ಝೀರೋ ಟ್ರಾಫಿಕ್` ಪೊಲೀಸ್ ಆಯುಕ್ತರ ಮೇಲೆ ಸಿಎಂ ಗರಂ!

ಮೈಸೂರು: ತಮ್ಮ ಪ್ರಯಾಣದ ವೇಳೆ ಝೀರೋ ಟ್ರಾಫಿಕ್ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಯಾಕಾಗಿ ಝೀರೋ ಟ್ರಾಫಿಕ್ ಮಾಡಿದ್ದೀರಾ? ಎಂದು ಮೈಸೂರು ಪೊಲೀಸ್ ಆಯುಕ್ತರನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೈಸೂರು ವಿಮಾನ ನಿಲ್ದಾಣದಿಂದ ಜಿಲ್ಲಾ ಪಂಚಾಯತ್ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದ ಸಿಟ್ಟಾದ ಸಿದ್ದರಾಮಯ್ಯ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿ, ‘ನಿಮಗೆ ಗೊತ್ತಿದೆಯಾ, ನಾನು ಝೀರೋ ಟ್ರಾಫಿಕ್ ಮಾಡಬೇಡಿ ಎಂದು ಹೇಳಿದ್ದೇನೆ. DONT DO THAT’ ಎಂದು ಹೇಳುತ್ತಾ ಖಡಕ್ ವಾರ್ನಿಂಗ್ ನೀಡಿದ ಘಟನೆ ಜಿ.ಪಂ ಆವರಣದಲ್ಲಿ ನಡೆದಿದೆ.

 
 
 
 
 
 
 
 
 
 
 

Leave a Reply