ಉಪ್ಪೂರು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ). ಉಡುಪಿ ತಾಲೂಕು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಉಪ್ಪೂರು ವಲಯ, ಜನಜಾಗೃತಿ ವೇದಿಕೆ ಉಡುಪಿ ತಾಲೂಕು ಮತ್ತು ಶ್ರೀ ರಾಮಕ್ಷತ್ರಿಯ ಸಂಘ. ಉಡುಪಿ ಇವರ ಸಂಯುಕ್ತ ಆಶಯದಲ್ಲಿ ಡಾ|ವೀರೇಂದ್ರ ಹೆಗ್ಗಡೆ ಆಶೀರ್ವಾದದೊಂದಿಗೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗೂ ಸಾಧನ ಸಮಾವೇಶ ಭಾನುವಾರ ಉಪ್ಪೂರು ರಾಮಕ್ಷತ್ರಿಯ ಸಭಾಭವನದಲ್ಲಿ ಜರುಗಿತು. 

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಮಾರಂಭ ಉದ್ಘಾಟಿಸಿ, ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಚನೆ ಯೋಜನೆ ಇತರರಿಗೆ ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳು ಮಹಿಳೆಯರನ್ನು ಮುಖ್ಯವಾಹಿನಿಗೆ ತಂದು ಸ್ವಾಲಂಬನೆಯ ಬದುಕು ಕಲಿಸಿಕೊಟ್ಟಿದೆ ಎಂದರು. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯದ ಅಧ್ಯಕ್ಷೆ ಮಮತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ೬ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಸಾಧಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಪ್ರಬಂಧಕ ಪ್ರದೀಪ್, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಜನ ಜಾಗೃತಿ ಉಪ್ಪೂರು ವಲಯ್ಯಾಧ್ಯಕ್ಷ ರಾಜು ಪೂಜಾರಿ, ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಡುಪಿ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಕೆ.ಟಿ.ನಾಯಕ್, ಉದ್ಯಮಿ ವಿಶ್ವನಾಥ ಶೆಟ್ಟಿ, ಶ್ರೀ ವೀರೇಂದ್ರ ಹೆಗ್ಗಡೆ ಅಭಿಮಾನಿ ಬಳಗದ ಅಧ್ಯಕ್ಷ ಕೆ.ಸಿ ಅಮೀನ್, ಸಮಾಜಸೇವಕ ಫ್ರ್ಯಾಂಕಿ ಡಿಸೋಜಾ, ಮಿನಿಸ್ಟ್ರಿ ಆಫ್, ರೂರಲ್ ಡೆವೆಲಪ್‌ನ ರಾಜ್ಯ ನಿರ್ದೇಶಕ ಮಂಜುನಾಥ್, ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಲಕ್ಷ್ಮೀಶ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಮನೀಶ್ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ೬ ಒಕ್ಕೂಟಗಳ ಅದ್ಯಕ್ಷರು, ಪದಾಕಾರಿಗಳು, ಸೇವಾಪ್ರತಿನಿಗಳು, ಸಂಘ ಸಂಸ್ಥೆಗಳ ಪದಾಕಾರಿಗಳು, ಶೌರ್ಯ ವಿಪತ್ತು ನಿರ್ವಹಣಾ ಉಪ್ಪೂರು ಘಟಕದ ಸದಸ್ಯರು, ಉಪಸ್ಥಿತರಿದ್ದರು.

ಉಪ್ಪೂರು ಜಾತಾ ಬೆಟ್ಟು ಒಕ್ಕೂಟದ ಅಧ್ಯಕ್ಷ ಎನ್.ಕೃಷ್ಣ ಸ್ವಾಗತಿಸಿ, ಒಕ್ಕೂಟದ ಮೇಲ್ವಿಚಾರಕ ಮನೀಶ್ ವರದಿ ವಾಚಿಸಿದರು. ಹರೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕೊಳಲಗಿರಿ ಸೇವಾ ಪ್ರತಿನಿ ಶಶಿಕಲಾ ವಂದಿಸಿದರು. ನಂತರ ಸಾಂಸಕೃತಿಕ ಕಾರ್ಯಕ್ರಮ ನಡೆಯಿತು.

 
 
 
 
 
 
 
 
 
 
 

Leave a Reply