ಮಲ್ಪೆ – ‘ಸ್ತನ ಕ್ಯಾನ್ಸರ್” ಮಾಹಿತಿ ಕಾರ್ಯಕ್ರಮ

ಮಲ್ಪೆ ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ ಮಣಿಪಾಲ, ನಗರ ಆರೋಗ್ಯ ತರಭೇತಿ ಕೇಂದ್ರ ಮಲ್ಪೆ ಇವರ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಇವರ ಸಹಯೋಗದಲ್ಲಿ ‘ಸ್ತನ ಕ್ಯಾನ್ಸರ್’ ಮಾಹಿತಿ ಕಾರ್ಯಕ್ರಮ ಗುರುವಾರ ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ ಆಯೋಜಿಸಲಾದ ಮಾಹಿತಿ ಕಾರ್ಯಕ್ರಮವನ್ನು ನಿವೃತ್ತ ತಹಶಿಲ್ದಾರ್ ಗೋಪಾಲ ಪೂಜಾರಿ ಉದ್ಘಾಟಿಸಿದರು. ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜೇಷ್ಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು‌. ಮಾಹಿತಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ನಗರ ಆರೋಗ್ಯ ತರಭೇತಿ ಕೇಂದ್ರ ಮಲ್ಪೆ ಇದರ ಮಹಿಳಾ ವೈದ್ಯಾಧಿಕಾರಿ ಡಾ.ಅಖಿಲಾ ಅವರು ಸ್ತನ ಕ್ಯಾನ್ಸರ್ ನ ಲಕ್ಷಣಗಳು, ಅದನ್ನು ಪತ್ತೆ ಹಚ್ಚುವಿಕೆ, ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರೆ, ಸ್ವಯಂ ಸ್ತನ ತಪಾಸಣೆ ಮಾಡುವ ವಿಧಾನಗಳ ಕುರಿತು ವೈದ್ಯಾಧಿಕಾರಿ ಡಾ.ಅಫ್ರೋಜ್ ಮಾಹಿತಿ ನೀಡಿದರು.

ಡಾ.ಸುಚರಿತಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್‌.ಎಚ್.ವಿ ಕುಸುಮಾ, ಸಮುದಾಯ ವೈದ್ಯಕೀಯ ವಿಭಾಗದ ವೈದ್ಯಕೀಯ ಸಮಾಜ ಸೇವಕಿ ನೀಲಾವತಿ, ಆರೋಗ್ಯ ಸಹಾಯಕಿಯರಾದ ಸುಲೋಚನಾ, ಲವೀನಾ ಸಿಬ್ಬಂದಿಗಳಾದ ನಾಗೇಶ್, ಕಮಲಾ, ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply