ಬ್ರಹ್ಮಕುಮಾರಿಸ್ ಸಂಸ್ಥೆ ವತಿಯಿಂದ 86 ನೇ ವರ್ಷದ ಶಿವ ಜಯಂತಿ ಆಚರಣೆ

ಉಡುಪಿ ಬ್ರಹ್ಮಕುಮಾರಿಸ್ ಸಂಸ್ಥೆ ವತಿಯಿಂದ 86 ನೇ ವರ್ಷದ ಶಿವ ಜಯಂತಿ ಆಚರಣೆಯನ್ನು ಸ್ವತಂತ್ರ ಭಾರತದ ಅಮೃತಮಹೋತ್ಸವ ದಿಂದ ಸ್ವರ್ಣಿಮಾ ಭಾರತದೆಡೆಗೆ ಉಡುಪಿ ಕೆಮ್ಮಣ್ಣು , ಗೀತಾ ಪಾಠಶಾಲೆಯಲ್ಲಿ ದಿನಾಂಕ ಮಾರ್ಚ್ 12 ಶನಿವಾರ ಸಂಜೆ ವಿಶೇಷ ಕಾರ್ಯಕ್ರಮ*

ಬ್ರಹ್ಮಕುಮಾರಿ ಸಂಸ್ಥೆ ಸಂಚಾಲಕಿ ಬಿ ಕೆ ಸುಮಾ ಇವರಿಂದ ಶಿವ ಧ್ವಜಾರೋಹಣ ಹಾಗೂ ಶಿವ ಸಂದೇಶ ನೀಡಿದರು . ಉಡುಪಿ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಗಿರುವ ಕೆಂಪೇಗೌಡ ಇವರಿಂದ ಯೋಗಿಕ್ ಕೃಷಿಯ ಬಗ್ಗೆ ಜಾಗೃತಿ ಮಾಹಿತಿ ನೀಡಲಾಯಿತು. ಪೂಜನಿಯ ಕೃಷಿ ಪದ್ಧತಿ ಅವಲಂಬನೆ ಸಾವಯವ ಕೃಷಿಯಿಂದ ಸಸ್ಯ ಸಂರಕ್ಷಣೆ ಉತ್ತಮ ಆರೋಗ್ಯ ಕಾಪಾಡುವಲ್ಲಿ ಮಾಹಿತಿ ನೀಡಿದರು . 1965 ರಿಂದ 1970 ರ ದಶಕದಲ್ಲಿ ಆಹಾರ ಸ್ವಾಲಂಬನೆ ಹಸಿರು ಕ್ರಾಂತಿ ಪ್ರಾರಂಭವಾಯಿತು ರಸಗೊಬ್ಬರ ಬಳಕೆ ಕಾಂಪೋಸ್ಟ್ ಗೊಬ್ಬರಕ್ಕೆ ತಿಪ್ಪೆಗುಂಡಿ ಮಾಡುವ ವಿಧಾನ , ಕನಿಷ್ಠ ಎರಡು ಹಸುಗಳನ್ನು ಸಾಕಿ ಹಟ್ಟಿ ಗೊಬ್ಬರವನ್ನು ತಯಾರಿಸಿ ಅದರ ಸದ್ಬಳಕೆಯಿಂದ ಉತ್ತಮ ಇಳುವರಿ ಕಂಡುಕೊಳ್ಳಲು ಸಾಧ್ಯ. ಪ್ರತಿಯೊಬ್ಬರೂ ಸಾತ್ವಿಕ ಕೃಷಿಯನ್ನು ಮಾಡುವಂತಿರಬೇಕು. ಪ್ರಾಕೃತಿಕ ಗೊಬ್ಬರವನ್ನು ಉಪಯೋಗಿಸಿ ಆರೋಗ್ಯಯುತವಾದ ತರಕಾರಿ ಫಲ ಬರುವಂತೆ ಬೆಳೆಸಬೇಕು. ಮೊದಲು ಕೃಷಿಕರಿಗೆ ಯೋಗಿ ಕೃಷಿ ಮಾಡುವ ಪದ್ಧತಿಯನ್ನು ಕಲಿಸಿಕೊಡಬೇಕು ಬೀಜಾಮೃತ ಕೃಷಿ ವಿಧಾನವನ್ನು ಉತ್ತಮವಾದ ಮಾಹಿತಿಯನ್ನು ತಿಳಿಸಿದರು ಹಿಂದಿನವರು ಗದ್ದೆ ಕೃಷಿಯನ್ನು