ಮಂಗಳೂರು ಪ್ರಧಾನ ಅಂಚೆ ಕಚೇರಿಗೆ ವಿದೇಶಿ ಪ್ರವಾಸಿಗರ ಭೇಟಿ

ಈ ವರ್ಷದ ಮೊದಲ ವಿದೇಶಿ ಕ್ರೂಸ್ ಇಂದು ನವ ಮಂಗಳೂರು ಬಂದರಿಗೆ ಆಗಮಿಸಿದ್ದು ಅದರಲ್ಲಿದ್ದ ಅನೇಕ ವಿದೇಶಿ ಪ್ರವಾಸಿಗರು ಪಾಂಡೇಶ್ವರದಲ್ಲಿರುವ ಮಂಗಳೂರು ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿ ಅಂಚೆ ಸೇವೆ ಹಾಗೂ ಭಾರತದ ವಿವಿಧ ಅಂಚೆ ಚೀಟಿಗಳ ಬಗ್ಗೆ ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿದರು. ಆಸ್ಟ್ರೇಲಿಯಾದ 2, ಸ್ಪೈನ್ ದೇಶದ 2, ಅಮೆರಿಕಾದ 3 ಹಾಗೂ ನ್ಯೂಯಾರ್ಕ್ ನ 2 ಪ್ರವಾಸಿಗರು ಈ ತಂಡದಲ್ಲಿದ್ದರು.  

ಮಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ ಇರುವ ಫಿಲಾಟೆಲಿಕ್ ಬ್ಯುರೋವು ಇದೀಗ ಅಧಿಕೃತ ಪ್ರವಾಸಿ ತಾಣವಾಗುವ ಪ್ರಕ್ರಿಯೆಯಲ್ಲಿದೆ. ಇಲ್ಲಿಗೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರಿಗೆ ಶ್ರೀಮತಿ ದೀಪಾ ಅವರು ಅಂಚೆ ಚೀಟಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪ್ರವಾಸಿಗರು ಅಂಚೆ ಕಚೇರಿಯ ಕಾರ್ಯ ನಿರ್ವಹಣೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿಂದಲೇ ಅವರು ಅವರವರ ದೇಶಕ್ಕೆ ಚಿತ್ರ ಸಹಿತ ಅಂಚೆ ಕಾರ್ಡ್ ಗಳನ್ನು ಪೋಸ್ಟ್ ಮಾಡಿದರು.  

ವರಿಷ್ಠ ಅಂಚೆ ಪಾಲಕರಾದ ಶ್ರೀ ಶ್ರೀನಾಥ್ ಬಸ್ರೂರು ಅವರು ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿ ಅವರಿಗೆ ಅಂಚೆ ಕಚೇರಿಯ ಸೇವೆಗಳ ಬಗ್ಗೆ ತಿಳಿಸಿದರು. ವಿದೇಶಿ ಪ್ರವಾಸಿಗರಿಗೆ ಭಾರತೀಯ ಅಂಚೆಯ ಬಗ್ಗೆ ಹೆಚ್ಚು ಮಾಹಿತಿ ನೀಡುವ ವಿಶೇಷ ಕಿಟ್ ನ್ನು ಕೂಡ ಇಲ್ಲಿನ ಫಿಲಾಟೆಲಿಕ್ ಬ್ಯುರೋದಲ್ಲಿ ಲಭ್ಯಗೊಳಿಸಲಾಗಿದೆ. 

 
 
 
 
 
 
 
 
 
 
 

Leave a Reply