ಕೆಲಸದಲ್ಲಿ ವಿಪರೀತ ಒತ್ತಡ; ಯುವಕ ಆತ್ಮಹತ್ಯೆ!

ಕೆಲಸದಲ್ಲಿ ವಿಪರೀತ ಒತ್ತಡವಿದ್ದ ಹಿನ್ನೆಲೆಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ನಗರದ ವಿಶ್ವವಿದ್ಯಾಲಯ ಆವರಣದ ಪಾಳು ಬಿದ್ದ ಗೋಡಾನ್‍ನಲ್ಲಿ ನಡೆದಿದೆ.

ಜ್ಯೋತಿಬಾ ಪುಲೆ ಬಡಾವಣೆಯ ನಿವಾಸಿ ಶಶಾಂಕ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಆನ್‍ಲೈನ್ ಎನಿಮೇಶನ್ ಕೆಲಸ ಮಾಡುತ್ತಿದ್ದನು.

ಆನ್‍ಲೈನ್ ಎನಿಮೇಶನ್ಕೆಲಸದಲ್ಲಿ ಬಹಳಷ್ಟು ಒತ್ತಡ ಹಾಕಿಕೊಂಡಿದ್ದ ಶಶಾಂಕ್, ಈ ಒತ್ತಡ ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply