ಎಲೆಕ್ಟ್ರಿಕ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‌ಸೆಟ್ ರಿಪೇರಿ ತರಬೇತಿಯ ಸಮಾರೋಪ

ಮಣಿಪಾಲ: ಯುವಕ,ಯುವತಿಯರು ಯುವ ಶಕ್ತಿಯಾಗಬೇಕಾದರೆ ಉದ್ಯೋಗವನ್ನು ಹುಡುಕುತ್ತಾ ಸಮಯ ವ್ಯರ್ಥ ಮಾಡುವ ಬದಲು ಸ್ವ ಉದ್ಯೋಗವನ್ನು ಪ್ರಾರಂಭಿಸಿ ಉದ್ಯೋಗ ಸೃಷ್ಟಿಸ ಬೇಕಾಗಿದೆ. ಕಠಿಣ ಪರಿಶ್ರಮ, ಶ್ರದ್ಧೆ ಇದ್ದಲ್ಲಿ ಸ್ವ ಉದ್ಯೋಗದಲ್ಲಿ ಯಶಸ್ಸು ಕಾಣಬಹುದು. ಹಂತ ಹಂತವಾಗಿ ಇನ್ವೆಸ್ಟ್ ಮಾಡಿ, ಮಾರುಕಟ್ಟೆಗೆ ಹಾಗೂ ಗ್ರಾಹಕರಿಗೆ ತಕ್ಕಂತೆ ಅಪ್‌ಡೇಟ್ ಆಗಿ ಎಂದು ಟೆಕ್ಸ್ಟೈಲ್ಸ್, ಯಶಸ್ವಿ ಉದ್ಯಮಿ ಯುವರಾಜ್ ಲಾ ಅಪೂರ್ವ ಹೇಳಿದರು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಮಣಿಪಾಲದಿಂದ ನಡೆದ ಎಲೆಕ್ಟ್ರಿಕ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‌ಸೆಟ್ ರಿಪೇರಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿ ಮಾತನಾಡಿದರು. 

ಸಂಸ್ಥೆಯ ನಿರ್ದೇಶಕಿ ಸವಿತಾ ಎಸ್ ನಾಯಕ್ ಸ್ವಾಗತಿಸಿದರು.ಗುರುಪ್ರಸಾದ್ ಮತ್ತು ಕಿರಣ್ ತರಬೇತಿಯ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದರು.ಉಪನ್ಯಾಸಕಿ ನವ್ಯ ಕಾರ್ಯಕ್ರಮವನ್ನು ನಿರೂಪಿಸಿ, ಉಪನ್ಯಾಸಕಿ ಶ್ರೇಯಾ ವಂದಿಸಿದರು.

 
 
 
 
 
 
 
 
 
 
 

Leave a Reply