ಮಾದಕ ವ್ಯಸನದ ಜೊತೆಗೆ ಮೊಬೈಲ್ ಕೂಡ ವ್ಯಸನವಾಗಿ ಯುವ ಪೀಳಿಗೆಯನ್ನು ಕಾಡುತ್ತಿದೆ~ಲೋಹಿತ್ ಕೆ.

ಸಂತಮೇರಿ ಕಾಲೇಜಿನ ವ್ಯಸನಮುಕ್ತ ಕೋಶ ಮತ್ತು ಐಕ್ಯೂಎಸಿ ಇದರ ನೇತೃತ್ವದಲ್ಲಿ ಸೋಮ ವಾರ ನಡೆದ ‘ಮಾದಕ ವ್ಯಸನ ಮತ್ತು ಯುವ ಜನತೆ’ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡ  ಲೋಹಿತ್ ಕೆ. ಆಪ್ತ ಸಮಾಲೋಚಕರು, ಮನೋರೋಗ ವಿಭಾಗ, ಡಾ| ಎ.ವಿ. ಬಾಳಿಗಾ ಆಸ್ಪತ್ರೆ, ದೊಡ್ಡಣಗುಡ್ಡೆ ಇವರು ಮಾತನಾಡಿ, ಮಾದಕ ವ್ಯಸನಕ್ಕೆ ಯಾರು ಬೇಕಾದರೂ ಒಳಗಾಗಬಹುದು.
ಅದಕ್ಕೆ ವಯಸ್ಸಿನ ಹಂಗಿಲ್ಲ. ಆಸೆಯೇ ವ್ಯಸನಕ್ಕೆ ಕಾರಣ, ವ್ಯಸನದಿಂದ ಚಿತ್ತ ವಿಘಟನೆ ಯಾಗುತ್ತದೆ. ಮಾದಕ ವ್ಯಸನದಿಂದಲೇ ಇಂದು ಸಮಾಜದಲ್ಲಿ ಅತ್ಯಾಚಾರ, ವಿವಾಹ ವಿಚ್ಛೇದ ನೆಗಳು ಹೆಚ್ಚಾಗುತ್ತಿವೆ. ವ್ಯಸನಕ್ಕೆ ಒಳಗಾದ ವ್ಯಕ್ತಿ ಆತ್ಮಸಾಕ್ಷಿಗೆ ವಿರುದ್ಧವಾಗಿ ಸಮಾಜ ಘಾತಕ ಚಟುವಟಿಕೆಗಳಲ್ಲಿ ತೊಡಗುತ್ತಾನೆ. ಮಾದಕ ವ್ಯಸನದ ಜೊತೆಗೆ ಮೊಬೈಲ್ ಕೂಡ ವ್ಯಸನವಾಗಿ ಯುವ ಪೀಳಿಗೆಯನ್ನು ಕಾಡುತ್ತಿದೆ. 
 

ಆದ್ದರಿಂದಭಾವನೆಗಳನ್ನು ಆತ್ಮೀಯರ ಜೊತೆಗೆ ಹಂಚಿಕೊಳ್ಳಿ. ಇದರಿಂದ ಒತ್ತಡ ಕಡಿಮೆ ಮಾಡಿ ಕೊಳ್ಳಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ, ಕೀಳರಿಮೆಯಿಂದ ಹೊರಬನ್ನಿ, ಮಾದಕ ವ್ಯಸನದಿಂದ ದೂರವಿದ್ದರೆ ಆರೋಗ್ಯ ಸದೃಢವಾಗಿರುತ್ತದೆ. ಆರೋಗ್ಯ ಇದ್ದರೆ ಉತ್ತಮ ಉದ್ಯೋಗಗಳಿಸ ಬಹುದು ಎಂದು ಹೇಳಿದರು.

ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್‌ರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹದಿ
ಹರೆಯದ ಮಕ್ಕಳು ದುಃಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಹೇಳಿದರು. ಕಾಲೇಜಿನ ವ್ಯಸನಮುಕ್ತ ಕೋಶದ ಸಂಚಾಲಕರಾದ ಡಾ|ಗುಲಾಬಿಯವರು ಸ್ವಾಗತಿಸಿದರು. 

 
ಪ್ರಥಮ ಬಿಸಿಎ ವಿದ್ಯಾರ್ಥಿನಿ ಛಾಯಾ ನಿರೂಪಿಸಿದರು. ವ್ಯಸನಮುಕ್ತ ಕೋಶದ ಸಹ ಸಂಚಾಲಕಿ ಪದ್ಮಾಸಿನಿ ಯು. ಇವರು ವಂದಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ವೃಂದ ದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply