ತರಬೇತಿ ಪಡೆದು ಮಾಡಿದ ಯೋಗ ಮನಸ್ಸಿಗೆ ಮುದ ನೀಡುವುದು~ನಾಗಭೂಷಣ್ ಬೇಳೂರು

ಯೋಗ ಮಾಡುವುದರಿಂದ ನಮ್ಮ ಶಾರೀರಿಕ ಹಾಗೂ ಚರ್ಮದ ಕಾಂತಿಯಲ್ಲೂ ವ್ಯತ್ಯಾಸ ಕಾಣಬಹುದು. ಯೋಗ ನಮ್ಮ ಭಾರತೀಯರ ಕೊಡುಗೆ ಅನ್ನುವುದಕ್ಕೆ ಹೆಮ್ಮೆ. ಅನಾದಿ ಕಾಲ ದಿಂದಲೂ ಯೋಗ ಪ್ರಾಣಾಯಾಮ ಮಾಡಿ ಕೊಂಡು ಬಂದಂತ ಅನೇಕ ಉದಾಹರಣೆ ಇವೆ. ಇತ್ತಿಚಿನ ದಿನದಲ್ಲಿ ಅನೇಕರು ಯೋಗದ ಕಡೆ ಒಲವು ನೀಡುತ್ತಾ  ಬರುವುದು ಸಂತೋಷದ ವಿಷಯ.
ಯೋಗಾಸನ ಮಾಡುವಾಗ ಯೋಗಾಸನದ ಫೋಟೋ ನೋಡಿ ಆಸನ ಮಾಡುವವರೇ ಜಾಸ್ತಿ. ಆದರೆ ಆಸನದ ಹೆಸರು ಕೇಳಿದರೆ ತಿಳಿದಿಲ್ಲ ಅನ್ನುವವರೇ ಜಾಸ್ತಿ. ಹೀಗೆ ಮಾಡುವ ಬದಲು ತರಬೇತಿದಾರರ ಬಳಿ ತರಬೇತಿ ಪಡೆದು, ಮಾಡಿದರೆ ಯೋಗವನ್ನು ಸುಲಭವಾಗಿಯೂ, ಉತ್ತಮ ರೀತಿಯಲ್ಲೂ ಮಾಡಲು ಸಾಧ್ಯ. ತರಬೇತಿ ಪಡೆದು ಯೋಗ ಮಾಡಿದರೆ ನಮ್ಮ ದೇಹದ ಮೇಲೆ ಆಗುವ ನೋವು ಹಾಗು ಯಾವುದೇ ದುಷ್ಟಪರಿಣಾಮ ಬೀರುವುದಿಲ್ಲ.

ಯೋಗದ ಒಂದು ವಿಶೇಷ ಅಂದರೆ ಯಾವುದೇ ಉಪಕರಣದ ಅಗತ್ಯ ಇರುವುದಿಲ್ಲ. ನಾವು ಯೋಗ ಮಾಡುವ ಆಸನದ ಹೆಸರು, ಉಪಯೋಗ, ಮಾಡುವ ವಿಧಾನ ತಿಳಿದು ಮಾಡಿದರೆ ಉತ್ತಮ. 
ಯೋಗಾಸನದ ಸ್ಪರ್ಧೆ ಕೂಡಾ ಕೆಲವು ಕಡೆಗಳಲ್ಲಿ ಆಯೋಜನೆ ಮಾಡುತ್ತಾರೆ. ಯೋಗದ ಸ್ಪರ್ಧೆ ಅಂದ್ರೆ ಅಷ್ಟ್ಟು ಸುಲಭದ ಮಾತಲ್ಲ. ಚೀಟಿ ತೆಗೆದು ಅದರಲ್ಲಿ ಬಂದ ಆಸನವನ್ನು ಅವರು ಹೇಳುವ ತನಕ ಆ ಭಂಗಿಯಲ್ಲಿ ಇರಬೇಕು. ಆ ಚೀಟಿಯಲ್ಲಿ ಇದ್ದ  ಆಸನದ ಹೆಸರು ಕಂಡ ನಂತರ,  ಹಂತ ಹಂತವಾಗಿ ಯೋಗ ಮಾಡಬೇಕಿತ್ತು. ಒಂದು ದಿನ ಮಾಡುವ ಯೋಗಕ್ಕೂ ದಿನಾಲೂ ಅಭ್ಯಾಸ ಮಾಡಿ ಮಾಡುವ ಯೋಗಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ.  
ಈ ಸಂದರ್ಭದಲ್ಲಿ ನಮ್ಮೂರ ಪ್ರತಿಭೆ, ಹಾಗೆ ನಮ್ಮ ಪರಿಸರದ ಸನ್ಮಿತ್ರ  ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಪ್ರಕಾಶ್ ರವರ ಬಗ್ಗೆ ಹೇಳಲೇ ಬೇಕು. ಪ್ರಕಾಶ್  ಪ್ರಾಥಮಿಕ ಶಾಲೆಯಲ್ಲಿ ಇರುವಾಗಲೇ ಯೋಗ ಗುರುಗಳಾದ ಸಂಜೀವರ ಬಳಿ ತರಬೇತಿ ಪಡೆದು, ಜಿಲ್ಲೆ , ರಾಜ್ಯ ಹಾಗು ರಾಷ್ಟ್ರ ಮಟ್ಟದ ತನಕ ಸ್ಪರ್ಧಿಸಿ 60ಕ್ಕೂ ಹೆಚ್ಚು ಪ್ರಶಸ್ತಿ ಪಡೆದಿದ್ದಾರೆ. ಹಲವಾರು ಕ್ಲಿಷ್ಟಕರ ಯೋಗಾಸನವನ್ನು ಲೀಲಾಜಾಲವಾಗಿ ಮಾಡುತ್ತಾರೆ.
ಹಲವಾರು ಕಡೆಗಳಲ್ಲಿ ತರಬೇತಿಯನ್ನು ನೀಡುತ್ತಾ ನೂರಾರು ಯೋಗಪಟುಗಳನ್ನು ಸಮಾಜಕ್ಕೆ ನೀಡಿದ್ದಾರೆ. ಪ್ರಕಾಶ್ ರವರು ಅಂತರಾಷ್ಟ್ರೀಯ ಯೋಗ ದಿನವಾದ ಇಂದು ವಿವಿಧ ಯೋಗಾಸನಗಳನ್ನು ಸ್ವತಃ ತಾನೇ ಮಾಡಿ, ಪ್ರದರ್ಶಿಸಿದ್ದಾರೆ.   
ಅದಕ್ಕಾಗಿ ಸ್ನೇಹಿತರೇ ..  ಬರೀ ಯೋಗ ದಿನದಂದು ಯೋಗ ಮಾಡದೇ ಪ್ರತಿ ದಿನ ತಮ್ಮ ಸ್ವಲ್ಪ ಸಮಯವನ್ನು ಯೋಗಕ್ಕಾಗಿ ನೀಡಬೇಕು. ಯೋಗ ಮಾಡಿ ರೋಗದಿಂದ ದೂರ ಉಳಿಯಲು ಪ್ರಯತ್ನಿಸೋಣ.
 
 
 
 
 
 
 
 
 
 
 

Leave a Reply