತಿಕ ರೋಗಿಗಳ ರಕ್ತದ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದನ್ನು ಪೂರೈಕೆ ಮಾಡಲು ವಿದ್ಯಾರ್ಥಿ ಸಮುದಾಯವನ್ನು ಹುರಿದುಂಬಿಸಿದರು.ನಿಯತಕಾಲಿಕವಾಗಿ ರಕ್ತದಾನ ಮಾಡುವ ಉತ್ಸಾಹವನ್ನು ಜನರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

     ವಿವಿಧ ಉತ್ಪನ್ನಗಳನ್ನು ಉತ್ಪಾದಿಸಲು ಅಗಾಧವಾದ ಕೈಗಾರಿಕೆಗಳು ಇರುತ್ತವೆ. ಆದರೆ ಮಾನವ ದೇಹವನ್ನು ಹೊರತುಪಡಿಸಿ ಯಾವುದೂ, ಒಂದು ಹನಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. 

ಕೆಲವೊಮ್ಮೆ ನಮ್ಮ ಸ್ವಂತಕ್ಕಾಗಿ ಮತ್ತು ಸಂಬಂಧಿಕರಿಗೆ ರಕ್ತವನ್ನು ಹುಡುಕುವುದು ಒಂದು ಸವಾಲಾಗಿರುತ್ತದೆ, ಹಾಗಾಗಿ ಪ್ರತಿಯೊಬ್ಬರೂ ರಕ್ತದಾನವನ್ನು ದಿನನಿತ್ಯದ ಅಭ್ಯಾಸವನ್ನಾಗಿ ಮಾಡಿಕೊಳ್ಳುವ ಪ್ರಾಮುಖ್ಯತೆಗೆ ಒತ್ತು ನೀಡಿದರು.

     148 ದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾದರು, ಅದರಲ್ಲಿ 92 ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ರಕ್ತದಾನ ಮಾಡಲು ಅರ್ಹರಾಗಿದ್ದರು.

     ಎಚ್‌ಡಿಎಫ್‌ಸಿ ಬ್ಯಾಂಕ್ ಉಡುಪಿ, ಲಯನ್ಸ್ ಕ್ಲಬ್ ಕಲ್ಯಾಣಪುರ, ರೋಟರಿ ಕ್ಲಬ್ ಉಡುಪಿ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್, ರೇಂಜರ್ಸ್ ಮತ್ತು ರೋವರ್ಸ್, ಮಿಲಾಗ್ರಿಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಕಾರ್ಯಕ್ರಮಕ್ಕೆ ಕೈಜೋಡಿಸಿದವು.

     ಕಾಲೇಜಿನ ಐಕ್ಯೂಎಸಿ ಸಂಯೋಜಕರಾಗಿರುವ ಡಾ.ಜಯರಾಮ ಶೆಟ್ಟಿಗಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಶೇಖರ್ ಗುಜ್ಜರಬೆಟ್ಟು, ಸತೀಶ್ ಸಾಲಿಯನ್ ಮತ್ತು ಎನ್.ಎಸ್.ಎಸ್ ಅಧಿಕಾರಿಗಳಾದ ಶ್ರೀಮತಿ ಅನುಪಮಾ ಜೋಗಿ ಹಾಗೂ ಗಣೇಶ್ ನಾಯಕ್ ಉಪಸ್ಥಿತರಿದ್ದರು.

   ಧನ್ಯ ಕೆ ಹೆಬ್ಬಾರ್ ದ್ವಿತೀಯ ಬಿ.ಎ. ಕಾರ್ಯಕ್ರಮವನ್ನು ನಿರೂಪಿಸಿದರು, ದ್ವಿತೀಯ ಬಿ.ಕಾಂನ ನಿಶೆಲ್ ಸ್ವಾಗತಿಸಿ ದ್ವಿತೀಯ ಬಿ.ಕಾಂನ ಶಿವಾನಿ ವಂದಿಸಿದರು.

 
 
 
 
 
 
 
 
 
 
 

Leave a Reply