ಪರೀಕ್ಷೆಯನ್ನೇ ಬಹಿಷ್ಕರಿಸಿದ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು.

ಹಿಜಾಬ್ ಮತ್ತು ಕೇಸರಿ ವಿವಾದದಲ್ಲಿ ‌ಕೋರ್ಟ್ ತೀರ್ಪು ‌ಬರುವವರೆಗೆ ಶಾಂತಿ ಕಾಪಾಡಿ ಎಂದು ಸರಕಾರ ಆದೇಶ ನೀಡಿದರೂ ಶಿವಮೊಗ್ಗ ನಗರದ ಶಾಲೆಯೊಂದರಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಕಾರಣ ವಿದ್ಯಾರ್ಥಿನಿಯರು ಪರೀಕ್ಷೆಯನ್ನೇ ಬಹಿಷ್ಕರಿಸಿದ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗದ ಮೇನ್ ಮಿಡ್ಲ್ ಸ್ಕೂಲ್​​ನಲ್ಲಿ ಇಂದು ಎಸ್​ಎಸ್​​ಎಲ್​ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆದಿದೆ. ಪರೀಕ್ಷೆಗೆ ಎಂದಿನಂತೆ 13 ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬಂದಿದ್ದರು. ಈ ವೇಳೆ ಸಿಬ್ಬಂದಿ ಹಿಜಾಬ್​ ತೆಗೆದು ಪರೀಕ್ಷೆಗೆ ಹಾಜರಾಗಲು ಸೂಚಿಸಿದ್ದಾರೆ.ಆದರೆ ಈ ವಿದ್ಯಾರ್ಥಿಗಳು ಇದಕ್ಕೆ ಒಪ್ಪಿಗೆ ನೀಡಲಿಲ್ಲ.

ಹಿಜಾಬ್​ ಧರಿಸಲು ಅವಕಾಶ ನೀಡಿದರೆ ಮಾತ್ರ ಪರೀಕ್ಷೆ ಬರೆಯುತ್ತೇವೆ ಎಂದು ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ಶಾಲಾ ಸಿಬ್ಬಂದಿ ಅವಕಾಶ ನೀಡದ ಕಾರಣ ಪರೀಕ್ಷೆಯನ್ನು ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

 
 
 
 
 
 
 
 
 
 
 

Leave a Reply