ಯುಪಿಎಂಸಿ- ಯುವ ಹೂಡಿಕೆ ಮಾಹಿತಿ ಕಾರ್ಯಾಗಾರ.

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕ ಮತ್ತು ವಾಣಿಜ್ಯ ವ್ಯವಹಾರ ಆಡಳಿತ ಘಟಕದ ಸಹಭಾಗಿತ್ವದಲ್ಲಿ ಫಿನಾನ್ಶಿಯಲ್ ಎಜುಕೇಶನ್ ಫಾರ್ ಯಂಗ್ ಅಡಲ್ಟ್ ಎಂಬ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದ ಅನುಸಾರವಾಗಿ ಮೂಚುವಲ್ ಫಂಡ್ ಹೂಡಿಕೆಯ ಬಗೆಗೆ ಯುವ ಹೂಡಿಕೆ ಕಾರ್ಯಾಗಾರ ನವೆಂಬರ್ 24 ರಂದು ನಡೆಯಿತು.

ನಿಪ್ಪಾನ್ ಲೈಫ್ ಇಂಡಿಯಾ ಅಸೆಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಉಡುಪಿ ವಲಯದ ಅಧೀಕ್ಷಕ ಶ್ರೀ ವಿನೀತ್ ಶೆಟ್ಟಿ ಪದವಿ ಜೀವನದಲ್ಲಿ ಓದಿನ ಜೊತೆಗೆ ಹೂಡಿಕೆಯ ಬಗ್ಗೆಯೂ ಆಸಕ್ತಿ ವಹಿಸಿ, ಕೇವಲ ನೂರು ರೂಪಾಯಿ ಇಂದಲೂ ಹೂಡಿಕೆ ಶುರು ಮಾಡಬಹುದು, ಆರ್ಥಿಕ ಶಿಸ್ತು ಪ್ರತಿಯೊಬ್ಬ ವ್ಯಕ್ತಿಗೂ ಅತೀ ಮುಖ್ಯ ಎಂಬುದಾಗಿ ತಿಳಿಸಿ, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸೂಕ್ತ ಪರಿಹಾರ ನೀಡಿದರು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್, ಕಾರ್ಯಕ್ರಮದ ಸಂಯೋಜಕ ರಾಘವೇಂದ್ರ ಜಿ.ಜಿ ಉಪಸ್ಥಿತರಿದ್ದರು.
ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಸನೋಬರ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply