ರೇಡಿಯೊ ಮಣಿಪಾಲದಲ್ಲಿ ‘ಚಿಣ್ಣರ ದನಿ’

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ಮತ್ತು ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಹಯೋಗದಲ್ಲಿ ‘ಚಿಣ್ಣರ ದನಿ ಕಾರ್ಯಕ್ರಮ ಆಗಸ್ಟ್ ತಿಂಗಳ ದಿನಾಂಕ 30 ರಂದು ಬುಧವಾರ 5.30ರ ಸಮಯಕ್ಕೆ ಪ್ರಸಾರವಾಗಲಿದೆ. ಆಗಸ್ಟ್ 31 ರಂದು ಗುರುವಾರ ಮಧ್ಯಾಹ್ನ 1.30ಕ್ಕೆ ಇದರ ಮರು ಪ್ರಸಾರವಿರುವುದು.

ಇಂದು ಪ್ರಸಾರವಾಗುವ ಕಾರ್ಯಕ್ರಮದ 23 ನೇ ಸಂಚಿಕೆಯಲ್ಲಿ ಬಾಲ ಪ್ರತಿಭೆ ಮೋನಿಷ್ ಭಾಗವಹಿಸಲಿದ್ದಾರೆ.
ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal
ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply