ತೊಟ್ಟಿಲ ಆಶ್ರಮದ ಮುಗ್ದ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆಯ ಸಂಭ್ರಮ

ಮಕ್ಕಳೆಂದರೆ ದೇವರ ಸಮಾನ. ಕಲ್ಮಶವಿಲ್ಲದ ಮುಗ್ದ ಮನಸ್ಸಿನ ಪುಟಾಣಿಗಳೊಂದಿಗೆ ಕಳೆಯುವ ಸಮಯವು ಸ್ವರ್ಗದಲ್ಲಿ ಕಳೆದ ಅಮೂಲ್ಯ ಕ್ಷಣಗಳೆಂದರೂ ತಪ್ಪಾಗಲಾರದು. ಇಂತಹ ಮಕ್ಕಳು ನಮ್ಮ ದೇಶದ ಭವಿಷ್ಯ. ಹಿರಿಯರಾದ ನಾವು ಇಂತಹ ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ದೇಶ ಪ್ರೇಮ, ವಿದ್ಯೆಯ ಮಹತ್ವದ ಕುರಿತು ಅರಿವನ್ನು ಮೂಡಿಸುವುದು ಬಹಳ ಅಗತ್ಯ.ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರವು ಮಕ್ಕಳಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ. 

      ಮಿಲಾಗ್ರಿಸ್ ಕಾಲೇಜಿನ ಎನ್.ಎಸ್.ಎಸ್. ಸ್ವಯಂ ಸೇವಕರು ಸಾಮಾಜಿಕ ಕಳಕಳಿಯನ್ನು ಮೂಡಿಸುವಲ್ಲಿ ಸದಾ ಸಿದ್ಧರಾಗಿರುತ್ತಾರೆ. “ನನಗಲ್ಲ ನಿನಗೆ” ಎಂಬಂತೆ ಈ ಬಾರಿಯ ಮಕ್ಕಳ ದಿನಾಚರಣೆಯನ್ನು ಮಮತೆಯ ತೊಟ್ಟಿಲು ಆಶ್ರಮದಲ್ಲಿ ಆಚರಿಸಲಾಯಿತು.

       ಸ್ವಯಂ ಸೇವಕರು ಮಕ್ಕಳಿಗೆ ಹಲವಾರು ಚಟುವಟಿಕೆಗಳನ್ನು, ಆಟಗಳನ್ನು ನಡೆಸಿ ಆಕರ್ಷಕ ಬಹುಮಾನಗಳನ್ನು ನೀಡಿದ್ದಷ್ಟೆ ಅಲ್ಲದೆ ಆ ಚಟುವಟಿಕೆಗಳಿಂದ ಮಕ್ಕಳಿಗೆ ಜೀವನ ಪಾಠವನ್ನು ತಿಳಿಹೇಳಿದರು. ಸ್ವಯಂ ಸೇವಕರೆಲ್ಲ ಒಗ್ಗೂಡಿ ಉಪಯೋಗಿಸದ ಪುಸ್ತಕದ ಹಾಳೆಗಳಲ್ಲಿ ಹಲವಾರು ಪುಸ್ತಕಗಳನ್ನು ತಯಾರಿಸಿದ್ದು,ಅಲ್ಲಿ ವಾಸಿಸುತ್ತಿರುವ ೪೨ ಮಕ್ಕಳಿಗೆ ಆ ಪುಸ್ತಕಗಳನ್ನೆಲ್ಲ ವಿತರಿಸಿದರು ಹಾಗೆಯೇ ಸ್ವಯಂ ಸೇವಕ ಪ್ರಮೋದ್ ಮಕ್ಕಳಿಗೆಲ್ಲ ಪೆನ್ ಹಾಗೂ ಪೆನ್ಸಿಲ್ಗಳನ್ನು ನೀಡಿದರು.

       ಮಕ್ಕಳನ್ನುದ್ದೇಶಿಸಿ ಮಾತನಾಡಿದ ಎನ್. ಎಸ್.ಎಸ್. ಅಧಿಕಾರಿಯಾಗಿರುವ ಶ್ರೀಮತಿ ಅನುಪಮ ಜೋಗಿ ಹಾಗೂ ಪ್ರಾಂಶುಪಾಲರು – ” ಶಿಕ್ಷಣವು ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗಿದೆ. ಉತ್ತಮ ಶಿಕ್ಷಣವನ್ನು ಪಡೆಯುವುದರೊಂದಿಗೆ ಸಾಮಾಜಿಕ ಕಳಕಳಿಯನ್ನು ಪ್ರತಿಯೊಬ್ಬ ಮಗುವು ಬೆಳೆಸಿಕೊಂಡಲ್ಲಿ ಪ್ರತಿಯೊಬ್ಬ ಮಕ್ಕಳು ದೇಶದ ಉತ್ತಮ ಪ್ರಜೆಯಾಗಿ ಹೊರಹುಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳಾಗಿವುದರಿಂದ ಪ್ರತಿಯೊಬ್ಬ ಮಗು ದೇಶ ಹಾಗೂ ಸಮಾಜ ನನಗೇನು ಕೊಟ್ಟಿದೆ ಎಂದು ಆಲೋಚಿಸುವುದಕ್ಕಿಂತ ನಾನು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂದು ಆಲೋಚಿಸಿ ನನಗಲ್ಲ ನಿನಗೆ ಎಂದು ಇನ್ನೊಬ್ಬರಿಗೆ ಆದರ್ಶವಾಗಬೇಕು” ಎಂದು ಕಿವಿ ಮಾತು ಹೇಳಿದರು.

       ಕಾಲೇಜಿನ ಪ್ರಾಂಶಪಾಲರಾದ ಡಾ. ವಿನ್ಸೆಂಟ್ ಆಳ್ವ, ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಮತಿ ಅನುಪಮ ಜೋಗಿ, ಶ್ರೀ ಗಣೇಶ್ ನಾಯಕ್, ಪಬ್ಲಿಕ್ ರಿಲೇಶನ್ ಆಫೀಸರ್ ರವಿನಂದನ್ ಭಟ್ ಹಾಗೂ ಅನಿಲ್ ದಾಂತಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply