ಯುವ ಸಂಘಟನೆಗಳು ಸಮಾಜದ ದೀನದುರ್ಬಲರ ನೋವಿಗೆ ಧ್ವನಿಯಾಗಬೇಕು – ಮೊಗವೀರ ಮುಖಂಡ ರಮೇಶ್ ಕಿದಿಯೂರ್

ಯುವ ಸಂಘಟನೆಗಳು ಸಮಾಜದ ದೀನದುರ್ಬಲರ ನೋವಿಗೆ ಧ್ವನಿ ಯಾದಾಗ ಮಾತ್ರ ಹಿಂದುಳಿದ ವರ್ಗವನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಎಂದು ಉಡುಪಿ ಜಿಲ್ಲಾ ಮೋಗವೀರ ಯುವ ಸಂಘಟನೆಯ ಸ್ಥಾಪಕ ಉಪಾಧ್ಯಕ್ಷ ರಮೇಶ್ ಕಿದಿಯೂರ್ ತಿಳಿಸಿದ್ದಾರೆ. ಕಟಪಾಡಿಯ ಕೋಟೆ ಮೆಂಡನ್ ಮೂಲಸ್ಥಾನದ ಸಭಾಂಗಣದಲ್ಲಿ ನೂತನವಾಗಿ ಸ್ಥಾಪನೆಗೊಂಡ ಕೋಟೆ ಮೊಗವೀರ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಕರಾವಳಿಯ ಮೊಗವೀರರು ಆರ್ಥಿಕವಾಗಿ ಕೊಂಚ ಸಬಲರಾಗಿದ್ದರೂ ಒಳನಾಡಿನಲ್ಲಿ ವಾಸವಿರುವ ಅನೇಕ ಮೊಗವೀರರು ಸೂಕ್ತ ಸಂಘಟನಾ ಶಕ್ತಿಯ ಕೊರತೆಯಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು. ಕಟಪಾಡಿಯ ಉದ್ಯಮಿ ಶೇಖರ್ ಅಮೀನ್ ಕೋಟೆ ಕೋಟೆ ಮೋಗವೀರ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ಜನರನ್ನು ಮುಂಚೂಣಿಗೆ ತರುವಲ್ಲಿ ಸಂಘಟನೆಗಳು ಪ್ರಬಲವಾಗಿ ಕೆಲಸಮಾಡಬೇಕು ಎಂದರು. ಕಟಪಾಡಿ ಕೋಟೆ ಮೋಗವೀರ ಸಮಿತಿಯ ಉಪಾಧ್ಯಕ್ಷ ಚಂದ್ರಹಾಸ ಕೋಟ್ಯಾನ್ ಕೋಟೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಗಿ ಆಯ್ಕೆಯಾದ ಯೋಗೀಶ್ ವಿ.ಸುವರ್ಣ ಮಟ್ಟು ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಗೌರವಾಧ್ಯಕ್ಷ ಸಂಜೀವ ಕೆ. ಮೆಂಡನ್ , ಪಿತ್ರೋಡಿ ಮೊಗವೀರ ಹದಿನಾಲ್ಕು ಪಟ್ಣ ಬೊಬ್ಬರ್ಯ ದೈವಸ್ಥಾನದ ಮೊಕ್ತೇಸರ ಸದಾರಾಮ ಮೆಂಡನ್, ಹಿರಿಯರಾದ ಸಂಜೀವ ಡಿ.ಮೆಂಡನ್, ಕಾರ್ಯದರ್ಶಿ ನಾಗೇಶ್ ಮೆಂಡನ್, ಕೋಶಾಧಿಕಾರಿ ಉಮಾನಾಥ್ ಅಮೀನ್,ನಿತೇಶ್ ಶ್ರೀಯಾನ್,ಸಲಹಾಸಮಿತಿ ಸದಸ್ಯರಾದ ಪ್ರವೀಣ್ ಕಾಂಚನ್,ಸಂದೇಶ್ ಆರ್. ಕೋಟ್ಯಾನ್,ಸೋಮನಾಥ್, ಮಧುಕರ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ರಾಕೇಶ್ ಮೆಂಡನ್ ಸ್ವಾಗತಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಜತೆಕಾರ್ಯದರ್ಶಿ ಆಕರ್ಷ್ ಅಮೀನ್ ವಂದಿಸಿದರು.

 
 
 
 
 
 
 
 
 
 
 

Leave a Reply