ಎರಡು ದಿನಗಳ ಬೃಹತ್ ಉದ್ಯೋಗ ಮೇಳದ ಸಮಾರೋಪ ಸಮಾರಂಭ ಕಾರ್ಯಕ್ರಮ 

ಉಡುಪಿ : ಗ್ರಾಮೀಣ ಬಂಟರ ಸಂಘದ ಸಭಾಭವನ ನಿರ್ಮಾಣ ಮತ್ತು ಅಭಿವೃದ್ಧಿ ಸಮಿತಿ (ರಿ.) -ಚಾರಿಟೇಬಲ್ ಟ್ರಸ್ಟ್ ಕುಂತಳ ನಗರ, ಮಣಿಪುರ, ಉಡುಪಿ ಇವರಿಂದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಯಶಸ್ವಿ ಯಾಗಿ ನೆರವೇರಿತು.

ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್, ಉಡುಪಿ ಗ್ರಾಮೀಣ ಬಂಟರ ಸಂಘದ ಕ್ಯಾಂಪಸ್, ಕುಂತಲ್ ನಗರ, ಮಣಿಪುರ, ಉಡುಪಿ ಇಲ್ಲಿ ನಡೆದ ಉದ್ಯೋಗ ಮೇಳದ ಸಮಾರೋಪ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ದೇಶದ ಅತೀ ದೊಡ್ಡ ಸಮಸ್ಯೆ ನಿರುದ್ಯೋಗ. ಕೊರೋನ ಕಾರಣದಿಂದ ಬಹಳಷ್ಟು ಜನ ಕೆಲಸ ಕಳೆದುಕೊಳ್ಳುವಂತಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಈ ಉದ್ಯೋಗ ಮೇಳ ದಿಂದ ಬಹಳಷ್ಟು ಗ್ರಾಮೀಣ ಪ್ರತಿಭೆಗಳಿಗೆ ಇಂದು ಉದ್ಯೋಗ ದೊರಕುವಂತಾಗಿದೆ. ಭೂ ಮಸೂದೆಯ ಸಂದರ್ಭದಲ್ಲಿ ಬಹಳಷ್ಟು ಬಂಟರು ಭೂಮಿಯನ್ನು ಕಳೆದು ಕೊಂಡು ಉದ್ಯೋಗ ವಿಲ್ಲದ ಪರಿಸ್ಥಿತಿ ಬಂದಾಗ ದಿ. ಮುಲ್ಕಿ ಸುಂದರಾಮ ಶೆಟ್ಟಿ ಯವರು ಉದ್ಯೋಗದಾತರಾದರು. ಇಂದು ತಮ್ಮ ಸೇವೆ ಅಮೋಘ ಎಂದು ಶ್ಲಾಘಸಿದರು.

ಉದ್ಯೋಗ ಮೇಳದಲ್ಲಿ 25 ಕಂಪನಿ ಗಳು ಭಾಗವಸಿದ್ದು, ಶೇಕಡಾ 40% ರಷ್ಟು ಅಭ್ಯರ್ಥಿ ಗಳು ಆಯ್ಕೆ ಯಾಗಿದ್ದು., ಅವರೆಲ್ಲರೂ ಗ್ರಾಮೀಣ ಬಂಟರ ಸಂಘದ ಸ್ಕಿಲ್ ಡೆವಲಪ್ಮೆಂಟ್ ಕಾರ್ಯಕ್ರಮ ದಡಿಯಲ್ಲಿ ತರಬೇತು ಹೊಂದಿದವರಾಗಿದ್ದಾರೆ. ಇಷ್ಟು ಉದ್ಯೋಗ ಆಕಾಂಕ್ಷಿ ಗಳಿಗೆ ನಮ್ಮಿಂದ ಉದ್ಯೋಗ ದೊರಕಿರುವುದು ತುಂಬಾ ಹೆಮ್ಮೆ ಅನಿಸುತ್ತಿದೆ, ಎಂದು ಕಾರ್ಯಕ್ರಮ ಸಂಯೋಜಕರಾದ ಶ್ರೀ ಗುರುಪ್ರಶಾಂತ್ ಭಟ್ ಹೇಳಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಬಂಟರ ಸಂಘದ ಉಡುಪಿ ಅಧ್ಯಕ್ಷರಾದ ಜಯರಾಮ್ ಹೆಗಡೆ ಮಣಿಪಾಲ ನಾಗೇಶ್ ಹೆಗಡೆ ಇಂದ್ರಾಳಿ ಜಯಕರ್ ಶೆಟ್ಟಿ ಉದಯಕುಮಾರ್ ಶೆಟ್ಟಿ ಕಿದಿಯೂರು ಎಂ ಡಿ ಮೈಸೂರ್ ಎಲೆಕ್ಟ್ರಿಕಲ್ ದೇವಿ ಪ್ರಸಾದ್ ಶೆಟ್ಟಿ ಅಂಡಾರು ಅಧ್ಯಕ್ಷರು ಚೆಂಬರ್ ಆಫ್ ಕಾಮರ್ಸ್ ಯೋಗೇಶ್ ಶೆಟ್ಟಿ ಅಧ್ಯಕ್ಷರು ಜೆಡಿಎಸ್, ಕುಲ್ಯಾಡಿ ಸುರೇಶ್ ನಾಯಕ್ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಗುರುಪ್ರಸಾದ್ ಭಟ್,ದಿವ್ಯಾರಾಣಿ,ಪ್ರದೀಪ್ ವೇಣು ಜಯರಾಮ್ ಸಕರಾಂ ಶೆಟ್ಟಿ ದೆಂದೂರುಕಟ್ಟೆ ಸುರೇಶ್ ಶೆಟ್ಟಿ ತೊನ್ಸೇ ಮನೋಹರ್ ಶೆಟ್ಟಿ ಡಾಕ್ಟರ್ ಎಚ್ ಬಿ ಶೆಟ್ಟಿ ನವೀನ್ ಚಂದ್ರ ಶೆಟ್ಟಿ ಕಾರ್ತಿಕ್ ಶೆಟ್ಟಿ ವಿಜಿತ್ ಶೆಟ್ಟಿ ರಮೇಶ್ ಶೆಟ್ಟಿ, ಪದ್ಮನಾಭ ಹೆಗಡೆ ರಜನಿ ಶೆಟ್ಟಿ ಪ್ರದೀಪ್ ಶೆಟ್ಟಿ ದಯಾನಂದ್ ಶೆಟ್ಟಿ, ಹರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply