ಉಡುಪಿ: ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರ

ಉಡುಪಿ ವಲಯ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರ ಸಾಧಕ ಕ್ರೀಡಾಪಟುಗಳಿಗೆ ಅಭಿನಂದನೆ ಹಾಗೂ ಸಾಧಕ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಆದಿಉಡುಪಿ ಪ್ರೌಢಶಾಲೆಯ ಸಭಾಭವನದಲ್ಲಿ ಉಡುಪಿ ಬಿಇಒ ಡಾ ಯಲ್ಲಮ್ಮರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಮ್ಮೇಳನವನ್ನು ಉದ್ಘಾಟಿಸಿದ ಆದಿಉಡುಪಿ ಪ್ರೌಢಶಾಲಾ ಶಿಕ್ಷಣ ಸೇವಾ ಸಮಿತಿಯ ಕಾರ್ಯದರ್ಶಿ ಟಿ ಕೆ ಗಣೇಶ ರಾವ್ ಮಾತನಾಡಿ ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು. ಈ ಸಾಲಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಚ್ ದಿವಾಕರ ಶೆಟ್ಟಿ ಸಮ್ಮಾನಿಸಿದರು. ಸಮಾರಂಭದಲ್ಲಿ ಜಿಲ್ಲಾ ದೈ ಶಿ ಅಧಿಕಾರಿ ರವಿಚಂದ್ರ ಕಾರಂತ್, ಯುವ ಸಭಲೀಕರಣ ಸಹಾಯಕ ನಿರ್ದೇಶಕ ರೋಷನ್ ಕುಮಾರ್ ಶೆಟ್ಡಿ,ತಾ ಯುವಜನಾ ಸೇವಾ ಕ್ರೀಡಾಧಿಕಾರಿ ರಿತೇಶ ಶೆಟ್ಟಿ, ನಿವೃತ್ತ ಟಿಪಿಇಒ ವಿಶ್ವನಾಥ ಬಾಯರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಕ್ಷತಾ ಆಡಳಿತ ಮಂಡಳಿಯ ಸಂತೋಷ್ ಬಲ್ಲಾಳ್ ವಿವಿಧ ಸಂಘದ ಪದಾಧಿಕಾರಿಗಳಾದ ಸತೀಶ ಸಾಲಿಯಾನ್, ಕಿರಣ್ ಕುಮಾರ್ ಶೆಟ್ಟಿ ಸುಭಾಶ್ಛಂದ್ರ ಹೆಗ್ಡೆ, ಎಸ್ ಎಸ್ ಪ್ರಸಾದ್, ಡೇವಿಡ್ ಆಲ್ಬರ್ಟ್ ಎಡ್ವಿನ್‌ ಪಿಂಟೋ, ಶಿವ ಕುಮಾರ್ ಸೌಮ್ಯ ಅಮೀನ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ವಲಯ ದೈ ಶಿ ಪರಿವೀಕ್ಷಣಾಧಿಕಾರಿ ಚಂದ್ರಶೇಕರ್ ಸುವರ್ಣ ಸ್ವಾಗತಿಸಿದರು,ಶಿಕ್ಷಕಿ ವಿದ್ಯಾವತಿ ವಂದಿಸಿದರು. ದೈ ಶಿ ಶಿಕ್ಷಕ ವೆಲೇರಿಯನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply