ಶ್ರೀಪುತ್ತಿಗೆ ಪರ್ಯಾಯ: ವಾಹನ ಪಾರ್ಕಿಂಗ್ ವ್ಯವಸ್ಥೆ

ಉಡುಪಿ: ಜನವರಿ 17 ಮತ್ತು 18 ರಂದು ನಡೆಯಲಿರುವ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ವಾಹನಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಲು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು ಇದರ ವಿವರ ಈ ರೀತಿ ಇದೆ.

  • ಮಂಗಳೂರು ಕಡೆಯಿಂದ ಬರುವ ಎಲ್ಲಾ ನಮೂನೆಯ ವಾಹನಗಳು – ಜಿ ಶಂಕರ್ ಶಾಮಿಲಿ ಹಾಲ್ ಎದುರು
  • ನಗರದ ಕಡೆಯಿಂದ ಆಗಮಿಸುವ ಎಲ್ಲಾ ನಮೂನೆಯ ವಾಹನಗಳು – ಸೈಂಟ್ ಸಿಸಿಲಿಸ್ ಸ್ಕೂಲ್ ಮೈದಾನ ಅಜ್ಜರಕಾಡು, ಪಿಪಿಸಿ ಕಾಲೇಜು ಪಾರ್ಕಿಂಗ್ ಸ್ಥಳ ಮತ್ತು ಸರ್ವಿಸ್ ನಿಲ್ದಾಣ ಬಳಿಯ ಬೋರ್ಡ್ ಹೈಸ್ಕೂಲ್ ಪಾರ್ಕಿಂಗ್
  • ಕಾರ್ಕಳ, ಮಣಿಪಾಲ ಕಡೆಯಿಂದ ಬರುವ ಎಲ್ಲಾ ನಮೂನೆಯ ವಾಹನಗಳು – ಎಮ್ ಜಿ ಎಮ್ ಕಾಲೇಜ್ ಮೈದಾನ
  • ಕಾರ್ಕಳ, ಮಣಿಪಾಲ ಕಡೆಯಿಂದ ಬರುವ ಎಲ್ಲಾ ನಮೂನೆಯ ವಾಹನಗಳು – ರಾಯಲ್ ಗಾರ್ಡನ್
  • ಸಂತೆಕಟ್ಟೆ ಮಲ್ಪೆ ಕಡೆಯಿಂದ ಬರುವ ವಾಹನಗಳು – ಕರಾವಳಿ ಹೋಟೆಲ್ ಪಾರ್ಕಿಂಗ್ ಸ್ಥಳ
  • ಇತರ ಕಡೆಗಳಿಂದ ಬರುವ ಬೆಂಗಳೂರು ಮತ್ತು ರೂಟ್ ಬಸ್ಸುಗಳು – ಕರಾವಳಿಯಿಂದ ಅಂಬಲಪಾಡಿ ಎರಡೂ ಕಡೆ ಸರ್ವಿಸ್ ರಸ್ತೆ
  • ವಿವಿಐಪಿ ವಾಹನಗಳಿಗೆ – ರಾಜಾಂಗಣ ಪಾರ್ಕಿಂಗ್ ಎಡ ಮತ್ತು ಬಲಬದಿಯಲ್ಲಿ
  • ವಿಐಪಿ ವಾಹನಗಳು – ಡಿ ಮಾರ್ಟ್ ಪಾರ್ಕಿಂಗ್ ಸ್ಥಳ
  • ಎಲ್ಲಾ ಕಡೆಯಿಂದ ಬರುವ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಕಲ್ಸಂಕ ಗುಂಡಿಬೈಲು ರಸ್ತೆಯ ಎರಡೂ ಬದಿ
  • ಕಿನ್ನಿಮೂಲ್ಕಿ ಸ್ವಾಗತ ಗೋಪುರ, ಕನ್ನರ್ಪಾಡಿ ಹೋಗುವ ಮಾರ್ಗದ ಎಲ್ಲಾ ವಾಹನಗಳು – ಅಜ್ಜರಕಾಡು ವಿವೇಕಾನಂದ ಶಾಲೆ, ಭುಜಂಗ ಪಾರ್ಕ್ ಪಕ್ಕದ ರಸ್ತೆ
  • ಮೆರವಣಿಗೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಬರುವ ವಾಹನಗಳು ಕಿತ್ತೂರು ಚೆನ್ನಮ್ಮ ಕ್ರಾಸ್ ರಸ್ತೆಯ ಎರಡೂ ಬದಿ, ಟೌನ್ ಹಾಲ್ ಪಾರ್ಕಿಂಗ್ ಸ್ಥಳ
  • ಪೋಲಿಸ್ ವಾಹನಗಳ ನಿಲುಗಡೆ – ಮದರ್ ಆಫ್ ಸೋರೊಸ್ ಚರ್ಚ್ ಮೈದಾನ
  • ಕುಕ್ಕಿಕಟ್ಟೆ, ಮಣಿಪಾಲ, ಮೂಡುಬೆಳ್ಳೆ, ಕಾರ್ಕಳ ಕಡೆಯಿಂದ ಬರುವ ಎಲ್ಲಾ ನಮೂನೆಯ ವಾಹನಗಳು ಬೀಡಿನಗುಡ್ಡೆ ಕ್ರೀಡಾಂಗಣ, ಮೈದಾನ ಹಾಗೂ ವಿದ್ಯೋದಯ ಹೈಸ್ಕೂಲ್ ಆವರಣ
  • ಅಲೆವೂರು, ಮೂಡುಬೆಳ್ಳೆ, ಕೊರಂಗ್ರಪಾಡಿ, ಕುಕ್ಕಿಕಟ್ಟೆ ಕಡೆಯಿಂದ ಬರುವ ಎಲ್ಲಾ ನಮೂನೆಯ ವಾಹನಗಳು ಅಮ್ಮಣ್ಣಿ ರಾಮಣ್ಣ ಹಾಲ್, ಮುದ್ದಣ್ಣ ಎಸ್ಟೇಟ್, ಕ್ರಿಶ್ಚಿಯನ್ ಹೈಸ್ಕೂಲ್, ಕ್ರಿಶ್ಚಿಯನ್ ಪದವಿಪೂರ್ವ ಮೈದಾನದಲ್ಲಿ ನಿಲ್ಲಿಸುವುದು
  • ನಗರದ ಕಡೆಯಿಂದ ಬರುವ ದ್ವಿಚಕ್ರ ವಾಹನಗಳನ್ನು ನಾಗಬನ ಕ್ರಾಸ್ (ವೆಂಕಟರಮಣ ದೇವಸ್ಥಾನದ ಬಳಿ), ಅಲೆವೂರು ಮೂಡುಬೆಳ್ಳೆ, ಕೊರಂಗ್ರಪಾಡಿ, ಕುಕ್ಕಿಕಟ್ಟೆ ಕಡೆಯಿಂದ ಬರುವ ದ್ವಿಚಕ್ರ ವಾಹನಗಳನ್ನು ಯುಬಿಎಂಸಿ ಚರ್ಚ್ ಮಿಷನ್ ಕಂಪೌಂಡ್ಸ್ ರಸ್ತೆಯಲ್ಲಿ ನಿಲ್ಲಿಸುವಂತೆ ಉಡುಪಿ ಟ್ರಾಫಿಕ್ ಪೊಲೀಸ್ ಪ್ರಕಟಣೆ ತಿಳಿಸಿದೆ.
 
 
 
 
 
 
 
 
 
 
 

Leave a Reply