ವಿಶ್ವಕರ್ಮ ಒಕ್ಕೂಟದ ವತಿಯಿಂದ ಶೈಕ್ಷಣಿಕ ದತ್ತಿನಿಧಿ/ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ

ವಿಶ್ವಕರ್ಮ ಒಕ್ಕೂಟದ ವತಿಯಿಂದ ಶೈಕ್ಷಣಿಕ ದತ್ತಿನಿಧಿ/ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ಉಡುಪಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯರ ಅಧ್ಯಕ್ಷತೆಯಲ್ಲಿ ಜರಗಿತು.ಮೂಡಬಿದ್ರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಆಚಾರ್ಯ, ತೆಂಕನಿಡಿಯೂರು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸುಷ್ಮಾ ರಾಜೇಶ್ ಮತ್ತು ಉಡುಪಿ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ರತ್ನಾಕರ ಆಚಾರ್ಯ ರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಪ್ರವೀಣ್ ಆಚಾರ್ಯರು ಸ್ವಾಗತಗೈದರು. ಪ್ರಧಾನ ಕಾರ್ಯದರ್ಶಿ ಮುರಳೀಧರ ಪ್ರಾಸ್ತಾವಿಕ ಮಾತುಗಳನ್ನಾಡಿದರು. SSLC ಯಲ್ಲಿ ಶೇಕಡಾ 100 ಅಂಕ ಗಳಿಸಿದ ಶ್ರೀನಿಧಿ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಎಂಕಾಂ Rank ವಿಜೇತೆ ಸ್ವಾತಿ, ಪಿಯುಸಿ ಯಲ್ಲಿ ಶೇಕಡಾ 100 ಅಂಕ ಗಳಿಸಿದ ಸಮೀಕ್ಷಾ ಮತ್ತು ವರ್ಷಿತಾ, ಶ್ರೀನಿಧಿ ಯವರನ್ನು ಅಭಿನಂದಿಸಲಾಯ್ತು. 74 ವಿದ್ಯಾರ್ಥಿಗಳಿಗೆ ದತ್ತಿನಿಧಿ ಹಾಗೂ 10 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದಾನಿಗಳ ಮೂಲಕ ವಿತರಿಸಲಾಯ್ತು. ಗಣಪತಿ ಆಚಾರ್ಯ ಮತ್ತು ಅನಂತಯ್ಯ ಆಚಾರ್ಯ ರು ಪುರಸ್ಕೃತರ ಪಟ್ಟಿ ವಾಚಿಸಿದರು. ಗೌರವಾಧ್ಯಕ್ಷರಾದ ಯು. ಕೆ. ಎಸ್. ಸೀತಾರಾಮ ಆಚಾರ್ಯ, ಕೋಶಾಧಿಕಾರಿ ಜನಾರ್ದನ ಆಚಾರ್, ಕಾರ್ಯದರ್ಶಿ ರಮೇಶ್ ಬಂಟಕಲ್, ಸಂಘಟನಾ ಕಾರ್ಯದರ್ಶಿ ಸತೀಶ್ ಆಚಾರ್ಯ,ಇತರ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಗಾಯತ್ರಿ ಮಹಿಳಾ ಮಂಡಳಿಯ ರಾಜೀವಿ ಮತ್ತು ಸಾವಿತ್ರಿ ಪ್ರಾರ್ಥನೆಗೈದರು. ವೈಷ್ಣವಿ ಮತ್ತು ಸುಮನ್ ಅನಿಸಿಕೆ ವ್ಯಕ್ತಪಡಿಸಿದರು. ಕೋಣಿ ನಾರಾಯಣ ಆಚಾರ್ಯ ವಂದಿಸಿದರು. ಹರ್ಷವರ್ಧನ ನಿಟ್ಟೆ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply