ವಿಶ್ವ ಗೀತಾ ಪರ್ಯಾಯದಲ್ಲಿ ನವರಸ ಕೃಷ್ಣ

ಶ್ರೀ ಪುತ್ತಿಗೆ ಪರ್ಯಾಯೋತ್ಸವ 2024-26 “ವಿಶ್ವ ಗೀತಾ ಪರ್ಯಾಯ” ಇದರ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣ ಮಠದ ರಥಭೀದಿಯ “ಆನಂದ ತೀರ್ಥ” ಮಂಟಪದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಉಡುಪಿ ಇದರ ನೃತ್ಯ ನಿರ್ದೇಶಕಿಯಾದ ನೃತ್ಯ ವಿದುಷಿ ಶ್ರೀಮತಿ ವೀಣಾ ಮುರಳಿಧರ ಸಾಮಗ ಇವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ “ ನವರಸ ಕೃಷ್ಣ “ ನೃತ್ಯ ರೂಪಕವು ನರ್ತಿಸಲ್ಪಟ್ಟಿತು.

ನವರಸಗಳಾದ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಬತ್ಸ , ಅದ್ಭುತ ಹಾಗೂ ಶಾಂತ ರಸವನ್ನು ಶ್ರೀ ಕೃಷ್ಣನ ಕಥೆಗಳ ಮೂಲಕ ಭರತನಾಟ್ಯ ನೃತ್ಯ ಸಂಯೋಜನೆಯೊಂದಿಗೆ ಪ್ರಸ್ತುತಿಪಡಿಸಲಾಯಿತು.

ಈ ನೃತ್ಯರೂಪಕದ ಸಾಹಿತ್ಯ ಹಾಗೂ ಸಂಗೀತ ಸಯೋಜನೆಯನ್ನು ಪಾಡಿಗರು ಶ್ರೀ ಶ್ರೀಧರಾಚಾರ್ಯ ರವರು ಮಾಡಿರುವರು. ಶ್ರೀಕೃಷ – ಸತ್ಯಭಾಮೆಯರ ಶೃಂಗಾರ , ಗೋಪಿಕೆಯರ ಮಡಿಕೆ ಹೊಡೆಯುವ ಹಾಸ್ಯ, ಕುಚೇಲಕೃಷ್ಣರ ಸ್ನೇಹದಲ್ಲಿ ಬರುವ ಕರುಣರಸ, ಬ್ರಿಕಾಸುರನನ್ನು ಸಂಹರಿಸುವ ರೌದ್ರ ರಸ,
ಕಾಳಿಂಗ ಮಾರ್ಥನದ ವೀರರಸದಲ್ಲಿ, ತಾಯಿ ಯಶೋಧಯ ಬೆದರಿಕೆಗೆ ಭಯಪಡುವ ಬಾಲಕೃಷ್ಣ,
ಅಣ್ಣ ಬಲರಾಮನೊಂದಿಗೆ ಮಾವ ಕಂಸನನ್ನು ಸಂಹರಸಿದಲ್ಲಿ ಭೀಬತ್ಸ ರಸ, ಯಶೋದಾ ದೇವಿಗೆ ತನ್ನ ಪುಟ್ಟ ಬಾಯಲ್ಲಿ ಬ್ರಹ್ಮಾಂಡವನ್ನು ತೋರಿಸಿದಲ್ಲಿ ಅದ್ಭುತ ರಸ, ಹಾಗೂ ಶ್ರೀ ಮಧ್ವಾಚಾರ್ಯರಿಗೆ ಒಲಿದ ದ್ವಾರಕೆಇಂದ ಉಡುಪಿಗೆಬಂದ ಅನ್ನ ಬ್ರಹ್ಮನಾಗಿ ಶಾಂತರೂಪದಲ್ಲಿ ಇರುವ ಪೊಡವಿಗೊಡೆಯ ಶ್ರೀ ಕೃಷ್ಣ ಪರಮಾತ್ಮ.

ಕಂಸ ಹಾಗೂ ಬ್ರಿಕಾಸುರನ ವೇಷವು ಯಕ್ಷಗಾನದ ವೇಷಭೂಷಣಗಳಾಗಿ ಬಹುಸುಂದರವಾಗಿತ್ತು. ಎಲ್ಲಾ ಪಾತ್ರದಾರಿಗಳಿಂದ ಕೂಡಿದ ಮನಸೆಳೆದ ನೃತ್ಯ ರೂಪಕ ನವರಸ ಕೃಷ್ಣ. ಹಿಮ್ಮೇಳದಲ್ಲಿ ನಟುವಂಗ ಹಾಡುಗಾರಿಕೆ ನೃತ್ಯ ಸಂಯೋಜನೆ ನೃತ್ಯ ವಿದುಷಿ ಶ್ರೀಮತಿ ವೀಣಾ ಮುರಳಿಧರ ಸಾಮಗ ಪೀಟೀಲಿನಲ್ಲಿ ವಿದ್ವಾನ್ ಶ್ರೀಧರ ಆಚಾರ್ಯ ಪಾಡಿಗರು ಮೃದಂಗದಲ್ಲಿ ಬಿ ಎಂ ಪೃಥ್ವಿರಾಜ್ ಸಾಮಗ ಉಡುಪಿ
ಕೊಳಲಿನಲ್ಲಿ ಡಾ. ಬಾಲಕೃಷ್ಣ ಮಣಿಪಾಲ್ ವರ್ಣಲಂಕಾರದಲ್ಲಿ ಶ್ರೀ ರಮೇಶ್ ಪಣಿಯಾಡಿ ಸಹಕರಿಸಿದರು

 
 
 
 
 
 
 
 
 
 
 

Leave a Reply