ಚಾಟಿಂಗ್ ವಿಚಾರದಲ್ಲಿ ಗಲಾಟೆ – ಯುವತಿ ಅನುಮಾನಾಸ್ಪದ ಸಾವು

ಯುತಿಯೊಬ್ಬಳ ಮೃತದೇಹ ತಾಲೂಕಿನ ಶಿಗಿಕೇರಿ ಕ್ರಾಸ್‍ನ ಸೇತುವೆ ಬಳಿಯ ಪೊದೆಯಲ್ಲಿ ಸಿಕ್ಕಿದೆ. ಅನುಮಾನಾಸ್ಪದವಾಗಿ ಮೃತದೇಹ ಸಿಕ್ಕಿದ್ದು, ಯುವತಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಮೃತ ಯುವತಿಯನ್ನು ಇಳಕಲ್ಲ್‌ ಮೂಲದ ಸುಮನ್ ಮನೋಹರ್ ಪತ್ತಾರ (22) ಎಂದು ಗುರುತಿಸಲಾಗಿದೆ. ಆಕೆ ನಗರದ ಹಾಸ್ಟೆಲ್‍ನಲ್ಲಿ ಇದ್ದುಕೊಂಡು 3ನೇ ವರ್ಷದ ಫಿಜಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದಳು. ಎರಡು ದಿನಗಳ ಹಿಂದೆ ಹಾಸ್ಟೆಲ್‍ನಿಂದ ಹೊರಗೆ ಹೋಗಿದ್ದವಳು ವಾಪಸ್ ಆಗಿರಲಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಆಕೆಯ ಪೋಷಕರು ಈ ಬಗ್ಗೆ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇನ್ನೂ ಮೃತ ಸುಮನ್ ಸ್ನೇಹಿತೆಯ ಪ್ರಿಯಕರನೊಂದಿಗೆ ಚಾಟಿಂಗ್ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಈ ವಿಷಯ ಸ್ನೇಹಿತೆಗೆ ಗೊತ್ತಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ.

ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಅನ್ವಯ ಪ್ರಕರಣದ ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಅಮರನಾಥ್ ರೆಡ್ಡಿ ತಿಳಿಸಿದ್ದಾರೆ.

 
 
 
 
 
 
 
 

Leave a Reply