ಕೃಷ್ಣಾನುಗ್ರಹ ಅನಾಥಾಶ್ರಮಕ್ಕೆ ಪಲಿಮಾರು ಶ್ರೀಪಾದರ ಭೇಟಿ

ಉಡುಪಿ: ಇಲ್ಲಿಗೆ ಸಮೀಪದ ಸಂತೆಕಟ್ಟೆಯಲ್ಲಿ ಶ್ರೀಕೃಷ್ಣಚಾರಿಟೇಬಲ್ ಟ್ರಸ್ಟ್(ರಿ) ನಡೆಸುತ್ತಿರುವ ಶ್ರೀಕೃಷ್ಣಾನುಗ್ರಹ ಅನಾಥಾಶ್ರಮಕ್ಕೆ ಉಡುಪಿಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಭೇಟಿ ನೀಡಿದರು. 

ಆಶೀರ್ವಚನ ನೀಡಿದ ಶ್ರೀಪಾದರು ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂಸ್ಥೆಗೆ ಬರುವವರೆಗೆ ಎಲ್ಲಿಯೋ ಅನಾಥರಾಗಿದ್ದ ಮಕ್ಕಳು ಈ ಸಂಸ್ಥೆ ಬಂದ ಬಳಿಕ ಅನಾಥರಲ್ಲ. ಅವರಿಗೆ ಮಮತೆಯಿಂದ ಲಾಲನೆ-ಪಾಲನೆದೊರೆಯುತ್ತಿದೆ. ಶ್ರೀಕೃಷ್ಣನ ಅನುಗ್ರಹ ದೊರಕಿ, ಮಹಾಭಾರತದ ಕರ್ಣನಂತೆ ಈ ಮಕ್ಕಳಲ್ಲಿಯೂ ಹಲವು ಕರ್ಣರು ಮೂಡಿ ಬರಲಿ ಎಂದು ಹಾರೈಸಿದರು.

ಶ್ರೀಕೃಷ್ಣಚಾರಿಟೇಬಲ್ ಟ್ರಸ್ಟಿನ ಅಂಗಸಂಸ್ಥೆಯಾದ ಶ್ರೀಕೃಷ್ಣಾನುಗ್ರಹ ಅನಾಥಾಶ್ರಮವು ದಿ| ಶ್ರೀ ಟಿ.ವಿ.ರಾವ್ ಅವರ ಕನಸಿನಕೂಸು.ಪರಿತ್ಯಕ್ತ-ನಿರ್ಗತಿಕ ಮಕ್ಕಳ ಬಾಳಿನ ಆಶಾಕಿರಣವಾದ ಈ ಸಂಸ್ಥೆಯು ಕರ್ನಾಟಕ ಸರಕಾರದಿಂದ ಅರ್ಹ ಸಂಸ್ಥೆ ಹಾಗೂ ದತ್ತು ಸ್ವೀಕಾರ ಕೇಂದ್ರವಾಗಿ ಮಾನ್ಯತೆ ಪಡೆದಿದ್ದು ಸುಮಾರು 235 ಅನಾಥ ಮಕ್ಕಳು ದಾಕಲುಗೊಂಡಿದ್ದಾರೆ, ಕಳೆದ 10ವರ್ಷಗಳಿಂದ ಸುಮಾರು 82 ಮಕ್ಕಳನ್ನು ದತ್ತು ಸ್ವೀಕಾರ ಪ್ರಕ್ರಿಯೆಯ ಮೂಲಕ ಅರ್ಹ ಪೋಷಕರ ಮಡಿಲಿಗೆ ಸೇರಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದಾಗಿದೆ.ದಿ| ಶ್ರೀ ಟಿ.ವಿ.ರಾ ಸ್ಥಾಪಿಸಿದ್ದ ಈ ಸಂಸ್ಥೆಯನ್ನು ಈಗ ಡಾ | ಉಮೇಶ ಪ್ರಭು ಮುನ್ನೆಡೆಸುತ್ತಿದ್ದು , ಪಲಿಮಾರು ಶ್ರೀಪಾದರು ಗೌರವಾಧ್ಯಕ್ಷರಾಗಿ ಆಶೀರ್ವಚನ ನೀಡಿ ಹರಸಿದ್ದು ಈ ಸಂಸ್ಥೆಗೆ ಇನ್ನೂ ಹೆಚ್ಚಿನ ಸಮಾಜ ನೈತಿಕ ಬಲ ಬಂದಂತಾಗಿದೆ.

 
 
 
 
 
 
 
 
 
 
 

Leave a Reply