ಮಾಡುವಾಗ ಪೂಜ್ಯನೀಯವಾಗಿ ಪ್ರಾರಂಭಿಸುವುದು ನೆನಪಿಸಿ ಕೊಟ್ಟರು ತೆಂಗಿನ ಮರಗಳಿಂದ ಸಿಗುವ ಕಾಯಿಗಳನ್ನು ಉಪಯೋಗಿಸುವ ಜೊತೆಗೆ ಯಾವುದು ನಷ್ಟವಾಗದಂತೆ ಅದರ ಬುಡಕ್ಕೆ ಹಾಕಿ ಉತ್ತಮ ಇಳುವರಿ ಕೊಡುವಂತ ವ್ಯವಸ್ಥೆ ಮಾಡಬಹುದು ಎಂದರು . ರಾಜಸ್ಥಾನದ ಮಧುವನ ದಿಂದ ವಿಶೇಷ ಆಶೀರ್ವಾದ ಪಡೆದುಕೊಂಡಂತಹ ರಾಷ್ಟ್ರೀಯ ಕ್ರೀಡಾಪಟು ತಾರಾ ಬೆಹನ್ ಉಪಸ್ಥಿತರಿದ್ದರು ۔ ಕೆಮ್ಮಣ್ಣು ವಿನ ಬಾಲಕೃಷ್ಣ ,ಸುಮತಿ , ಕಾರ್ತಿಕ್ , ಕಾವ್ಯ ಜಗನಾಥ್ ಕುಂದರ್ ತ್ರಿಕಣ್ಣೇಶ್ವರಿ ವಾಣಿಯ ಸಂಪಾದಕರು ತೇಜಸ್ವಿ ರಾವ್ ಎಲ್ಐಸಿ ಅಧಿಕಾರಿ ಲತಾ ರಾವ್, ಉಡುಪಿ ಸ್ವಚ್ಛಭಾರತ್ ಫ್ರೆಂಡ್ಸ್ ಸಂಘಟನೆಯ ಸದಸ್ಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾಗಿರುವ ಆರೋಗ್ಯ ವಿಮಾ ಸಂಸ್ಥೆಯ ಹಿರಿಯ ಮಾರುಕಟ್ಟೆ ಪ್ರಬಂಧಕ ರಾಗಿರುವ ಜೆಸಿಐ ವಲಯ ಅಧಿಕಾರಿ ಉದಯ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ನೂರಾರು ಮಂದಿ ಕಾರ್ಯಕ್ರಮವನ್ನು ಚಂದ ಕಾಣಿಸಿ ಕೊಟ್ಟರು.
ಬಿ ಕೆ ಮೋಹನ್ ಭಾಯಿ, ಸುಂದರ್ ಇವರಿಂದ ಶುಚಿ-ರುಚಿಯಾದ ಮಸಾಲಪುರಿ ತಿಂಡಿಗಳನ್ನು, ಸಿಹಿ ಹಣ್ಣುಗಳನ್ನು, ತಂಪು ಪಾನೀಯಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಕಿ ಮತ್ತು ಲಕ್ಷ್ಮಿ ಅವರ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡುವ ಮುಖಾಂತರ ಆಚರಿಸಲಾಯಿತು ಕಾರ್ತಿಕ್ ಇವರು ಸ್ವಾಗತಿಸಿ, ಬಿ ಕೆ ಗಾಯತ್ರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು .

 
 
 
 
 
 
 
 
 
 
 

Leave a Reply