ವಾರಾಂತ್ಯದ ಕರ್ಫ್ಯೂಗೆ ಉಡುಪಿ ಸ್ತಬ್ಧ

ಉಡುಪಿ: ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯದ ಕರ್ಫ್ಯೂಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆ ಸಂಪೂರ್ಣ ಸ್ತಬ್ದ.  ವಿಕೇಂಡ್ ಲಾಕ್ ಡೌನ್ ಕಾರಣದಿಂದಾಗಿ ಬೆಳಿಗ್ಗೆ 6ರಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. 

ಕರ್ಫ್ಯೂಗೆ ಬಸ್ ಮಾಲಕರೂ ಬೆಂಬಲ ವ್ಯಕ್ತಪಡಿಸಿದ ಕಾರಣ ಖಾಸಗಿ ಬಸ್ ಗಳು ರಸ್ತೆಗಿಳಿ ಯಲಿಲ್ಲ. ಸರ್ಕಾರಿ ಬಸ್ಗಳು ಸಂಚಾರ ನಡೆಸಿದ್ದವು. ಹೆದ್ದಾರಿ ಸೇರಿದಂತೆ ಒಳ ರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಸಂಚರಿ ಸುತ್ತಿದ್ದವು. ಅಗತ್ಯ ಸೇವೆ ಒದಗಿಸುವ ಔಷಧ ಅಂಗಡಿಗಳು, ವೈದ್ಯಕೀಯ ಸೇವೆ ಮಾತ್ರ ಮುಕ್ತವಾಗಿತ್ತು.

ಜವಳಿ, ಎಲೆಕ್ಟ್ರಾನಿಕ್ಸ್, ಪಾತ್ರೆ, ಮೊಬೈಲ್, ಚಿನ್ನಾಭರಣ, ಪಾದರಕ್ಷೆ, ಹಾರ್ಡ್ ವೇರ್ ಅಂಗಡಿಗಳು. ಸಿನೆಮಾ ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಸ್ಟೇಡಿಯಂ, ಈಜುಕೊಳ, ಬಾರ್, ಕ್ಲಬ್ ಇತ್ಯಾದಿಗಳು ಮುಚ್ಚಿದ್ದವು.

ಎಲ್ಲಾ ಧಾರ್ಮಿಕ ಕೇಂದ್ರಗಳು, ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಅವಕಾಶ ನಿರಾಕರಿ ಸಲಾಗಿತ್ತು. ಅರ್ಚಕರು ಮತ್ತು ಸಿಬಂದಿ ಸೇರಿಕೊಂಡು ಪೂಜೆಗಳಿಗೆ ಅವಕಾಶ ನೀಡಲಾಗಿತ್ತು. ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಮಾರುಕಟ್ಟೆ, ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು

ಚಿತ್ರ : ಸುಶಾಂತ್ ಕೆ.

 

 
 
 
 
 
 
 
 
 
 
 

Leave a Reply