ತುಳು ಲಿಪಿ ಕಲಿಕಾ ಕಾರ್ಯಾಗಾರ ‌

ಮಾತೃಭಾಷೆ ನೆಲದ ಸಂಸ್ಕೃತಿಯ ಅವಿಭಾಜ್ಯ ಅಂಗ.ಇಂದು ನಾವು ಎರವಲು ಪಡೆದ ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಎಗ್ಗಿಲ್ಲದೆ ಅಪ್ಪಿಕೊಳ್ಳುತ್ತಿರುವ ಪ್ರಸುತ್ತ ಕಾಲಘಟ್ಟದಲ್ಲಿ ತುಳುನಾಡಿನವರಾದ ನಾವೆಲ್ಲ ನೆಲದ ಸಂಸ್ಕೃತಿಯ ನ್ನು ಪ್ರತಿಬಿಂಬಿಸುವ ತುಳು ಮಾತೃಭಾಷೆಯನ್ನು ಉಳಿಸಿ ಬೆಳೆಸುವತ್ತ ಗಮನ ಹರಿಸ ಬೇಕಾಗಿದೆ ಎಂದು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೊಡವೂರು ಪ್ರಕಾಶ್ ಹೇಳಿದರು‌.ಅವರು ಶ್ರೀ ಶಂಕರನಾರಾಯಣ ದೇವಸ್ಥಾನದ ನೇತೃತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ ಸಂಘುಟನೆ ಹಾಗೂ ಕೊಡವೂರು ಹಳೆ ವಿದ್ಯಾರ್ಥಿ ಸಂಘ, ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಜ. 10 ರಂದು ಶ್ರೀ ದೇಗುಲದಲ್ಲಿ ನಡೆದ ತುಳು ಲಿಪಿ ಕಲಿಕಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ದರು. ಸಮ್ಮಾನ, ಗೌರವಾರ್ಪಣೆ. ‌

ತುಳು ಲಿಪಿ ಫಾಂಟ್ ನ ವಿನ್ಯಾಸ ಮಾಡಿ ವಿದ್ಯುನ್ಮಾನ ಮಾಧ್ಯಮದಲ್ಲಿ ತುಳು ಲಿಪಿ ಪ್ರಚುರಪಡಿಸಲು ಕಾರಣ ರಾದ ದೀಪಕ್ ಪಡುಕೋಣೆ ಅವರನ್ನು ಸಮ್ಮಾನಿಸಲಾಯಿತು. ಇತ್ತೀಚೆಗೆ ಬಿಡುಗಡೆಯಾದ ಇರ್ನೂದೆದ ಒಂಜಿ ನೋಟು ತುಳು ಕ್ರತಿಯ ಲೇಖಕಿ ವಾಸಂತಿ ಅಂಬಲಪಾಡಿ ಅವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ತಾರಾ ಉಮೇಶ್ ಆಚಾರ್ಯ, ಮೀನುಗಾರರ ಹಿರಿಯ ಮುಂದಾಳು ಕಾಂತಪ್ಪ ಕರ್ಕೇರ,ಜೈ ತುಳುನಾಡ್ ಸಂಘುಟನೆ ಯ ಅಧ್ಯಕ್ಷ ಸುದರ್ಶನ್ ಸುರತ್ಕಲ್, ಶಿಕ್ಷಕಿ ಮಲ್ಲಿಕಾ ದೇವಿ, ಶಂಕರನಾರಾಯಣ ಭಕ್ತವ್ರಂದದ ಕೋಶಾಧಿಕಾರಿ ರಾಮ ಸೇರಿಗಾರ್, ಕೊಡವೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು.  ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ಜೈ ತುಳುನಾಡ್ ಸಂಘುಟನೆಯ ರಾಜೇಶ್ ತುಳುವೆ, ಕಿರಣ್ ತುಳುವೆ,ತುಳು ಲಿಪಿ ಶಿಕ್ಷಕ ಶರತ್ ಕೊಡವೂರು, ಶಿಕ್ಷಕಿ ಉಜ್ವಲ ಎನ್ ಪೂಜಾರಿ ಉಪಸ್ಥಿತರಿದ್ದರು. ಯಶೋದ ಕೇಶವ್ ಸ್ವಾಗತಿಸಿದರು, ಸ್ವಾತಿ ಸುವರ್ಣ ವಂದಿಸಿದರು. ಸುಷ್ಮಾ ದೇವಾಡಿಗ ನಿರೂಪಿಸಿದರು.

 
 
 
 
 
 
 
 
 
 
 

Leave a Reply