ಮಣೂರು -ಫ್ರೌಢಶಾಲಾ ವಿಭಾಗದ ಕಬಡ್ಡಿ ಪಂದ್ಯಾಕೂಟ ಉದ್ಘಾಟನೆ

ಕೋಟ: ಕಬಡ್ಡಿ ಎನ್ನುವುದು ಗ್ರಾಮೀಣ ಕ್ರೀಡೆಯಾಗಿ ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದ್ದಾರೆ

ಗುರುವಾರ ಕೋಟ ಪಡುಕರೆ ಸಂಯುಕ್ತ ಫ್ರೌಢಶಾಲೆಯಲ್ಲಿ ಉಡುಪಿ ಜಿ.ಪಂ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸರಕಾರಿ ಸಙಯುಕ್ತ ಫ್ರೌಢಶಾಲೆ ಮಣೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ಫ್ರೌಢಶಾಲಾ ಬಾಲಕ ಬಾಲಕೀಯರ ವಿಭಾಗ ಕಬಡ್ಡಿ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಂದು ಕ್ರೀಡೆಯಲ್ಲಿ ಉತ್ಸಾಹ ಅತ್ಯಗತ್ಯ ಆದರೆ ಅದಲ್ಲಿ ನಿರಂತವಾಗಿ ಪಳಗಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ,ಪ್ರಸ್ತುತ ದಿನಗಳಲ್ಲಿ ಸರಕಾರ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.ಇದರ ಲಾಭವನ್ನು ಇಂದಿನ ಯುವ ಸಮೂಹ ಪಡೆದುಕೊಂಡು ಸಾಧನೆಯ ಮೆಟ್ಟಿಲುಏರಬೇಕಾಗಿದೆ ,ಕ್ರೀಡೆಯಲ್ಲಿ ಸೋಲು ಗೆಲುವು ಸರ್ವೇಸಾಮಾನ್ಯ ಆದರೆ ಸೋತೆ ಎನ್ನುವುದನ್ನು ಬಿಟ್ಟು ಸಾಧನೆಯ ಶಿಖರ ಏರಲು ಪ್ರಯತ್ನಿಸಿ ಎಂದು ಕ್ರೀಡಾಳುಗಳಿಗೆ ಕರೆ ಇತ್ತರು
ರಾಜ್ಯ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮಾತನಾಡಿ ಪ್ರಸ್ತುತ ದೈಹಿಕ ಶಿಕ್ಷಕರ ಕೊರತೆ ಎದುರಿಸುತ್ತಿದ್ದೇವೆ ಸರಕಾರ ಹೆಚ್ಚಿನ ಮುತುವರ್ಜಿ ವಹಿಸಿ ಖಾಲಿಯಾಗಿರುವ ದೈಹಿಕ ಶಿಕ್ಷಕರನ್ನು ಭರ್ತಿ ಮಾಡಬೇಕು ತನ್ಮೂಲಕ ಕ್ರೀಡೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್‌ಕುಮಾರ್ ವಹಿಸಿದ್ದರು.

,ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ ನಾಯಕ್, ಉಡುಪಿ ಜಿಲ್ಲಾ ಅಮೇಚುರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಜೇಂದ್ರ ಸುವರ್ಣ,ಕೋಟ ಪಡುಕರೆ ಲಕ್ಷಿ÷್ಮÃ ಸೋಮಬಂಗೇರ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್,ಮಣೂರು ಪಡುಕರೆ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ,ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಶಿಕ್ಷಣ ಇಲಾಖೆ ಸಂಯೋಜಕ ಪ್ರಕಾಶ್ ಬಿ.ಪಿ,ರಾಘವ ಶೆಟ್ಟಿ ಬೇಳೂರು,
ಮಣೂರು ಸಂಯುಕ್ತ ಪ್ರೌಢಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಯಂತಿ, ವಾಹಿನಿ ಯುವಕ ಮಂಡಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಸ್ಪAದನ ಬಳಗ ಮಣೂರು ಅಧ್ಯಕ್ಷ ಪ್ರವೀಣ್ ಶೆಟ್ಟಿ, ತಾಲೂಕು ಪರಿವೀಕ್ಷಣಾ ಅಧಿಕಾರಿ ಪದ್ಮವಾತಿ ಪ್ರಾಸ್ತಾವನೆ ಸಲ್ಲಿಸಿದರು. ಫ್ರೌಢಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪ್ರೌಢಶಾಲಾ ಶಿಕ್ಷಕ ಶ್ರೀಧರ ಶಾಸ್ತಿç ನಿರೂಪಿಸಿದರು.ದೈಹಿಕ ಶಿಕ್ಷಕ ಶೇಖರ್ ಕುಮಾರ್ ವಂದಿಸಿದರು.ಶಿಕ್ಷಕ ರಾಮದಾಸ ನಾಯಕ್,ಸತೀಶ್ಚಂದ್ರ ಶೆಟ್ಟಿ ,ರವಿಕಿರಣ್ ಕೋಟ ಸಹಕರಿಸಿದರು

 
 
 
 
 
 
 
 
 
 
 

Leave a Reply