ವಂದೇ ಭಾರತ್ ಮಿಷನ್ ಗೆ ನೂತನ ಮಾರ್ಗಸೂಚಿ ಬಿಡುಗಡೆ

ಹೊಸದಿಲ್ಲಿ: ವಿಶ್ವಾದ್ಯಂತ ಕೊರೋನಾ ಸೊಂಕು ವ್ಯಾಪಕವಾಗಿ ಹರಡಿರುವ ಮಧ್ಯೆ ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರಲು ಪ್ರಾರಂಭಿಸಿದ ವಂದೇ ಭಾರತ್ ಮಿಷನ್ ಗೆ ಕೇಂದ್ರ ಸರ್ಕಾರ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ವಿದೇಶಗಳಿಗೆ ಹಾರಾಟ ಬೆಳಸಿರುವ ಏರ್ ಟ್ರಾವೆಲ್ ಬಬಲ್ ವಿಮಾನಗಳಿಗೆ ನೂತನ ನಿಯಮಗಳನ್ನು ನೀಡಿದೆ. ಭಾರತಕ್ಕೆ ಹಿಂತಿರುಗುವವರು ಭಾರತದ ವಿಮಾನಯಾನ ಸಚಿವಾಲಯಕ್ಕೆ ಅರ್ಜಿ ಸಲ್ಲಿಸತಕ್ಕದ್ದು. ವಿಶ್ವದ ಯಾವುದೇ ರಾಷ್ಟ್ರಗಳಿಂದ ಭಾರತಕ್ಕೆ ಮರಳಲಿರುವವರು ತಮ್ಮ ಪ್ರಯಾಣದ ವೆಚ್ಚವನ್ನು ಭರಿಸಬೇಕು. ಹೆಚ್ಚಿನ ಮಾಹಿತಿಗಳನ್ನು ಕೇಂದ್ರ ಸರ್ಕಾರ ವೆಬ್ ಸೈಟ್ ನಲ್ಲಿ ಬಿಡುಗಡೆಗೊಳಿಸಲಿದೆ.ಕೊರೋನಾ ನೆಗಟಿವ್ ವರದಿ ಬಂದ ವಿಮಾನಯಾನ ಸಿಬ್ಬಂದಿಗೆ ವಿಮಾನ ನಿರ್ವಹಣೆ  ನೀಡಲಾಗುತ್ತದೆ. ಹಾಗೂ ಈ ಹಿಂದೆ ಅನುಸರಿಸಲಾದ ನಿಯಮಗಳನ್ನು ಕಟ್ಟು ನಿಟ್ಟಾಗೆ ಪಾಲಿಸಬೇಕು ಎಂದು ಸಚಿವಾಲಯ ತಿಳಿಸಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಈಗಾಗಲೇ 11 ಲಕ್ಷಕ್ಕೂ ಅಧಿಕ ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ.

Leave a Reply