ಕೆಮ್ಮಣ್ಣು: ಗಣಪತಿ ಸಹಕಾರಿ ವ್ಯವಸಾಯಿಕ ಸಂಘದ ಶತಮಾನೋತ್ಸವ “ಶತಾಭಿವಂದನಂ” ಆಚರಣೆಗೆ ಚಾಲನೆ.

ಉಡುಪಿ ಕೆಮ್ಮಣ್ಣು ಗಣಪತಿ ವ್ಯವಹಾರ ವ್ಯವಸಾಯಿಕ ಸಂಘ ಗ್ರಾಹಕರ ನಂಬಿಕೆ, ವಿಶ್ವಾಸ ಉಳಿಸಿಕೊಂಡು ಬಂದಿದ್ದು ಸಿಬ್ಬಂದಿಯ ಉತ್ತಮ ಸೇವೆಯಿಂದ ಇದು ಸಾಧ್ಯವಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಹೇಳಿದರು.
 ಗಣಪತಿ ಸಹಕಾರಿ ವ್ಯವಸಾಯಿಕ ಸಂಘ ಕೆಮ್ಮಣ್ಣು ಇದರ ಶತಾಭಿವಂದನಂ ಕಾರ್ಯಕ್ರಮಕ್ಕೆ ಸಂಸ್ಥೆಯ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
 ಸಂಘದ ಅಧ್ಯಕ್ಷ ಟಿ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ 1923 ರಂದು ಆರಂಭಗೊಂಡ ಈ ಸಂಸ್ಥೆಗೆ 2023 ಕ್ಕೆ 100 ವರ್ಷ ತುಂಬಿದೆ. ಇದರ ಪ್ರಯುಕ್ತ ವಿವಿಧ ಜನ ಉಪಯೋಗಿ ಕಾರ್ಯಕ್ರಮ ನಡೆಯಲಿದ್ದು, 2024ರಂದು ಇದರ ಸಮಾರೋಪ ಅದ್ದೂರಿಯಾಗಿ ನಡೆಯಲಿದೆ ಎಂದರು.
ಶತಾಭಿವಂದನಂ ಪ್ರಯುಕ್ತ ಶತಾಯುಷಿ ಕ್ರಿಸ್ತಿನ್ ಅಂದ್ರಾದೆ ಅವರನ್ನು ಅವರ ಮನೆಯಲ್ಲಿ ಹಿರಿಯ ಸಹಕಾರಿ ಸರಳ ಕಾಂಚನ್ ಗೌರವಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಐಕಳಭಾವ ದೇವಿ ಪ್ರಸಾದ ಶೆಟ್ಟಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಎಸ್‌ಸಿಡಿಸಿಸಿ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ,  ತೋನ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ ರವೀಂದ್ರ, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಕುಂದರ್,  ತೆಂಕನಿಡಿಯೂaರುಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಡಿ ನಾಯಕ್, ಬಡಾನಿಡಿ ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದ ಆಚಾರ್ಯ, ಸಂಸ್ಥಾಪಕರ ಮೊಮ್ಮಗ ಪಿ .ಮಾಧವ ರಾವ್, ಬೀಚ್ ಹೀಲಿಂಗ್ ಹೋಂ ನಿರ್ದೇಶಕ ಡಾ. ಮೊಹಮ್ಮದ್ ರಫೀಕ್, ಕುಂದಾಪುರ ಸಹಾಯಕ ಉಪನಿಬಂಧಕ ಅರುಣ್ ಕುಮಾರ್ ಎಸ್.ವಿ,  ಸಂಘದ ಉಪಾಧ್ಯಕ್ಷ ಬಿ ಅಪ್ಜಲ್ ಸಾಹೇಬ್, ನಿರ್ದೇಶಕರಾದ ನಾರಾಯಣ ಎಸ್ ಬಂಗೇರ, ಗೋಪಾಲಕೃಷ್ಣ ಹೆಗ್ಡೆ, ಸಂತಾನ್ ಲೂವಿಸ್, ಹರೀಶ್ ಶೆಟ್ಟಿ, ಉಮೇಶ್ ಅಮೀನ್, ಪುರುಷೋತ್ತಮ ಸಾಲ್ಯಾನ್, ಲೆನಿ ಫೆರ್ನಾಂಡಿಸ್, ಶಾಮ ಎನ್, ರಾಜೇಂದ್ರ ಪ್ರಸಾದ್, ಲತಾ ಪಿ ರಾವ್, ಲಕ್ಷ್ಮೀ ಉಪಸ್ಥಿತರಿದ್ದರು.
 ಪಾಡಿಗಾರು ಲಕ್ಷ್ಮೀನಾರಾಯಣ ಪ್ರಾರ್ಥಿಸಿ ಉಪಾಧ್ಯ, ಶ್ರೀಧರ್ ಪಿ ಎಸ್ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹೇಶ ಸಾಲ್ಯಾನ್ ವಂದಿಸಿದರು.
 
 
 
 
 
 
 
 
 
 
 

Leave a Reply