ಡಾ| ಡೊನಾಲ್ಡ್ ಸೈಮನ್ಸ್‌ ರವರಿಗೆ ಗೌರವ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಕನ್ನಡ ನಾಡು-ನುಡಿ ,ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ವೈದ್ಯರಿಗೆ ಗೌರವ ಪುರಸ್ಕಾರ- 2023

ಡಾ|ಡೊನಾಲ್ಡ್ ಸೈಮನ್ಸ್‌:  ಸಮಾಜದ ಸ್ವಾಸ್ಥ್ಯ ಕಾಪಾಡುವ ವೈದ್ಯರನ್ನು ನಮ್ಮ ಸಮಾಜ ಅವರನ್ನು ದೇವರಿಗೆ ಹೋಲಿಕೆ ಮಾಡಿದ್ದಾರೆ. ನಮ್ಮ ಸಮಾಜ ಹಲವಾರು ವೈದ್ಯರು ತಮ್ಮ ಅಮೂಲ್ಯವಾದ ಸೇವೆಯ ಮೂಲಕ ಮನೆಮಾತಾಗಿದ್ದಾರೆ.ತಮ್ಮ ಕುಟುಂಬಕ್ಕೆ ಕೂಡ ಸರಿಯಾದ ಸಮಯ ನೀಡದೆ ರೋಗಿಗಳಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಂಡು ತಮ್ಮ ಅಪೂವ೯ವಾದ ಸೇವೆ ಸಲ್ಲಿಸುತ್ತಿದ್ದಾರೆ.

ತನ್ನ ಬಿ.ಎಸ್.ಸಿ ಪದವಿಯನ್ನು ಉಡುಪಿಯ ಪ್ರತಿಷ್ಠಿತ ಎಂ.ಜಿ.ಎಂ ಕಾಲೇಜಿನಲ್ಲಿ ಪೂರೈಸಿ, ವೈದ್ಯನಾಗಿ ಸಮಾಜದಲ್ಲಿ ಸೇವೆ ಸಲ್ಲಿಸಬೇಕೆಂಬ ಅದಮ್ಯ ಇಚ್ಚೆಯಿಂದ 1979 ರಲ್ಲಿ ಕೆ.ಎಂ.ಸಿ ಯಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಉತ್ತಮ ಅಂಕಗಳೊಂದಿಗೆ ಪೂರೈಸಿದರು. 1993ರಲ್ಲಿ ಎಂ.ಡಿ ಪದವಿಯನ್ನು ಉತ್ತಮ ಅಂಕಗಳೊಂದಿಗೆ ಪೂರೈಸಿ 1979 ರಿಂದ ಇಂದಿನವರೆಗೆ ಸತತ 44 ವಷ೯ಗಳ ಕಾಲ ಸಾಥ೯ಕ ಸೇವೆ ಯನ್ನು ಸಲ್ಲಿಸುತ್ತಿರುವುದು ಅಭಿನಂದನೀಯ.

ಕೆ.ಎಂ.ಸಿ ಮಣಿಪಾಲದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಉತ್ತಮ ಸೇವೆ ಸಲ್ಲಿಸಿ , ನಂತರ ಸೌದಿ ಅರೇಬಿಯಾದಲ್ಲಿ 6 ವಷ೯ಗಳ ಕಾಲ ವೈದ್ಯಾಧಿಕಾರಿಯಾಗಿ ಕಾಯ೯ ನಿವ೯ಹಿಸಿದರು. 1993ರಿಂದ ವಿವಿಧ ವೈದ್ಯಕೀಯ ಕಾಲೇಜುಗಳಿಗೆ ಸಂದಶ೯ಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮಿಷನ್ ಕಂಪೌಂಡ್ ನಲ್ಲಿ ತನ್ನದೇ ಕ್ಲಿನಿಕ್ ಪ್ರಾರಂಭಿಸಿ ನಿರಂತರ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

1994 ರಲ್ಲಿ ಸಿಟಿ ಆಸ್ಪತ್ರೆಯ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾಗಿಯೂ ಕಾಯ೯ ನಿವ೯ಹಿಸಿ, ವಿದ್ಯಾಥಿ೯ಗಳ ಅಚ್ಚುಮೆಚ್ಚಿನ ಗುರುಗಳಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಲೆ, ಸಾಹಿತ್ಯ’, ಪ್ರಕೃತಿ ಸೇವೆ: – ಸಂಗೀತದಲ್ಲಿ ವಿಶೇಷ ಆಸಕ್ತಿ ಬೆಳೆಸಿರುವ ಇವರು ಗಿಟಾರ್, ಕೀಬೋಡ್೯ನ್ನು ಸುಶ್ರಾವ್ಯವಾಗಿ ನುಡಿಸಬಲ್ಲರು. ‘ಅದೇ ರೀತಿ ಉತ್ತಮ ಕಲಾವಿದ ರಾಗಿಯೂ ಗುರುತಿಸಿಕೊಂಡಿದ್ದಾರೆ. ಇಂಟಿರಿಯರ್ ಡೆಕೊರೇಟರ್ ನಲ್ಲಿ ಆಸಕ್ತಿ ಬೆಳೆಸಿಕೊಂಡಿರುವುದು ಅವರ ಕಲಾಸಕ್ತಿಗೆ ಹಿಡಿದ ಕನ್ನಡಿಯಾಗಿದೆ.

ಮನೆ ಸುತ್ತಮುತ್ತಲು ಹಸಿರಿನ ಹೊನಲು ಇವರು ಮತ್ತು ಅವರ ಶ್ರೀಮತಿಯವರ ಪ್ರಕೃತಿ ಪ್ರೇಮಕ್ಕೆ ಮನಸೋತವರು ನೂರಾರು ಮಂದಿ. ಮನೆಯ ಸುತ್ತ ವಿವಿಧ ಜಾತಿಯ ಗಿಡ ಮರಗಳನ್ನ ಮಕ್ಕಳಂತೆ ಬೆಳೆಸಿರುವುದು ನಿಜಕ್ಕೂ ಅದ್ಬುತ. ಹೀಗೆ ವೈದ್ಯರಾಗಿ ಉತ್ತಮ ಕಲಾವಿದರಾಗಿರುವ ಮಾನ್ಯರು ಸರಳ ಸಜ್ಜನ ವ್ಯಕ್ತಿತ್ವದ ಮೂತಿ೯ ಯಾಗಿದ್ದಾರೆ.

ಜೂನ್ 30ರಂದು ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಗೌರವ ಪುರಸ್ಕಾರ 2023 ನ್ನುನೀಡಿ ಗೌರವಿಸಲಿದ್ದಾರೆ.

~ರಾಘವೇಂದ್ರ ಪ್ರಭು ಕರ್ವಾಲು

 
 
 
 
 
 
 
 
 
 
 

Leave a Reply