“ವೇದ ವಾಂಗ್ಮಯದ ಸಾರ್ವಕಾಲಿಕತೆ” ಎಂಬ ವಿಷಯದ ರಾಷ್ಟ್ರೀಯ ವಿಚಾರ ಗೋಷ್ಠಿ

ಸೋದೆ ವಾದಿರಾಜ ಮಠದ ಅಂಗಸಂಸ್ಥೆಯಾದ ಶ್ರೀಭಾವಿಸಮೀರ ತತ್ವಪ್ರಸಾರಣ ಪ್ರತಿಷ್ಠಾನ ಹಾಗೂ ಯೋಗ ಕ್ಷೇಮ ಟ್ರಸ್ಟ್ ಚೆನ್ನೈ ಇದರ ಸಹಯೋಗದಲ್ಲಿ ಸೋದೆ ಶ್ರೀವಾದಿರಾಜ ಮಠದಲ್ಲಿ ಸೋದೆ ಶ್ರೀವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರ , ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥರ ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ “ವೇದ ವಾಂಗ್ಮಯದ ಸಾರ್ವಕಾಲಿಕತೆ” ಎಂಬ ವಿಷಯದಲ್ಲಿ ಆಗಸ್ಟ್ 25 ರಂದು ಮೂರು ದಿವಸದ ರಾಷ್ಟ್ರೀಯ ವಿಚಾರ ಗೋಷ್ಠಿಯು ನಡೆಯಿತು. ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಇಂಡಿಯನ್ ಕೌನ್ಸಿಲ್ ಆಫ್ ಫಿಲಾಸಫಿಕಲ್ ರಿಸರ್ಚ್ ನ ಮೆಂಬರ್ ಸೆಕ್ರೆಟರಿ ಶ್ರೀ ಪ್ರೊ.ಸಚ್ಚಿದಾನಂದ ಮಿಶ್ರ ಭಾಗವಹಿಸಿದರೆ , ದೆಹಲಿಯ ಸಂಸ್ಕೃತ ಅಕಾಡಮಿಯ ಮಾಜಿ ಕಾರ್ಯದರ್ಶಿಗಳಾದ ಡಾ.ಧರ್ಮೇಂದ್ರ ಕುಮಾರ್ ಮುಖ್ಯ ಭಾಷಣವನ್ನು ಮಾಡಿದರು. ಮಣಿಪಾಲ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅರ್ಜುನ ಕಂಗಿನ್ನಾಯ ಉಪನ್ಯಾಸ ನೀಡಿದರು. ಚೆನ್ನೈನ ಲೋಯ್ಲಾ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಹಾಗೂ ವಿಚಾರ ಗೋಷ್ಠಿ ಸಮಿತಿಯ ಕಾರ್ಯದರ್ಶಿಗಳಾದ ಡಾ. ಕೆ. ಎಸ್. ಸುಮನ್ ಆಚಾರ್ಯರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿ ವಿದ್ವಾನ್ ವಿಷ್ಣು ಹತ್ವಾರ್ ಕಾರ್ಯಕ್ರಮವನ್ನು ನಿರೂಪಿಸಿ , ವಿದ್ವಾನ್ ಸಂಕರ್ಷಣ ಅಡಿಗ ಧನ್ಯವಾದ ಸಮರ್ಪಿಸಿದರು.

 
 
 
 
 
 
 
 
 
 
 

Leave a Reply