ಕರುನಾಡ ರತ್ನ ಪ್ರಶಸ್ತಿಗೆ ಕೆ.ಎಂ.ಖಲೀಲ್ ಆಯ್ಕೆ

ಸುಮಾರು 40 ವರ್ಷಗಳಿಂದ ಛಾಯಾಗ್ರಾಹಕ ಹಾಗೂ ವಿಡಿಯೋ ಗ್ರಾಫರ್ ಆಗಿ ದುಡಿಯುತ್ತಿರುವ ಅದರ ಜೊತೆಗೆ 17 ವರ್ಷಗಳಿಂದ ಮಂಗಳೂರಿನ ಪ್ರತಿಷ್ಠಿತ v4 ಸುದ್ದಿವಾಹಿನಿಯಕಾರ್ಕಳ ತಾಲೂಕಿನ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಎಂ.ಖಲೀಲ್ ಅವರ ಮಾಧ್ಯಮ  ಕ್ಷೇತ್ರದ ಸಾಧನೆಗಾಗಿ ಈ ವರ್ಷದ ಕರುನಾಡ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಘಟಕ ಡಾ.ಬಿ.ಎನ್.ಹೊರಪೇಟಿ ತಿಳಿಸಿದ್ದಾರೆ. ಬೆಂಗಳೂರಿನ ಸುಚಿತ್ರ ಸಭಾಂಗಣದಲ್ಲಿ ಭಾನುವಾರ ಜುಲೈ 23 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
 ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕಾರ್ಕಳ ವಲಯದ ಮಾಜಿ ಅಧ್ಯಕ್ಷರಾಗಿದ್ದಾರೆ. ಕಾರ್ಕಳ ತಾಲೂಕು ಜಮೈತುಲ್ ಫಲ ದಲ್ಲಿ ಸುಮಾರು 10 ವರ್ಷಗಳಿಂದ ಪತ್ರಿಕಾ ಕಾರ್ಯದರ್ಶಿಯಾಗಿಯಾಗಿದ್ದಾರೆ. ನಾಲ್ಕು ವರ್ಷಗಳಿಂದ ಸ್ಥಳೀಯ ಆಯಿಷ ಮಸೀದಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಗ್ರಾಮೋತ್ಸವ ಸಮಿತಿ ಕುರ್ಪಾಡಿ ಅಜೆಕಾರು ನಡೆಸಿದ ನಡೆಸಿದ 24 ನೇ ಗ್ರಾಮೋತ್ಸವ ಮತ್ತು ಮೂರನೇ ಆದಿ ಗ್ರಾಮೋತ್ಸವ ಸಾಹಿತ್ಯ ಸಮ್ಮೇಳನದಲ್ಲಿ ಆದಿ ಗ್ರಾಮೋತ್ಸವ ಯುವ ಸಿರಿ ಗೌರವ ಹಾಗೂ 25.06.2022 ರಂದು ಜರುಗಿದ ಕಿನ್ನಿಗೋಳಿಯ ಯುಗಪುರುಷ ಮತ್ತು ಕಿನ್ನಿಗೋಳಿಯ ಕಥಾ ಬಿಂದು ಪ್ರಕಾಶನ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ಕಾವ್ಯ ಸಂಭ್ರಮದಲ್ಲಿ ಕರ್ನಾಟಕ  ಸಾಧನ ರತ್ನ  ಪ್ರಶಸ್ತಿ ಪಡೆದಿರುತ್ತಾರೆ. ಅಭಿನಂದನೆಗಳು: ಖಲೀಲ್ ಅವರಿಗೆ ಪ್ರಶಸ್ತಿ ಸಿಗುತ್ತಿರುವುದು ಗ್ರಾಮೀಣ ಪ್ರದೇಶದ ಮಾಧ್ಯಮ ಮಿತ್ರರಿಗೆ ಸಲ್ಲುವ ಗೌರವ ಎಂದು ಪತ್ರಕರ್ತರ ವೇದಿಕೆ (ರಿ) ಉಡುಪಿ  ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ಅಭಿನಂದಿಸಿದ್ದಾರೆ.
 
 
 
 
 
 
 
 
 
 
 

Leave a Reply