ವಿಪ್ರಶ್ರೀ ವಿಸ್ತೃತ ಕಟ್ಟಡದ ಉದ್ಘಾಟನೆ

ಮಲ್ಪೆ: ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ರಜತ ಮಹೋತ್ಸವದ ಅಂಗವಾಗಿ  ವಿಪ್ರಶ್ರೀ ಸಭಾಂಗಣದಲ್ಲಿ ಎಪ್ರಿಲ್ 14 ರಂದು  ಬೆಳಿಗ್ಗೆ 108 ಕಾಯಿ ಗಣಹೋಮ , ಸತ್ಯಶ್ರೀ ಕಿರು ಸಭಾಂಗಣ ಉದ್ಘಾಟನೆ ಹಾಗು ನಾಮಫಲಕ ಅನಾವರಣ, ನೂತನ ಕಾರ್ಯಾಲಯದ ಉದ್ಘಾಟನೆ, ವಿಪ್ರಶ್ರೀ ವಿಸ್ತೃತ ಸಭಾಂಗಣ ಉದ್ಘಾಟನೆ ಹಾಗು ರಜತ ಮಹೋತ್ಸವದ ಸಮಾರೋಪ ಸಮಾರಂಭ ಮತ್ತು ವಾರ್ಷಿಕ ಮಹಾ ಸಭೆ ನಡೆಯಲಿದೆ.

ಉದ್ಘಾಟನೆ ಹಾಗೂ ಆಶೀರ್ವಚನ‌ ನೀಡಲು ಶ್ರೀ ಪಲಿಮಾರು‌ ಮಠಾಧೀಶರಾದ  ಶ್ರೀ ಶ್ರೀ ವಿದ್ಯಾಧೀಶ  ತೀರ್ಥ ಶ್ರೀ ಪಾದರು, ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ರಾದ ಸಚ್ಚಿದಾನಂದ ಮೂರ್ತಿ, ಧಾರ್ಮಿಕ ಚಿಂತಕರಾದ ಪಂಜ ಭಾಸ್ಕರ ಭಟ್,ಮರ್ಣೆ ಶ್ರೀ ಉಮೇಶ್ ಭಟ್, ಆಗಮಿಸಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭ ಹಾಗೂ ವಾರ್ಷಿಕ ಮಹಾಸಭೆ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ‌ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನದೊಂದಿಗೆ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಡಾ.ವಿಜಯಬಲ್ಲಾಳ್, ರಾಜ‌ಗೋಪಾಲ್ ಭಟ್ ಹಾಗೂ ಮಂಜುನಾಥ ಉಪಾಧ್ಯ ಪಾಲ್ಗೊಳ್ಳಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ರಘುಪತಿ ಭಟ್ ವಹಿಸಿಕೊಳ್ಳಲಿದ್ದಾರೆ ಎಂದು  ಕೊಡವೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ನಾರಾಯಣ ಬಲ್ಲಾಳ್, ಕಾರ್ಯ ದರ್ಶಿ ಶ್ರೀನಿವಾಸ ಬಾಯರಿ ಹಾಗು ರಜತೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಹಾಗು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ  ನೃತ್ಯ ನಿಕೇತನ‌ ಕೊಡವೂರು ಸಂಸ್ಥೆಯಿಂದ ನಾರಸಿಂಹ ನೃತ್ಯ ‌ರೂಪಕ ಪ್ರದರ್ಶನವಿದೆ.

ಚಿತ್ರ : ಶ್ರೀನಿವಾಸ ಉಪಾಧ್ಯ 

 

 

 
 
 
 
 
 
 
 
 
 
 

Leave a Reply