ನವಭಾರತ ಸಾಕ್ಷರತಾ ಕಾರ್ಯಕ್ರಮ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಹದಿನೈದರಿಂದ ಮೂವತ್ತೈದರ ಪ್ರಾಯದಲ್ಲಿರುವ ಅಕ್ಷರಜ್ಞಾನವಂಚಿತರಿಗೆ  ಸಾಕ್ಷರ ಕೌಶಲಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ. ನವಭಾರತ ಸಾಕ್ಷರತಾ ಕಾರ್ಯಕ್ರಮದ ಬಗ್ಗೆ ಮಾಹಿತಿಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಉಡುಪಿ ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಶ್ರೀ ಯೋಗಾನರಸಿಂಹ ಸ್ವಾಮಿ ಮತ್ತು ಕಾರ್ಯಕ್ರಮ ಸಹಾಯಿಕೆ ಶ್ರೀ ಮತಿ ಶ್ವೇತಾ ಸಂಪನ್ಮೂಲ ವ್ಯಕ್ತಿ ಗಳಾಗಿ ವಿದ್ಯಾರ್ಥಿ- ಶಿಕ್ಷಕರಿಗೆ ಸೂಕ್ತ ಮಾಹಿತಿ ನೀಡಿದರು. ವಿದ್ಯಾರ್ಥಿ ಶಿಕ್ಷಕರು   ತಮ್ಮ ವ್ಯಾಸಂಗ ಮುಗಿಸುವುದರೊಳಗೆ ತಲಾ ಐವರು ವ್ಯಕ್ತಿಗಳನ್ನು ಸಾಕ್ಷರರನ್ನಾಗಿಸಬೇಕು.ಅದಕ್ಕೆ ಬೇಕಾದ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ದೇಶದಲ್ಲಿ ವಯಸ್ಕಶಿಕ್ಷಣ ಹಾಗೂ ಸಂಪೂರ್ಣ ಸಾಕ್ಷರತಾ ಆಂದೋಲನ ಮತ್ತು ಮುಂದುವರಿದ ಕಲಿಕೆ ಕೇಂದ್ರಗಳ  ದಯನೀಯತೆಯ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದರು.ಶ್ರೀ ಮತಿ ಧನಲಕ್ಷ್ಮೀ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ಕಾರ್ಯಕ್ರಮದ ಉದ್ದೇಶ ನಿರೂಪಿಸಿದರು.ಆಶ್ರಿತಾ ಕೆಜಿ ಧನ್ಯವಾದ ಸಲ್ಲಿಸಿದರು ಸುಮಂತ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply