ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ‌ಮಾಡಿಕೊಂಡ ವಿದ್ಯಾರ್ಥಿ…!!

ಮಂಗಳೂರು ‌ ನನ್ನ ಸಾವಿಗೆ ಕಾಲೇಜ್ ಆಡಳಿತ ಮಂಡಳಿ ಉಪನ್ಯಾಸಕನೇ ಕಾರಣ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ‌ಮಾಡಿಕೊಂಡ ವಿದ್ಯಾರ್ಥಿ.

ಮಂಗಳೂರಿನ ಕರಾವಳಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊಟೇಲ್ ಮ್ಯಾನೇಜೆಂಟ್ ಕೋರ್ಸ್ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಕಾಲೇಜಿನ ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಬೆಂಗಳೂರು ಮೂಲದ ವಿದ್ಯಾರ್ಥಿ ಭರತ್(20) ಉರ್ವಾ ಪೋಲಿಸ್ ಠಾಣೆಯ ಸಮೀಪದಲ್ಲಿ ಇರುವ ತಾನು ವಾಸಿಸುತ್ತಿದ್ದ ಪಿಜಿಯಲ್ಲಿ ನೇಣಿಗೆ ಶರಣಾದ ದುರ್ದೈವಿ.

ಭರತ ಸಾಯುವ ಮೊದಲು ಡೆತ್ ನೋಟ್ ಬರೆದಿದ್ದು, ಕರಾವಳಿ ಕಾಲೇಜಿನ ಮ್ಯಾನೇಜ್ಮೆಂಟ್ ಮತ್ತು ಅಲ್ಲಿನ ಉಪನ್ಯಾಸಕ ರಾಹುಲ್ ಎಂಬವರೇ ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಿದ್ದಾನೆ.

ಭರತ್ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದು ಕಾಲೇಜಿನಲ್ಲಿ ರಾಹುಲ್ ಎಂಬ ಪ್ರಾಧ್ಯಾಪಕ ಬೇರೆ ವಿದ್ಯಾರ್ಥಿಗಳ ಮುಂದೆ ತನ್ನನ್ನು ಅವಹೇಳನ ಮಾಡುತ್ತಿದ್ದ ಬಗ್ಗೆ ತಾಯಿ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ಕಾಲೇಜಿನಲ್ಲಿ ಡೊನೇಶನ್ ಮತ್ತು ಟ್ಯೂಷನ್ ಫೀಸ್ ಹೆಸರಲ್ಲಿ 60 ಸಾವಿರ ಮತ್ತು 70 ಸಾವಿರ ಒಂದು ವರ್ಷದ ಅವಧಿಗೆ ಪಡೆದಿದ್ದಾರೆ. ಹೀಗಿದ್ದರೂ, ಕಾಲೇಜಿನಲ್ಲಿ ಸರಿಯಾದ ಪ್ರಾಧ್ಯಾಪಕರಿಲ್ಲ ಎಂದು ಭರತ್ ತಾಯಿ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.

ನಿನ್ನೆ ಬೆಳಗ್ಗೆ ಭರತ್ ಪ್ರೊಜೆಕ್ಟ್ ರೆಕಾರ್ಡ್ ನೀಡುವುದಕ್ಕಾಗಿ ಕಾಲೇಜಿಗೆ ತೆರಳಿದ್ದು ಅಲ್ಲಿದ್ದ ರಾಹುಲ್ ಈತನ ಪ್ರೊಜೆಕ್ಟ್ ರೆಕಾರ್ಡ್ ತಿರಸ್ಕರಿಸಿದ್ದಾರೆ.

ಅಲ್ಲದೆ, ನೀನು ಈ ಬಾರಿ ಪರೀಕ್ಷೆಗೆ ಕುಳಿತುಕೊಳ್ಳಲು ಅನರ್ಹ ಎಂದು ಬೈದು ಕಳಿಸಿದ್ದರು. ಇದರಿಂದ ಬೇಸತ್ತ ಭರತ್‌ ಮರಳಿ ಪಿಜಿಗೆ ಬಂದಿದ್ದು ತಾಯಿಗೆ ಫೋನ್ ಮಾಡಿದ್ದು ಸ್ವೀಕರಿಸದೇ ಇದ್ದಾಗ ವಾಟ್ಸಪ್ ಮೆಸೇಜ್ ಮಾಡಿ ತನ್ನ ನೋವನ್ನು ಹೇಳಿಕೊಂಡಿದ್ದ.

ಭರತ್ ಮಾಡಿದ್ದ ಮೆಸೇಜ್ ನೋಡಿದ‌ ತಾಯಿ ಕೂಡಲೇ ಆತನಿಗೆ ಕರೆ ಮಾಡಿದ್ದು, ಆತ ಸ್ವೀಕರಿಸಿರಲಿಲ್ಲ. ಅದಾಗಲೇ ದುಡುಕಿನ‌ ನಿರ್ಧಾರ ಕೈಗೊಂಡ ಭರತ್ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ.

ಭರತ್ ತನ್ನ ತಾಯಿಗೆ ಮಾಡಿರುವ ಮೆಸೇಜ್
ಇಂದು ಮುಂಜಾನೆ ಮಂಗಳೂರಿಗೆ ಬಂದ ಭರತ್ ತಂದೆ ತಾಯಿ ಭಾಸ್ಕರ್ ಮತ್ತು ಶೋಭಾ ಅವರು ತಮ್ಮ ಮಗನ ಸಾವಿಗೆ ಕಾರಣವಾದ ಪ್ರಾಧ್ಯಾಪಕ ರಾಹುಲ್ ಮತ್ತು ಕಾಲೇಜು ಚೇರ್ಮನ್ ಗಣೇಶ್ ರಾವ್ ವಿರುದ್ಧ ದೂರು ನೀಡಿದ್ದು, ಅವರ ದೂರನ್ನಾಧರಿಸಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply