​​ಉಡುಪಿ ಮತ್ತು ದ​ಕ ಜಿಲ್ಲಾ ಮಟ್ಟದ​ ​ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ​​

ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ (ರಿ.) ಗಂಗೊಳ್ಳಿ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ.  

2021- 22 ನೇ ಶೈಕ್ಷಣಿಕ ಸಾಲಿನಲ್ಲಿ 8, 9 ಮತ್ತು 10ನೇ ತರಗತಿಯಲ್ಲಿ ಕಲಿಯುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ.  ​​

ಪ್ರಬಂಧದ ವಿಷಯ- ದೇಶಪ್ರೇಮ ಎಂದರೆ? ಆಸಕ್ತಿ ಉಳ್ಳವರು ಪ್ರಬಂಧವನ್ನು ಎ ೪ ಅಳತೆಯ ಕಾಗದದಲ್ಲಿ ಮೂರು ಪುಟಗಳಿಗೆ ಮೀರದಂತೆ ಸ್ವಹಸ್ತಾಕ್ಷರದಲ್ಲಿ ಕನ್ನಡದಲ್ಲಿ ಬರೆಯಬೇಕು.

ಸ್ಪರ್ಧಿಗಳು ಕೊನೆಯ ಪುಟದಲ್ಲಿ ತಮ್ಮ ಪೂರ್ಣ ಹೆಸರು, ಊರು, ಮೊಬೈಲ್ ಸಂಖ್ಯೆ ಮತ್ತು ತಾವು ಕಲಿಯುತ್ತಿರುವ ಶಾಲೆಯ ವಿಳಾಸ ಹಾಗೂ ಮುಖ್ಯೋಪಾಧ್ಯಾಯರ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಬೇಕು. 

ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ಕ್ರಮವಾಗಿ ರೂ. 1500, 1000 ಮತ್ತು 500 ನಗದಿನ ಜೊತೆಗೆ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುವುದು. ಪ್ರಬಂಧವನ್ನು 5-8 -2021ರ ಒಳಗೆ ಪೋಸ್ಟ್ ಮೂಲಕ ಅಥವಾ ಖುದ್ದಾಗಿ ನರೇಂದ್ರ ಎಸ್ ಗಂಗೊಳ್ಳಿ. 
 
ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ.(ರಿ ).ಮ್ಯಾಂಗನೀಸ್ ರಸ್ತೆ ಗಂಗೊಳ್ಳಿ. ಕುಂದಾಪುರ ತಾಲೂಕು 576216 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷ ಭಾಸ್ಕರ ಖಾರ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9242127307, 9743882911, 9901981938, 9980909394 ಸಂಪರ್ಕಿಸಿ​​
 
 
 
 
 
 
 
 
 
 
 

Leave a Reply