Janardhan Kodavoor/ Team KaravaliXpress
29.6 C
Udupi
Sunday, August 1, 2021

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಪ್ರಸ್ತುತಿಯಲ್ಲಿ  ಆನ್ಲೈನ್ನಲ್ಲಿ ‘ವಿಶ್ವ ಕಲಾ ಸಂಭ್ರಮ’ 

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ಪ್ರಸ್ತುತಿಯಲ್ಲಿ ಈ ಸಮುದಾಯ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ವಿಶ್ವ ಸ್ಥಳೀಕರಣ ದಿನಾಚರಣೆಯ ಪ್ರಯುಕ್ತ 5 ದಿನಗಳ ಕಾಲ ಆನ್ಲೈನ್ನಲ್ಲಿ ‘ವಿಶ್ವ ಕಲಾ ಸಂಭ್ರಮ’ ವನ್ನು ಆಯೋಜಿಸಲಾಗಿದೆ.
ಸೋಶಿಯಲ್ ಮೀಡಿಯಾಗಳಾದ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ  ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.  ಸ್ಥಳೀಯ ಕಲಾವಿದರಾಗಿದ್ದು  ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ,ಜಾದುಗಾರ ಜೂನಿಯರ್ ಶಂಕರ್ , ನಟಿ ಮಾನಸಿ ಸುಧೀರ್, ರೂಬಿಕ್ ಕ್ಯೂಬ್ ಸಾಧಕ ಪೃಥ್ವೀಶ  ಭಟ್, ಯೋಗಪಟು ತನುಶ್ರೀ ಪಿತ್ರೋಡಿ ಭಾಗವಹಿಸಲಿದ್ದಾರೆ.
 ಈ ಕಲಾ ಸಂಭ್ರಮ ಜೂನ್ 16ರಿಂದ 20ರವರೆಗೆ ಪ್ರತಿದಿನ ಸಂಜೆ 6.00 ರಿಂದ  Samskruthi Vishwa ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ  ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್ ಪಿ ತಿಳಿಸಿರುತ್ತಾರೆ.
- Advertisement -

ಸಂಬಂಧಿತ ಸುದ್ದಿ

Leave a Reply

ಸುಪ್ರಭಾತ

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!